Advertisement

ಕ್ರೈಸ್ತ ಸನ್ಯಾಸಿನಿ ಶಂಕಾಸ್ಪದ ಸಾವು

02:45 AM Sep 10, 2018 | Karthik A |

ಹೊಸದಿಲ್ಲಿ/ಕೊಲ್ಲಂ: ಕೇರಳದ ಕೊಲ್ಲಂ ಜಿಲ್ಲೆಯ ಪಟ್ಟಣಪುರಂನಲ್ಲಿ ಭಾನುವಾರ ಕ್ರೈಸ್ತ ಸನ್ಯಾಸಿನಿ ಸಂಶಯಾಸ್ಪದವಾಗಿ ಅಸುನೀಗಿದ್ದಾರೆ. ಸಾವಿಗೀಡಾದ ಕ್ರೈಸ್ತ ಸನ್ಯಾಸಿನಿಯನ್ನು ಸೂಸನ್‌ (55) ಎಂದು ಗುರುತಿಸಲಾಗಿದೆ. ಅವರು ಮಲಂಕರ ಸಿರಿಯನ್‌ ಆರ್ಥಡಾಕ್ಸ್‌ ಚರ್ಚ್‌ನ ಆಡಳಿತಕ್ಕೊಳಪಟ್ಟ ಮೌಂಟ್‌ ತಾಬೊರ್‌ ದಯಾರಾ ಕಾನ್ವೆಂಟ್‌ಗೆ ಸೇರಿದ ಸನ್ಯಾಸಿನಿಯಾಗಿದ್ದರು. ಸಾವಿಗೀಡಾಗಿರುವ ಸನ್ಯಾಸಿನಿ ಕಾನ್ವೆಂಟ್‌ಗೆ ಸೇರಿದ ಶಾಲೆಯಲ್ಲಿ ಅಧ್ಯಾಪಕಿಯಾಗಿದ್ದರು. ಶಾಲೆ ಆವರಣದಲ್ಲಿರುವ ಬಾವಿಯಲ್ಲಿ ಭಾನುವಾರ ಬೆಳಗ್ಗೆ ಸೂಸನ್‌ರ ಮೃತದೇಹ ಪತ್ತೆಯಾಗಿದೆ.

Advertisement

ಸೂಸನ್‌ರ 2 ಮುಂಗೈಗಳಲ್ಲಿ ಗಾಯಗಳಿದ್ದವು. ಈ ಪೈಕಿ ಎಡ ಮುಂಗೈನಲ್ಲಿದ್ದ ಗಾಯ ಆಳವಾಗಿತ್ತು. ಅಸುನೀಗಲು ನಿಖರ ಕಾರಣ ಮರಣೋತ್ತರ ಪರೀಕ್ಷೆ ನಂತರವೇ ತಿಳಿಯಲು ಸಾಧ್ಯ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಹೇಳಿದ್ದಾರೆ. 22 ವರ್ಷಗಳ ಹಿಂದೆ ಕೊಟ್ಟಾಯಂ ಜಿಲ್ಲೆಯ ಸೈಂಟ್‌ ಪಿಯಸ್‌ ಕಾನ್ವೆಂಟ್‌ನಲ್ಲಿ ಕ್ರೈಸ್ತ ಸನ್ಯಾಸಿನಿ ಅಭಯಾ ಕೂಡ ಇದೇ ಮಾದರಿಯಲ್ಲಿ ಸಂಶಯಾಸ್ಪದವಾಗಿ ಅಸುನೀಗಿದ್ದರು. ಈ ಬಗ್ಗೆ ಸಿಬಿಐ ತನಿಖೆ ಕೂಡ ನಡೆದಿತ್ತು.

ಕೇರಳ ಶಾಸಕ ಜಾರ್ಜ್‌ ಹೇಳಿಕೆಗೆ ಖಂಡನೆ
ಅತ್ಯಾಚಾರಕ್ಕೆ ಒಳಗಾದ ಕ್ರೈಸ್ತ ಸನ್ಯಾಸಿನಿಯನ್ನು ಅವಮಾನಕರವಾಗಿ ನಿಂದಿಸಿದ ಶಾಸಕರ ಬಗ್ಗೆ ರಾಷ್ಟ್ರವ್ಯಾಪಿ ಆಕ್ರೋಶ ವ್ಯಕ್ತವಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಶಾಸಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇರಳ ಪೊಲೀಸ್‌ ಮಹಾನಿರ್ದೇಶಕರಿಗೆ ಮತ್ತೂಮ್ಮೆ ಪತ್ರ ಬರೆದಿರುವುದಾಗಿ ಹೇಳಿದ್ದಾರೆ. ಸಿಪಿಐ ಕಾರ್ಯದರ್ಶಿ ಡಿ.ರಾಜಾ ಮಾತನಾಡಿ., ಶಾಸಕ ಜಾರ್ಜ್‌ ಹೇಳಿಕೆ ಖಂಡನಾರ್ಹ. ಅವರ ವಿರುದ್ಧ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next