ಶಿವಮೊಗ್ಗ: ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಅಭಯ ನೀಡಿರುವುದರಿಂದ ಅಡಿಕೆ ಬೆಳೆಗಾರರು ಆತಂಕ ಪಡುವ ಆವಶ್ಯಕತೆ ಇಲ್ಲ ಎಂದು ಅಡಿಕೆ ಕಾರ್ಯಪಡೆ (ಟಾಸ್ಕ್ ಪೋ ರ್ಸ್) ಅಧ್ಯಕ್ಷ ಮತ್ತು ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಇತ್ತೀಚೆಗೆ ಅಡಿಕೆಗೆ ಸಂಬಂ ಧಿಸಿ ವದಂತಿಗಳು ಹಬ್ಬು ತ್ತಿವೆ. ಆದರೆ ಬೆಳೆಗಾರರು ಆತಂಕ ಪಡಬೇಕಾಗಿಲ್ಲ. ಶಾಸಕರು ಮತ್ತು ಅಡಿಕೆ ಸಂಸ್ಥೆಗಳ ಮುಖಂಡರ ಜತೆ ಗೂಡಿ ಸಿಎಂ ಜತೆ ಚರ್ಚಿಸಿದ್ದೇವೆ. ಸಿಎಂ ಅಭಯ ನೀಡಿದ್ದಾರೆ ಎಂದವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನ್ಯಾಯಾಲಯದಲ್ಲಿ ಇರುವ ಪ್ರಕರಣವನ್ನು ವಿ.ವಿ. ತಜ್ಞರ ವರದಿ ಬರುವ ತನಕ ಮುಂದಕ್ಕೆ ಹಾಕುವಂತೆ ಮನವಿ ಮಾಡಿದ್ದೇವೆ. ಸಮಿತಿ ನೀಡುವ ವರದಿ ಆಧಾರದಲ್ಲಿ ನ್ಯಾಯಾಲಯದಲ್ಲಿ ಕೇಸು ಮುಂದುವರಿಸಿ ಅಡಿಕೆ ಬೆಳೆ ಹಾನಿಕಾರಕ ಅಲ್ಲ ಎಂಬುದನ್ನು ಸಾಬೀತು ಪಡಿಸುತ್ತೇವೆ.
ಬೆಳೆಗಾರರಿಗೆ ರಕ್ಷಣೆ ನೀಡುತ್ತೇವೆ. ವದಂತಿಗೆ ಕಿವಿಗೊಡಬಾರದು. ಮಲೆನಾಡು ಭಾಗದಲ್ಲಿ ಕಸ್ತೂರಿ ರಂಗನ್ ವರದಿ ಜಾರಿಯಾದರೆ ಸುಮಾರು 166 ಗ್ರಾಮಗಳ ಜನರಿಗೆ ಸಂಕಷ್ಟ ಎದುರಾಗಲಿದೆ. ಹಾಗಾಗಿ ಇದನ್ನು ವಿರೋಧಿಸು ತ್ತಲೇ ಬಂದಿದ್ದೇವೆ ಎಂದರು. ಸಿಎಂ ಯಡಿಯೂರಪ್ಪ ಅವರು ಕೇಂದ್ರ ಸಚಿವರೊಂದಿಗೆ ಮಾತನಾಡಿದ್ದು, ನಮ್ಮ ಒಪ್ಪಿಗೆ ಇಲ್ಲದೆ ಜಾರಿಗೆ ತರಬಾರದು ಎಂದಿದ್ದಾರೆ ಎಂದರು. ಕ್ಯಾಂಪ್ಕೋ ಅಧ್ಯಕ್ಷ ಸತೀಶ್‌ಚಂದ್ರ, ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭ, ತುಮ್ಕೋಸ್ ಮಾಜಿ ಅಧ್ಯಕ್ಷ ಶಿವಕುಮಾರ್, ದಯಾನಂದ್ ಇದ್ದರು.
ಅಡಿಕೆಗೆ ಸಂಬಂಧಿಸಿ ಸಿಗರೇಟ್ ಕಂಪೆನಿಗಳು ಲಾಬಿ ಮಾಡುತ್ತಿರುವುದು ನಿಜ. ಇದರ ಜತೆಗೆ ಹಿಂದಿನ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿ ಅಡಿಕೆ ಹಾನಿಕರ ಬೆಳೆ ಎಂದಿತ್ತು. ಈಗ ಅದು ನ್ಯಾಯಾಲಯದಲ್ಲಿದೆ. ಅದಕ್ಕಾಗಿ ನ್ಯಾಯಾಲಯಕ್ಕೆ ಹೋಗುವುದು ಅನಿವಾರ್ಯವಾಗಿದೆ. ಇದಕ್ಕಾಗಿಯೇ ತಜ್ಞರ ನೆರವು ಪಡೆದಿದ್ದೇವೆ. ರಾಮಯ್ಯ ವಿ.ವಿ. ಇದನ್ನು ಕೈಗೆತ್ತಿಕೊಂಡಿದೆ. ಇದಕ್ಕಾಗಿ 2 ಕೋಟಿ ರೂ. ಹಣ ಅಗತ್ಯವಿದ್ದು, ಸಿಎಂ ನೀಡುವ ಭರವಸೆ ನೀಡಿದ್ದಾರೆ.
– ಆರಗ ಜ್ಞಾನೇಂದ್ರ, ಶಾಸಕರು