Advertisement
ಕೇಂದ್ರ ಸಂಸ್ಕೃತಿ ಇಲಾಖೆ ಸಹಕಾರದೊಡನೆ ಹಾಲ್ಕಲ್ ಜೈನ ಜಟ್ಟಿಗೇಶ್ವರ ದೇವಸ್ಥಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು ಉದಯ ಬೋವಿ ಅವರ ಸಂಯೋಜನೆಯಲ್ಲಿ ಪರಂಪರೆಯ ಯಕ್ಷಗಾನ ಆಯೋಜಿಸಿರುವುದು ಶ್ಲಾಘನೀಯ. ಯಕ್ಷಗಾನ ಕಲಾವಿದರ ಆರ್ಥಿಕ ಸಮಸ್ಯೆಗಳಿಗೆ ಸ್ಪಂದಿಸಲು ಸರಕಾರ ಹೊಸ ನೀತಿ ಪಾಲಿಸಬೇಕೆಂದರು.
ಕೋಟೆ ಜೈನ ಜಟ್ಟಿಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಿವಾಸ ಸುಬ್ರಾಯ ಮಲ್ಯ, ಜಡ್ಕಲ್ ಗ್ರಾ.ಪಂ. ಸದಸ್ಯ ದೇವದಾಸ ಉಪಸ್ಥಿತರಿದ್ದರು. ಯಕ್ಷ ದೇಗುಲ ಹಾಗೂ ಯಕ್ಷಾಂಗಣ ಟ್ರಸ್ಟ್ ರೂವಾರಿಗಳಾದ ಕೆ. ಮೋಹನ್ ಮತ್ತು ವೀಣಾ ಮೋಹನ್ ದಂಪತಿಯನ್ನು ಸಮ್ಮಾನಿಸಲಾಯಿತು. ಉದಯ ಬೋವಿ ಸ್ವಾಗತಿಸಿದರು. ಲಂಬೋದರ ಹೆಗಡೆ ನಿಟ್ಟೂರು ನಿರೂಪಿಸಿ, ವಂದಿಸಿದರು.