Advertisement

ಗಂಡು ಮಗುವಿಗೆ ಜನ್ಮ ನೀಡಿದ ಟಿಎಂಸಿ ಸಂಸದೆ, ನಟಿ ನುಸ್ರತ್‌ ಜಹಾನ್‌

06:41 PM Aug 26, 2021 | Team Udayavani |

ಕೋಲ್ಕತ್ತಾ : ತೃಣಮೂಲ ಕಾಂಗ್ರೆಸ್‌ ಸಂಸದೆ, ನಟಿ ನುಸ್ರತ್‌ ಜಹಾನ್‌ ಗುರುವಾರ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

Advertisement

ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಹೆರಿಗೆ ವೇಳೆ ನುಸ್ರತ್‌ ಸ್ನೇಹಿತ, ನಟ ಯಶ್‌ ದಾಸ್‌ ಗುಪ್ತಾ ಆಸ್ಪತ್ರೆಯಲ್ಲಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ನುಸ್ರತ್‌ ಅವರ ಪರಿತ್ಯಕ್ತ ಪತಿ ನಿಖೀಲ್‌ ಜೈನ್‌, “ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ, ತಾಯಿ-ಮಗುವಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ’ ಎಂದಿದ್ದಾರೆ.

ಇದನ್ನೂ ಓದಿ :ಅವನು ಯೋಗಿ ಅಲ್ಲ, ಬೋಗಿ..ಅವನಿಗೆ ಚಪ್ಪಲಿಯಲ್ಲಿ ಹೊಡೆಯಬೇಕು : ಠಾಕ್ರೆ ವಿರುದ್ಧ ಬಿಜೆಪಿ ದೂರು

Advertisement

Udayavani is now on Telegram. Click here to join our channel and stay updated with the latest news.

Next