Advertisement
ನಾಲ್ಕಾರು ತಿಂಗಳಿನಿಂದ ಕಿನ್ನಿಗೋಳಿಯ ತಾಳಿಪಾಡಿ ನೇಕಾರರ ಸೇವಾ ಸಹಕಾರಿ ಸಂಘದ ಆಶ್ರಯದಲ್ಲಿ ನೇಕಾರರು ಕೈಮಗ್ಗದ ಬಟ್ಟೆಗಳಿಗೆ ಅಡಿಕೆ ಚೊಗರಿನ ಬಣ್ಣ ನೀಡುವ ಪ್ರಯೋಗ ದಲ್ಲಿ ತೊಡಗಿಸಿಕೊಂಡಿದ್ದು ಯಶ ಸಾಧಿಸಿದ್ದಾರೆ.
ತಾಳಿಪಾಡಿ ಸಂಘವು ಅಡಿಕೆಯ ಚೊಗರು ಬಳಸಿಕೊಂಡು ಕಂದು, ಕೆಂಪು ಸಹಿತ ನಾಲ್ಕಾರು ಛಾಯೆ ಗಳುಳ್ಳ ಸೀರೆಗಳನ್ನು ಸಿದ್ಧಪಡಿಸಿದೆ. ಒಂದೇ ದ್ರಾವಣವನ್ನು 2-3 ಬಾರಿ ಬಳಸಬಹುದು. ಪರಿಸರ ಸ್ನೇಹಿಯಾಗಿರುವ ಇದರಲ್ಲಿ ನೂಲನ್ನು ಪ್ರತೀ ಬಾರಿ ಸಂಸ್ಕರಿಸಿದಾಗಲೂ ಛಾಯೆ ಬದಲಾಗುತ್ತದೆ ಎನ್ನುತ್ತಾರೆ ಕದಿಕೆ ಟ್ರಸ್ಟ್‌ನ ಮಮತಾ ರೈ.
Related Articles
Advertisement
ನೈಸರ್ಗಿಕ ಬಣ್ಣ ಬಳಕೆ ಬಗ್ಗೆ ನಬಾರ್ಡ್ ಹಾಗೂ ಇತರ ಸಂಸ್ಥೆಗಳಿಂದ ನೇಕಾರರಿಗೆ ನಿರಂತರ ತರಬೇತಿ ನೀಡಲಾಗುತ್ತಿದೆ. ಈಗ ಪೂರ್ಣ ಪ್ರಮಾಣದಲ್ಲಿ ಒಮ್ಮೆ ಅಡಿಕೆ ಚೊಗರಿನ ಸೀರೆ ತಯಾರಿಸುತ್ತಿದ್ದು, ಗ್ರಾಹಕರಿಂದ ಈಗಾಗಲೇ ಬೇಡಿಕೆ ವ್ಯಕ್ತವಾಗಿದೆ. ಸದ್ಯದಲ್ಲೇ ಮಾರುಕಟ್ಟೆಗೆ ತರಲಿದ್ದೇವೆ.– ಮಾಧವ ಶೆಟ್ಟಿಗಾರ್, ಅಧ್ಯಕ್ಷರು ತಾಳಿಪಾಡಿ ನೇಕಾರರ ಸೇವಾ ಸಹಕಾರಿ ಸಂಘ ಏನಿದು ಅಡಿಕೆ ಚೊಗರು?
ಮಲೆನಾಡಿನ ಭಾಗಗಳಲ್ಲಿ (ಮುಖ್ಯವಾಗಿ ಶಿರಸಿ, ಸಿದ್ದಾಪುರ, ಯಲ್ಲಾಪುರ, ಸಾಗರ ತಾಲೂಕು) ಅಡಿಕೆ ಸಂಸ್ಕರಣೆ ವೇಳೆ ಉತ್ಪಾದನೆ ಯಾಗುವ ದ್ರವರೂಪದ ಪದಾರ್ಥವಿದು. ಬಿಸಿಲಿಗಿಟ್ಟು ಒಣಗಿಸಿದಾಗ ಮಂದರೂಪಕ್ಕೆ ಬರುತ್ತದೆ. ಗಾಢ ಕಂದು ಬಣ್ಣ. ಚೊಗರನ್ನು ಪುಡಿ ರೂಪಕ್ಕೆ ಪರಿವರ್ತಿಸಿ ದಾಸ್ತಾನು ಮಾಡಲಾಗುತ್ತದೆ. ಇದು ಸುದೀರ್ಘ ಕಾಲ ಬಣ್ಣ ಕಳೆದುಕೊಳ್ಳದಿರುವ ಕಾರಣ ನೈಸರ್ಗಿಕ ಬಣ್ಣವಾಗಿ ಹೆಚ್ಚಿನ ಮನ್ನಣೆ ಪಡೆದಿದೆ ಎನ್ನುತ್ತಾರೆ ಹಿರಿಯ ಕೃಷಿ ಪತ್ರಕರ್ತ ಶ್ರೀ ಪಡ್ರೆ. ವೇಣುವಿನೋದ್ ಕೆ.ಎಸ್.