Advertisement

1535ಕ್ಕೆ ತಲುಪಿದ ಸೋಂಕಿತರ ಸಂಖ್ಯೆ

11:57 AM Jul 17, 2020 | Suhan S |

ಯಾದಗಿರಿ: ಜಿಲ್ಲೆಯಲ್ಲಿ ಗುರುವಾರ ಮತ್ತೆ ಇಬ್ಬರು ಕೋವಿಡ್ ವಾರಿಯರ್ಸ್ ಸೇರಿ ಒಟ್ಟು 34 ಜನರಲ್ಲಿ ಮಹಾಮಾರಿ ಕೋವಿಡ್ ವಕ್ಕರಿಸಿದ್ದು ಸೋಂಕಿತರ ಸಂಖ್ಯೆ 1535ಕ್ಕೆ ಏರಿಕೆಯಾಗಿದೆ.

Advertisement

ಜಿಲ್ಲೆಯ ಸುರಪುರ ಪೊಲೀಸ್‌ ಠಾಣೆ ಸಿಬ್ಬಂದಿ 57 ವರ್ಷದ ಪುರುಷ (ಪಿ-47763) ಮತ್ತು ಶಹಾಪುರ ತಾಲೂಕಿನ ಭೀಮರಾಯನಗುಡಿ ಪೊಲೀಸ್‌ ಸಿಬ್ಬಂದಿ 45 ವರ್ಷದ ಪುರುಷ (ಪಿ-47775)ನಿಗೆ ಸೋಂಕು ಹರಡಿದೆ. ಸೋಂಕಿತರ ಸಂಪರ್ಕಕ್ಕೆ ಬಂದಿರುವ ಒಟ್ಟು 13 ಜನರಲ್ಲಿ ವೈರಸ್‌ ಹೊಕ್ಕಿದ್ದು ಸೋಂಕಿತ (ಪಿ-26681)ರ ಸಂಪರ್ಕದಿಂದ ಗುರುಮಠಕಲ್‌ನ ಗಡಿ ಮೊಹಲ್ಲಾದ 6 ಜನ, ಕೂಡ್ಲೂರಿನ 3 ಜನ ಮತ್ತು ಸೋಂಕಿತ (ಪಿ-36832)ರ ಸಂಪರ್ಕದಿಂದ ಶಹಾಪುರದ 4 ಜನರು ಸೋಂಕಿಗೆ ತುತ್ತಾಗಿದ್ದಾರೆ.

ಅಂತರ್‌ ಜಿಲ್ಲೆ ಪ್ರಯಾಣದ ಹಿನ್ನೆಲೆ ಇರುವ ಗುರುಮಠಕಲ್‌ನ ನಾರಾಯಣಪುರ ಬಡವಾಣೆಯ ಇಬ್ಬರು 14 ವರ್ಷದ ಬಾಲಕಿ (ಪಿ- 48146) ಮತ್ತು 11 ವರ್ಷದ ಬಾಲಕ (ಪಿ-48153) ರಲ್ಲಿ ಸೋಂಕು ಪತ್ತೆಯಾಗಿದೆ. ರೋಗದ ಗುಣಲಕ್ಷಣ ಇರುವ ಸುರಪುರದ 54 ವರ್ಷದ ಪುರುಷ (ಪಿ-47770)ಗೆ ಸೋಂಕು ತಗುಲಿದೆ. ಇನ್ನು ಸಂಪರ್ಕ ಪತ್ತೆಯಾಗದ ಜನರು ಸೋಂಕಿತರ ಪಟ್ಟಿಗೆ ಸೇರಿದ್ದಾರೆ.

63 ಜನರ ವರದಿ ಮಾತ್ರ ಬಾಕಿ: ಜಿಲ್ಲೆಯಲ್ಲಿ ಕೇವಲ 63 ಜನರ ವರದಿ ಬರಬೇಕಿದೆ. ಈವರೆಗೆ 30277 ಜನರ ಮಾದರಿ ಪರೀಕ್ಷೆಗೊಳಪಡಿಸಲಾಗಿದೆ. ಗುರುವಾರ 290 ನೆಗೆಟಿವ್‌ ವರದಿ ಸೇರಿ ಈವರೆಗೆ 28679 ಜನರ ವರದಿ ನೆಗೆಟಿವ್‌ ಬಂದಿವೆ. ಹೊಸದಾಗಿ ಕಳುಹಿಸಲಾದ 150 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಸೋಂಕಿತ 1535 ಜನರಲ್ಲಿ 62 ಜನ ಸೇರಿ ಜುಲೈ 16ರವರೆಗೆ ಒಟ್ಟು 1159ಜನ ಗುಣಮುಖರಾಗಿದ್ದಾರೆ. ಉಳಿದ 375 ಪ್ರಕರಣಗಳು ಸಕ್ರಿಯವಾಗಿದ್ದು, ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 3109 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 4702 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ಜಿಲ್ಲೆಯಲ್ಲಿ 116 ಕಂಟೈನ್ಮೆಂಟ್‌ ಝೋನ್‌ಗಳನ್ನು ರಚಿಸಲಾಗಿದ್ದು, ಇದರಲ್ಲಿ 2 ಕಂಟೈನ್ಮೆಂಟ್‌ ಝೋನ್‌ಗಳನ್ನು ತೆರವುಗೊಳಿಸಲಾಗಿದೆ. ಹೊಸ ಜಿಲ್ಲಾಸ್ಪತ್ರೆಯಲ್ಲಿ 129 ಜನರನ್ನು ಪತ್ಯೇಕವಾಗಿರಿಸಲಾಗಿದೆ. ಶಹಾಪುರ 83 ಜನ, ಸುರಪುರ 55 ಜನ ಹಾಗೂ ಬಂದಳ್ಳಿ ಏಕಲವ್ಯ ಕೊರೊನಾ ಕೇರ್‌ ಸೆಂಟರ್‌ನಲ್ಲಿ 110 ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ. ಜಿಲ್ಲೆಯ 3 ಸಾಂಸ್ಥಿಕ ಕ್ವಾರಂಟೈನ್‌ ಸೆಂಟರ್‌ಗಳಲ್ಲಿ ಒಟ್ಟು 131 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ ತಿಳಿಸಿದ್ದಾರೆ.

ಆಸ್ಪತ್ರೆಯಿಂದ ಮರಳಿದ ಪತ್ರಕರ್ತರು: ಜು.16ರಂದು ಜಿಲ್ಲೆಯ ಪತ್ರಕರ್ತರ ಗಂಟಲು ದ್ರವ ಸಂಗ್ರಹಿಸಲಾಗಿತ್ತು. ಈ ವೇಳೆ ಜಿಲ್ಲೆಯ ಇಬ್ಬರು ಪತ್ರಕರ್ತರು ಮತ್ತು ಒಬ್ಬ ಕ್ಯಾಮರಾಮ್ಯನ್‌ಗೆ ಸೋಂಕು ದೃಢವಾಗಿತ್ತು. ಸೋಂಕಿನಿಂದ ಗುಣಮುಖವಾದ ಪತ್ರಕರ್ತರು ಗುರುವಾರ ಆಸ್ಪತ್ರೆಯಿಂದ ಮನೆಗೆ ಮರಳಿದರು.

Advertisement

ನಿಯಮ ಪಾಲಿಸದವರಿಗೆ ದಂಡ :  ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಜು.15ರಿಂದ 22ರವರೆಗೆ ವಿಧಿ ಸಿರುವ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದ ಸಾರ್ವಜನಿಕರಿಗೆ ಸ್ಥಳೀಯ ಸಂಸ್ಥೆಗಳು ಮತ್ತು ಪೊಲೀಸರು ದಂಡ ವಿಧಿಸಿದ್ದಾರೆ. ಗುರುವಾರ ಜಿಲ್ಲೆಯಲ್ಲಿ ಲಾಕ್‌ಡೌನ್‌ ನಿಯಮ ಉಲ್ಲಂಘನೆ ಹಿನ್ನೆಲೆ ಸ್ಥಳೀಯ ಸಂಸ್ಥೆಗಳು 69,400 ರೂಪಾಯಿ ಮತ್ತು ಮಾಸ್ಕ್ ಧರಿಸದ 318‌ ವ್ಯಕ್ತಿಗಳಿಗೆ ಪೊಲೀಸ್‌ ಇಲಾಖೆ 37900 ರೂಪಾಯಿ ದಂಡ ವಿಧಿಸಿವೆ. ಇನ್ನು ಸಾಮಾಜಿಕ ಅಂತರ ಕಾಪಾಡದಿರುವ 37 ವ್ಯಕ್ತಿಗಳಿಗೆ 10400 ರೂಪಾಯಿ ಹಾಗೂ ತಂಬಾಕು, ಗುಟ್ಕಾ, ಪಾನ್‌ ಮದ್ಯಪಾನ ಸೇವನೆ ಮಾಡಿದ್ದ 35 ಜನರಿಗೆ 8700 ರೂಪಾಯಿ ದಂಡ ವಿಧಿಸಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next