Advertisement
ಶಾಸಕ ಸಂಜೀವ ಮಠಂದೂರು, ಉಪವಿಭಾಗಾಧಿಕಾರಿ ಡಾ| ಯತೀಶ್ ಉಳ್ಳಾಲ್, ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ನೇತೃತ್ವದಲ್ಲಿ ಬುಧವಾರ ವರ್ತಕರ ಸಭೆ ನಡೆಸಲಾಯಿತು.
ಎಪಿಎಂಸಿಯಲ್ಲಿ ವರ್ತಕರ ವಾರ್ಡ್ ಇದೆ. ಆದರೆ ಖಾಸಗಿ ವರ್ತಕರಿಗೆ ಅಡಕೆ ಖರೀದಿಗೆ ಅವಕಾಶ ನೀಡಬೇಕಾದರೆ ಜಿಲ್ಲಾಧಿಕಾರಿಯ ಅನುಮತಿ ಅಗತ್ಯ. ಜತೆಗೆ ಪೊಲೀಸರ ಸಹಕಾರವೂ ಬೇಕಾಗಿದೆ. ಈ ಹಿನ್ನೆ°ಲೆಯಲ್ಲಿ ಉಪವಿಭಾಗಾಧಿಕಾರಿ, ಪುತ್ತೂರು ಡಿವೈಎಸ್ಪಿ ದಿನಕರ್ ಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ ಹಾಗೂ ಎಪಿಎಂಸಿ ಅಧ್ಯಕ್ಷರು, ಕಾರ್ಯದರ್ಶಿ ಅವರು ಅಡಕೆ ಖರೀದಿ ವಿಚಾರದ ಕುರಿತು ಯೋಜನೆಯನ್ನು ತಯಾರಿಸಿ ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಬೇಕು. ಮುಂದಿನ ಮೂರು ದಿನಗಳಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು.
Related Articles
ತಾಲೂಕಿನಲ್ಲಿ ಹಲವಾರು ಅಡಕೆ ಗಾರ್ಬಲ್‌ಗಳಿವೆ. ಇಲ್ಲಿ ಹೆಚ್ಚು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿರುವ ಕಾರಣ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟ. ಹಾಗಾಗಿ ಗಾರ್ಬಲ್ ವ್ಯವಸ್ಥೆಯನ್ನು ಎಪಿಎಂಸಿ ಕಾರ್ಯದರ್ಶಿ ಪರಿಶೀಲಿಸಿ ಉಪವಿಭಾಗಾಧಿಕಾರಿಗೆ ವರದಿ ಸಲ್ಲಿಸ ಬೇಕು. ಬಳಿಕ ಗಾರ್ಬಲ್ ವ್ಯವಸ್ಥೆಯ ಆರಂಭ ಬಗ್ಗೆ ಚಿಂತಿಸ ಲಾಗುವುದು ಎಂದು ಶಾಸಕರು ತಿಳಿಸಿದರು.
Advertisement
ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬೂಡಿಯಾರ್ ರಾಧಾಕೃಷ್ಣ ರೈ, ಎಪಿಎಂಸಿ ಕಾರ್ಯದರ್ಶಿ ರಾಮಚಂದ್ರ, ವರ್ತಕ ಪ್ರತಿನಿಧಿ ಅಬ್ದುಲ್ ಶಕೂರ್ ಹಾಜಿ, ವರ್ತಕ ಮುಖಂಡರಾದ ಶಶಾಂಕ ಕೊಟೇಚ, ಭವಿನ್ ಶೇಟ್ ಕೋಡಿಂಬಾಡಿ, ಅಬೂಬಕ್ಕರ್ ಸಿದ್ದೀಕ್, ರವೀಂದ್ರನಾಥ ರೈ ಮತ್ತಿತರರಿದ್ದರು.