Advertisement

2000 ರೂ. ನೋಟುಗಳ ಸಂಖ್ಯೆ ಇಳಿಕೆ! 500 ರೂ. ನೋಟುಗಳ ಸಂಖ್ಯೆ ಏರಿಕೆ!

08:56 PM May 27, 2022 | Team Udayavani |

ಮುಂಬೈ: 2016ರ ನಂತರ ಭಾರತದಲ್ಲಿ 2000 ರೂ. ಮೌಲ್ಯದ ಬ್ಯಾಂಕ್‌ ನೋಟುಗಳು ಚಲಾವಣೆಗೆ ಬಂದವು. ಇದೀಗ ಅವುಗಳ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದೆ. 500 ರೂ. ನೋಟುಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ!

Advertisement

ಮಾರ್ಚ್‌ ಅಂತ್ಯದ ಹೊತ್ತಿಗಿನ ವರದಿಗಳನ್ನು ಆಧರಿಸಿ, ಆರ್‌ಬಿಐ ತನ್ನ ವಾರ್ಷಿಕ ವರದಿಯಲ್ಲಿ ಈ ಮಾಹಿತಿ ನೀಡಿದೆ. ದೇಶದಲ್ಲಿ ಪ್ರಸ್ತುತ ಚಲಾವಣೆಯಲ್ಲಿರುವ ಎಲ್ಲ ಮೌಲ್ಯದ ನೋಟುಗಳ ಒಟ್ಟು ಸಂಖ್ಯೆ 13,053 ಕೋಟಿ. 2021ರ ಮಾರ್ಚ್‌ನಲ್ಲಿ ಈ ಸಂಖ್ಯೆ 12,437 ಕೋಟಿಯಿತ್ತು.

2020ರ ಮಾರ್ಚ್‌ ಅಂತ್ಯದ ಹೊತ್ತಿಗೆ 2 ಸಾವಿರ ರೂ. ಮುಖಬೆಲೆಯ 274 ಕೋಟಿ ನೋಟುಗಳು ಚಲಾವಣೆ ಯಲ್ಲಿದ್ದವು. ಈ ವರ್ಷ ಮಾರ್ಚ್‌ ಅಂತ್ಯದ ಹೊತ್ತಿಗೆ ಈ ಸಂಖ್ಯೆ 214 ಕೋಟಿಗಿಳಿದಿದೆ.

ಇನ್ನು, 500 ರೂ. ಮುಖಬೆಲೆಯ ನೋಟುಗಳ ಸಂಖ್ಯೆ ಕಳೆದ ವರ್ಷದ ಮಾರ್ಚ್‌ನಲ್ಲಿ 3,867.90 ಕೋಟಿ ಇದ್ದಿದ್ದು, ಈ ಮಾರ್ಚ್‌ಗೆ 4554.68 ಕೋಟಿಗೇರಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next