Advertisement

ಮದುವೆ ಗುಟ್ಟು ರಟ್ಟು ಮಾಡಿದ ಸುಂದರಿ ಸಂಸದೆ

02:34 PM Jul 16, 2019 | keerthan |

ಕೊಲ್ಕತ್ತಾ: ಇತ್ತೀಚೆಗಷ್ಟೇ ಸಂಸತ್ ಭವನದ ಮುಂದೆ ವಿದೇಶಿ ಉಡುಗೆಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಟೀಕಾಕಾರರಿಗೆ ಆಹಾರವಾಗಿದ್ದ ನಟಿ, ಪಶ್ಚಿಮ ಬಂಗಾಳದ ಸಂಸದೆ ನುಸ್ರತ್ ಜಹಾನ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.

Advertisement

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಈಗ ತಾನು ಮದುವೆಯಾಗಲಿರುವ ಹುಡುಗನ ಮಾಹಿತಿ ಬಿಟ್ಟು ಕೊಟ್ಟಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿರುವ ನುಸ್ರತ್ ತಾನು ಮದುವೆಯಾಗಲಿರುವ ಹುಡುಗನ ಹೆಸರು ನಿಖಿಲ್ ಜೈನ್ ಎಂದು ಹೇಳುವ ಮೂಲಕ ಹಲವರ ಕುತೂಹಲಗಳಿಗೆ ತೆರೆ ಎಳೆದಿದ್ದಾರೆ.

2011ರಲ್ಲಿ ತೆಲುಗು ಚಿತ್ರರಂಗದ ಮೂಲಕ ಸಿನಿ ಜಗತ್ತಿಗೆ ಪದಾರ್ಪಣೆ ಮಾಡಿದ್ದ ನುಸ್ರತ್‌ರ ಮೊದಲ ಚಿತ್ರ ‘ಶೋತ್ರು’. ನಂತರ ಖಿಲಾಡಿ 420, ಲವ್ ಎಕ್ಸ್ ಪ್ರೆಸ್, ಉಮಾ, ಕ್ರಿಸ್ ಕ್ರಾಸ್ ಮುಂತಾದ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next