Advertisement

ಸ್ಟಾರ್ಟ್‌ ಅಪ್‌ ಗಳ ಬೆಳವಣಿಗೆ

12:13 PM Jul 24, 2022 | Team Udayavani |

ನವದೆಹಲಿ: 2016ರಲ್ಲಿ ಕೇವಲ 471 ಇದ್ದ ಸ್ಟಾರ್ಟಪ್‌ ಗಳ ಸಂಖ್ಯೆ, 2022ರ ಜೂ. 30ರ ಹೊತ್ತಿಗೆ 72,993ಕ್ಕೆ ತಲುಪಿದೆ.

Advertisement

ಈ ಕ್ಷೇತ್ರದ ಬೆಳವಣಿಗೆಗೆ ಕೇಂದ್ರ ಸರ್ಕಾರ ನೀಡಿದ ಸಹಕಾರವೇ ಇಷ್ಟು ಪ್ರಮಾಣದ ಸ್ಟಾರ್ಟ್‌ ಅಪ್‌ ಗಳು ಕಾರ್ಯನಿರ್ವಹಿಸಲು ಕಾರಣವಾಗಿದೆ ಎಂದು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕೆ ಇಲಾಖೆಯ ಸಹಾಯಕ ಸಚಿವ ಸೋಮ ಪ್ರಕಾಶ್‌ ತಿಳಿಸಿದ್ದಾರೆ.

ಸ್ಟಾರ್ಟ್‌ ಅಪ್‌ ಗಳ ಬೆಳವಣಿಗೆಗೆ ಬೇಕಾದ ವಾತಾವರಣದ ನಿರ್ಮಾಣ, ಉತ್ತಮ ತಂತ್ರಜ್ಞಾನ ಅಭಿವೃದ್ಧಿಯನ್ನು ಕೇಂದ್ರ ಸರ್ಕಾರ ಕಲ್ಪಿಸಿದೆ. 2016ರ ಜ. 16ರಿಂದ ಸ್ಟಾರ್ಟಪ್‌ ಇಂಡಿಯಾ ಎಂಬ ಅಭಿಯಾನವನ್ನೂ ಆರಂಭಿಸಲಾಗಿತ್ತು.

ಇದೆಲ್ಲದರಿಂದ ಈ ಕ್ಷೇತ್ರ ಇಂದು ಅಭಿವೃದ್ಧಿಗೊಂಡಿದ್ದು ಮುಂದೆ ಅದು ದೇಶದ ಅಭಿವೃದ್ಧಿಗೂ ಪೂರಕವಾಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next