Advertisement
ನುಸ್ರತ್ ಅವರು ವಿಜಯದಶಮಿಯಂದು ಇನ್ಟಾಗ್ರಾಮ್ ನಲ್ಲಿ ಫೋಟೋ ಒಂದನ್ನೂ ಹಾಕಿ ತಮ್ಮ ಅಭಿಮಾನಿಗಳಿಗೆ ಶುಭಾಶಯ ಕೋರಿದ್ದು, ಅದರಲ್ಲಿ ಅವರು ಬಂಗಾಳಿ ವಿವಾಹಿತ ಮಹಿಳೆಯರು ಧರಿಸುವ ಶಾಖಾ ಫೋಲ (ಬಿಳಿ, ಕೆಂಪು ಬಳೆ) ಧರಿಸಿದ್ದು, ಎದ್ದು ಕಂಡಿದೆ. ಈಗ ಆ ಫೋಟೋ ಭಾರಿ ಚರ್ಚೆಗೆ ಕಾರಣವಾಗಿದೆ.
Related Articles
Advertisement
ಈ ಫೋಟೋಗಳು ಕಂಡ ಅಭಿಮಾನಿಗಳಲ್ಲಿ ಯಶ್ ಹಾಗೂ ನುಸ್ರತ್ ವಿವಾಹವಾಗಿದ್ದಾರೆಯೆ? ಎನ್ನುವ ಪ್ರಶ್ನೆಗಳು ಮೂಡಿವೆ. ನುಸ್ರತ್ ಆಗಸ್ಟ್ ತಿಂಗಳಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿಗೆ ಇಶಾನ್ ಎಂದು ನಾಮಕರಣ ಮಾಡಿದ್ದರು. ಇತ್ತೀಚೆಗೆ ಕೇಕ್ ಕಟ್ ಮಾಡುವ ಮೂಲಕ ತಮ್ಮ ಮಗುವಿನ ಹುಟ್ಟುಹಬ್ಬ ಆಚರಣೆಯ ತುಣುಕನ್ನು ಶೇರ್ ಮಾಡಿದ್ದರು. ಅದರಲ್ಲಿ ಅಪ್ಪ ಮತ್ತು ಮಗ ಎಂದು ಬರೆದಿದ್ದರು.
ವಿವಾಹವಾಗದೆ ಮಗುವನ್ನು ಹೊಂದಿರುವ ಕುರಿತಾಗಿನ ಪ್ರಶ್ನೆಗೆ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಜನ ಹೇಳಿದ್ದೆಲ್ಲವೂ ಸತ್ಯ ಎನ್ನುವ ಹಾಗಿಲ್ಲ. ನಮಗೆ ಮದುವೆಯಾಗಿಯೋ, ಆಗದೆಯೋ ಮಗು ಜನಿಸಿದೆ ಎನ್ನುವುದು ಟೀಕಾಕಾರರಿಗೆ ತಿಳಿದಿಲ್ಲ. ನಾವು ಸತ್ಯವನ್ನು ಹೇಳದಿರುವ ಕಾರಣ ಅವರು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದರು.