Advertisement
ಹೊಸ ವರ್ಷದ ಆರಂಭದಲ್ಲಿ ಹೊಸ ಮತ್ತು ಹಳೆ ಅಡಿಕೆ ಧಾರಣೆ ಏರಿಳಿಕೆಯಿಂದ ಬೆಳೆಗಾರರಿಗೆ ನಿರಾಶೆ ಮೂಡಿಸಿತ್ತು. ಆದರೆ ಈಗ ಧಾರಣೆ ಚೇತರಿಸುತ್ತಿರುವುದು ಬೆಳೆಗಾರರಲ್ಲಿ ತುಸು ನೆಮ್ಮದಿ ತಂದಿದೆ.
ಪುತ್ತೂರು ಕ್ಯಾಂಪ್ಕೋದಲ್ಲಿ 2019ರ ಆಗಸ್ಟ್‌ನಲ್ಲಿ ಹಿಂದಿನ ವರ್ಷದ ಕೊಯ್ಲಿನ (ಸಿಂಗಲ್ ಚೋಲ್) ಅಡಿಕೆಗೆ ಕೆ.ಜಿ.ಗೆ 260 ರೂ., ಹೊರ ಮಾರುಕಟ್ಟೆಯಲ್ಲಿ 268 ರೂ. ತನಕ ಇತ್ತು. ನವೆಂಬರ್‌ನಲ್ಲಿ ಅದೇ ಅಡಿಕೆಗೆ ಕೆ.ಜಿ.ಗೆ 290-295 ತನಕ ಇದೆ. ಹೊರ ಮಾರುಕಟ್ಟೆಯಲ್ಲಿ 300 ರೂ. ತನಕವು ಖರೀದಿ ಆಗಿದೆ. ಈ ಅಂಕಿಅಂಶ ಗಮನಿಸಿದರೆ 3 ತಿಂಗಳಲ್ಲಿ ಕಳೆದ ಕೊಯ್ಲಿನ ಅಡಿಕೆ 30ರಿಂದ 35 ರೂ. ತನಕ ಧಾರಣೆ ಏರಿಸಿಕೊಂಡಿದೆ. ಎಪ್ರಿಲ್-ನವೆಂಬರ್ ನಡುವಿನ ಧಾರಣೆ ಗಮನಿಸಿದರೆ 65ರಿಂದ 70 ರೂ.ಗಳಷ್ಟು ಏರಿಕೆ ಕಂಡಿದೆ. ಆಗಸ್ಟ್‌ನಲ್ಲಿ ಡಬ್ಬಲ್ ಚೋಲ್ 300ರಿಂದ 305 ರೂ.ಗಳಿಂದ ತನಕ ಖರೀದಿಸಲಾಗಿತ್ತು. ಈಗಲೂ 300 ರೂ. ಆಸುಪಾಸಿನಲ್ಲಿ ಇದ್ದು, ಡಬ್ಬಲ್ ಚೋಲ್ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬಂದಿಲ್ಲ. ಹೊಸ ಅಡಿಕೆ ಜಿಗಿತ ನಿರೀಕ್ಷೆ
ಇದೇ ಎಪ್ರಿಲ್‌ನಲ್ಲಿ ಕಳೆದ ಕೊಯ್ಲಿನ ಹೊಸ ಅಡಿಕೆ 230ರಿಂದ 235 ರೂ. ತನಕ ಖರೀದಿಯಾಗಿತ್ತು. ಆ ಅಡಿಕೆ ಈಗ ಸಿಂಗಲ್ ಚೋಲ್ ಆಗಿದೆ. ಈ ವರ್ಷದ ಹೊಸ ಅಡಿಕೆ ಧಾರಣೆ ಕ್ಯಾಂಪ್ಕೋದಲ್ಲಿ ಪ್ರಸ್ತುತ 230 -235 ರೂ. ಆಸುಪಾಸಿನಲ್ಲಿದೆ. ಕಳೆದ ನವೆಂಬರ್‌ಗೆ ಹೋಲಿಸಿದರೆ 10ರಿಂದ 15 ರೂ. ಹೆಚ್ಚಳವಾಗಿದೆ ಅನ್ನುತ್ತಾರೆ ಕೃಷಿಕ ಮಹೇಶ್ ಸುಳ್ಯ.
Related Articles
ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆ ಲೆಕ್ಕಾಚಾರದ ಪ್ರಕಾರ ಸಿಂಗಲ್ ಚೋಲ್ ಧಾರಣೆ 350 ರೂ. ಗಡಿ ತಲುಪುವ ಸಾಧ್ಯತೆ ಇದೆ. ಅಕಾಲಿಕ ಮಳೆಯಿಂದ ಫಸಲು ದೊರೆಯದಿರುವುದು, ಬೇಡಿಕೆಗೆ ತಕ್ಕಂತೆ ಅಡಿಕೆ ಪೂರೈಕೆ ಆಗದಿರು ವುದು ಏರಿಕೆಗೆ ಕಾರಣ. ಇವೆಲ್ಲದರ ಪರಿಣಾಮ ಮುಂದಿನ ವರ್ಷ ಮಾರು ಕಟ್ಟೆಗೆ ಅಡಿಕೆ ಪೂರೈಕೆ ಕುಸಿ ಯುವ ಸಾಧ್ಯತೆ ಇದ್ದು, ಧಾರಣೆ ಏರಿಕೆಯಾಗಬಹುದು ಎನ್ನಲಾಗಿದೆ.
Advertisement
– ಕಿರಣ್ ಪ್ರಸಾದ್ ಕುಂಡಡ್ಕ