Advertisement
ಈ ವರ್ಷದ ಮೊದಲಾರ್ಧದಲ್ಲಿ ಮಿ.ಮದಿಮಾಯೆ, ಗಬ್ಬರ್ ಸಿಂಗ್, ಬಲಿಪೆ, ತುಡರ್ ಬಿಡುಗಡೆಯಾಗಿದ್ದು, ಕೋಸ್ಟಲ್‌ವುಡ್‌ನಲ್ಲಿ ಸಂಚಲನ ಮೂಡಿಸುವಲ್ಲಿ ಯಶಸ್ವಿಯಾಗಿವೆ. ವಿಭಿನ್ನ ಕಥೆಯಾಧಾರಿತ “ಧರ್ಮ ದೈವ’ ಸದ್ಯ ಥಿಯೇಟರ್‌ನಲ್ಲಿದ್ದು ಹೊಸ ಟ್ರೆಂಡ್ ಹುಟ್ಟುಹಾಕಿದೆ. ಮುಂದೆ- ಕೆಲವೇ ದಿನಗಳ ಅಂತರದಲ್ಲಿ ಅನಾರ್ಕಲಿ, ನಾನ್‌ವೆಜ್, ಗಂಟ್ ಕಲ್ವೆರ್, ಪಿದಯಿ, ಲಕ್ಕಿಬಾಬು, ಕಲ್ಜಿಗ, ತರವಾಡು ಸಿನೆಮಾಗಳು ಸರದಿಯಲ್ಲಿ ಬಿಡುಗಡೆ ಯಾಗಲಿವೆ. ಹೀಗಾಗಿ ಈ ವರ್ಷದ ಉತ್ತರಾರ್ಧದಲ್ಲಿ ತುಳು ಸಿನೆಮಾಗಳ ಲೈನ್ ಅಪ್ ಚೆನ್ನಾಗಿದೆ.
ತುಳು ಸಿನೆಮಾಗಳು ಎಂದರೆ ಹಾಗೆ ಬಂದು ಹೀಗೆ ಹೋಗುವಂಥವುಗಳು ಎಂದು ಕೆಲವರು ಹೇಳುವುದೂ ಉಂಟು. ಕೆಲವು ಸಿನೆಮಾಗಳು ಕಥೆ ಯಲ್ಲಿ ವಿಫಲವಾದರೆ, ಇನ್ನೂ ಕೆಲವು ಬಾಲಿಶ ಆಗಿದ್ದೂ ಇದೆ. ಬಹುತೇಕ ಚಿತ್ರಗಳು ಏಕತಾನತೆಯಿಂದ ಕೂಡಿದ್ದು ಪ್ರೇಕ್ಷಕರಿಗೆ ಬೋರು ಹೊಡೆಸುತ್ತವೆ ಎಂಬ
ಮಾತೂ ಸಾಮಾನ್ಯ. ಇದೆಲ್ಲದರ ಜತೆಗೆ ತುಳು ಸಿನೆಮಾಗಳು ಪ್ರಚಾರ ತಂತ್ರಗಾರಿಕೆಯಲ್ಲಿ ಎಡವುತ್ತಿರುವುದ ರಿಂದಾಗಿ ಜನರು ಸಿನೆಮಾ ವೀಕ್ಷಣೆಗಾಗಿ ಟಾಕೀಸ್ ಕಡೆಗೆ ಮುಖ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈಗ ಬಿಡುಗಡೆಯಾಗುತ್ತಿರುವ ಹೊಸ ಸಿನೆಮಾಗಳ ಚಿತ್ರ ತಂಡಗಳು ಜನರನ್ನು ಸೆಳೆಯುವ ನಿಟ್ಟಿನಲ್ಲಿ ಹೊಸ ತಂತ್ರ ಗಾರಿಕೆ ರೂಪಿಸಿವೆ. ಸಿನೆಮಾ ಬಿಡುಗಡೆಯ ಬಗ್ಗೆಯೇ ಸೌಂಡ್ ಮಾಡುವ ಮೂಲಕ ಜನರಲ್ಲಿ ಕುತೂಹಲ ಮೂಡಿಸುವ ಹೊಸ ಪ್ರಯತ್ನ ನಡೆದಿರುವುದು ತುಳು ಸಿನೆಮಾ ರಂಗ ದಲ್ಲಿನ ಹೊಸ ಬೆಳವಣಿಗೆ.
Related Articles
Advertisement
-ತಮ್ಮ ಲಕ್ಷ್ಮಣ, ವಿಮರ್ಶಕ
ಕೋಸ್ಟಲ್‌ವುಡ್‌ಗೆ ಹೊಸ ದೇಖೀ ನೀಡುವ ಪ್ರಯತ್ನ ನಡೆಯುತ್ತಿದೆ. ಪ್ರೇಕ್ಷಕರನ್ನು ಮತ್ತೆ ಥಿಯೇಟರ್‌ಗೆ ಕರೆತಂದು ತುಳು ಚಿತ್ರರಂಗವನ್ನು ಎದ್ದುನಿಲ್ಲಿಸುವ ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಯಾಕೆಂದರೆ ಈ ಸಿನೆಮಾ ಲೋಕವನ್ನು ನಂಬಿಕೊಂಡು ಅದೆಷ್ಟೋ ಸಾವಿರ ಮಂದಿ ಪ್ರತ್ಯಕ್ಷ- ಪರೋಕ್ಷವಾಗಿ ಬದುಕುತ್ತಿದ್ದಾರೆ. ತುಳು ಸಿನೆಮಾಗಳಿಗೆ ಒಟಿಟಿ ಭಾಗ್ಯ ಇಲ್ಲ. ಟಿವಿ ರೈಟ್ಸ್ ಸಿಗುತ್ತಿಲ್ಲ. ಥಿಯೇಟರ್ ಕೂಡ ಬಂದ್ ಆಗುತ್ತಿದೆ. ಇಂತಹ ಸಮಸ್ಯೆಯ ಮಧ್ಯೆ ಸಿನೆಮಾವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಜತೆಯಾಗಿ ಶ್ರಮಿಸಬೇಕಿದೆ.-ರೂಪೇಶ್ ಶೆಟ್ಟಿ, ನಟ, ನಿರ್ದೇಶಕ. – ದಿನೇಶ್ ಇರಾ