Advertisement

ಕರಟುತ್ತಿದೆ ಬಂಗಾರದಂತಹ ಅಡಿಕೆ ಹಿಂಗಾರ

07:16 AM Apr 23, 2019 | mahesh |

ಪುತ್ತೂರು: ಕರಾವಳಿ ಭಾಗದಲ್ಲಿ ಉಷ್ಣತೆಯ ಪ್ರಮಾಣ 35 ಡಿಗ್ರಿ ಸೆಲ್ಸಿಯಸ್‌ ಮೀರಿ ಸಾಗುತ್ತಿದೆ. ಇದರ ಪ್ರತಿಫಲವಾಗಿ ಬಂಗಾರದಂತೆ ಕಂಗೊಳಿಸುತ್ತಿದ್ದ ಅಡಿಕೆ ಹಿಂಗಾರ ಅವಧಿಗೆ ಮೊದಲೇ ಒಡೆದು ಅಡಿಕೆ ನಳ್ಳಿ ಬೆಳೆಯುವ ಮೊದಲೇ ಕರಟುತ್ತಿದೆ.

Advertisement

ಗಿಡವೊಂದರ ಆರೋಗ್ಯದ ಉಷ್ಣತೆಯಲ್ಲಿ ಏರುವೇರಾಗುವುದನ್ನು ವೈಜ್ಞಾನಿಕ ಭಾಷೆಯಲ್ಲಿ ‘ಹೋಮಿಯೋಸ್ಟಟಿಸ್‌’ ಎನ್ನುತ್ತಾರೆ. ಉಷ್ಣತೆ ಹೆಚ್ಚಾಗುವ ಹಂತದಲ್ಲಿ ಗಿಡದ ಸ್ವಾಭಾವಿಕ ಕ್ರಿಯೆ ಅಥವಾ ಬೆಳವಣಿಗೆ ತಟಸ್ಥಗೊಳ್ಳುತ್ತದೆ. ಕನಿಷ್ಠ 14ರಿಂದ 18 ಡಿಗ್ರಿ ಸೆಲ್ಸಿಯಸ್‌ ಹಾಗೂ ಗರಿಷ್ಠ 30ರಿಂದ 35 ಡಿಗ್ರಿ ಸೆ. ತಾಪಮಾನವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಅಡಿಕೆ ಗಿಡಗಳು ಹೊಂದಿವೆ. ಇದಕ್ಕಿಂತ ಹೆಚ್ಚು ತಾಪಮಾನ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ನೀರಿನ ಪ್ರಮಾಣ ಬಹುತೇಕ ಕಡಿಮೆಯಾಗಿದ್ದರಿಂದ ಉರಿಬಿಸಿಲಿನ ವಾತಾವರಣ ಅಡಿಕೆ ಗಿಡಗಳ ಸ್ವಾಭಾವಿಕ ಕ್ರಿಯೆಗಳಿಗೆ ತೊಡಕಾಗಿದೆ.

ನಿಗದಿತ ತಾಪಮಾನ ಮತ್ತು ಸಾಕಷ್ಟು ನೀರು ಗಿಡಕ್ಕೆ ಲಭ್ಯವಾಗದಿದ್ದರೆ ಹೋಮಿಯೋಸ್ಟಟಿಸ್‌ ಬಾಧೆ ತಗಲುತ್ತದೆ. ಈ ಬಾಧೆ ಹಸಿರೆಲೆ ಹೊಂದಿರುವ ಎಲ್ಲ ಸಸ್ಯವರ್ಗಕ್ಕೂ ಬಾಧಿಸುವುದಿದ್ದರೂ ಕರಾವಳಿಯ ಪ್ರಮುಖ ವಾಣಿಜ್ಯ ಬೆಳೆ ಅಡಿಕೆಗೆ ಮಾರಕವಾಗಿ ಪರಿಣಮಿಸಿರುವುದು ಬೆಳೆಗಾರರಿಗೆ ತಲೆನೋವು ತಂದಿರಿಸಿದೆ.

ಪರಿಣಾಮವೇನು?
ಸಾಮಾನ್ಯವಾಗಿ ಅಡಿಕೆ ಮರ ಎಪ್ರಿಲ್, ಮೇ ತಿಂಗಳಲ್ಲಿ ಹಿಂಗಾರ ಒಡೆದು ನೈಸರ್ಗಿಕವಾಗಿ ಅಡಿಕೆ ನಳ್ಳಿಗಳು ಬೆಳೆಯಲಾರಂಭಿಸುತ್ತವೆ. ಆದರೆ ಉಷ್ಣತೆಯ ತೀವ್ರತೆಯ ಬಾಧೆಗೊಳಗಾದ ಅಡಿಕೆ ಮರಗಳಲ್ಲಿ ನಿಗದಿತ ಸಮಯದ ಮುನ್ನವೇ ಹಿಂಗಾರ ಒಡೆದು ಹಾಳೆ ಸೀಳುತ್ತದೆ. ಅನಂತರ ಚಿಗುರುವ ಅಡಿಕೆ ನಳ್ಳಿಗಳು ಬಿಸಿಲ ತಾಪಮಾನ ತಡೆದುಕೊಳ್ಳದೆ ಕರಟಿ ಹೋಗುತ್ತಿವೆ.

ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯ ಭಾಗದ ಅಡಿಕೆ ತೋಟಗಳಲ್ಲಿ ಈ ಬಾಧೆ ಕಾಣಿಸಿಕೊಂಡಿದ್ದು, ಮಳೆ ಅಥವಾ ಉಷ್ಣತೆಯ ಇಳಿಕೆಯನ್ನು ಹೊರತುಪಡಿಸಿದ ಔಷದ ಇದಕ್ಕೆ ಇಲ್ಲ. ಸಮತಟ್ಟು ನೆಲ ಹಾಗೂ ನೀರು ರಹಿತ ಇಳಿಜಾರು ಪ್ರದೇಶದಲ್ಲಿ ಬೆಳೆದ ಅಡಿಕೆ ತೋಟಗಳಲ್ಲಿ ಈ ಬಾಧೆ ಹೆಚ್ಚಾಗಿ ಕಂಡುಬಂದಿದೆ.

Advertisement

ಚೇತರಿಕೆಗೆ ಬೇಕು ಸಮಯ
ಹೋಮಿಯೋಸ್ಟಟಿಸ್‌ ಬಾಧೆ ಅಥವಾ ಅಡಿಕೆ ಎಳೆಗಳು ಬಿಸಿಲಿಗೆ ಕೆಂಪಾಗುವುದರಿಂದ ಅಡಿಕೆ ಮರಗಳು ಸಾಯುವುದಿಲ್ಲ. ಆದರೆ ಬೆಳವಣಿಗೆ ಕುಂಠಿತವಾಗುತ್ತದೆ. ಆರೋಗ್ಯ ತೊಂದರೆಗೊಳಗಾದ ಅಡಿಕೆ ಮರಗಳು ಚೇತರಿಸಿಕೊಳ್ಳಲು ಎರಡರಿಂದ ಮೂರು ವರ್ಷಗಳು ಬೇಕಾಗುತ್ತವೆ ಎನ್ನುವುದು ಕೃಷಿ ತಜ್ಞರ ಅಭಿಪ್ರಾಯ.

ಹೊಸ ತಳಿಗಳಿಗೆ ಸಾಮರ್ಥ್ಯವಿಲ್ಲ
ಕರಾವಳಿ ಭಾಗದಲ್ಲಿನ ತಳಿಗಳ ಅಡಿಕೆ ಮರಗಳಿಗೆ 35 ಡಿಗ್ರಿ ಸೆ. ತನಕದ ಉಷ್ಣಾಂಶ ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ಆದರೆ ಹೊಸದಾಗಿ ಬಂದಿರುವ ಅಡಿಕೆ ತಳಿಗಳಿಗೆ ಅಷ್ಟೊಂದು ಸಾಮರ್ಥ್ಯವಿಲ್ಲ. ಸಸ್ಯದ ದೇಹದ ಉಷ್ಣತೆಯಲ್ಲಿ ಏರುಪೇರಾಗುವ ಬಾಧೆ ಇದು. ಇದರ ಪರಿಹಾರಕ್ಕಾಗಿ ಮಳೆ ಸುರಿದು ಉಷ್ಣತೆಯ ವಾತಾವರಣ ಕಡಿಮೆಯಾಗಬೇಕು.
ನಿಖಿತಾ ಎನ್‌. ಕೆ. ಪರಿಸರ ವಿಜ್ಞಾನ ಸಂಶೋಧಕಿ, ಮಂಗಳೂರು

ಉತ್ತಮ ಮಳೆಯೊಂದೇ ಪರಿಹಾರ
ಹೊಸ ತಳಿಗಳಿಗೆ ಸಾಮರ್ಥ್ಯವಿಲ್ಲಕರಾವಳಿ ಭಾಗದಲ್ಲಿನ ತಳಿಗಳ ಅಡಿಕೆ ಮರಗಳಿಗೆ 35 ಡಿಗ್ರಿ ಸೆ. ತನಕದ ಉಷ್ಣಾಂಶ ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ಆದರೆ ಹೊಸದಾಗಿ ಬಂದಿರುವ ಅಡಿಕೆ ತಳಿಗಳಿಗೆ ಅಷ್ಟೊಂದು ಸಾಮರ್ಥ್ಯವಿಲ್ಲ. ಸಸ್ಯದ ದೇಹದ ಉಷ್ಣತೆಯಲ್ಲಿ ಏರುಪೇರಾಗುವ ಬಾಧೆ ಇದು. ಇದರ ಪರಿಹಾರಕ್ಕಾಗಿ ಮಳೆ ಸುರಿದು ಉಷ್ಣತೆಯ ವಾತಾವರಣ ಕಡಿಮೆಯಾಗಬೇಕು. – ನಿಖೀತಾ ಎನ್‌. ಕೆ. ಪರಿಸರ ವಿಜ್ಞಾನ ಸಂಶೋಧಕಿ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next