Advertisement

ಸೋಂಕಿತರ ಸಂಖ್ಯೆ 991ಕ್ಕೆ ಏರಿಕೆ

08:09 AM Jul 25, 2020 | Suhan S |

ತುಮಕೂರು: ಶುಕ್ರವಾರ ಒಂದೇ ದಿನ 59 ಜನರಿಗೆ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 991ಕ್ಕೆ ಏರಿಕೆಯಾಗಿದ್ದು ಸೋಂಕಿಗೆ ಮತ್ತೆ ಮೂವರು ಬಲಿಯಾಗಿದ್ದು ಮೃತರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.

Advertisement

ತುಮಕೂರು ತಾಲೂಕಿನಲ್ಲಿ 22, ಗುಬ್ಬಿ-7, ಮಧುಗಿರಿ-8, ಪಾವಗಡ-1, ಕುಣಿಗಲ್‌ ಹಾಗೂ ತುರುವೇಕೆರೆಯಲ್ಲಿ ತಲಾ 5, ಶಿರಾ-1, ಚಿಕ್ಕನಾಯಕನಹಳ್ಳಿ -2, ತಿಪಟೂರಿನಲ್ಲಿ -7, ಕೊರಟಗೆರೆ-1 ಸೇರಿದಂತೆ ಒಟ್ಟು 67 ಜನರಲ್ಲಿ ಸೋಂಕು ದೃಢಪಟ್ಟಿದೆ ಎಂದರು.

ಜಿಲ್ಲೆಯಲ್ಲಿ ಈವರೆಗೆ 29659 ಜನರ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 25930 ಜನರಿಗೆ ನೆಗೆಟಿವ್‌ ಎಂದು ವರದಿ ಬಂದಿದೆ. ಅದರಲ್ಲಿ ನಿಗಾವಣೆಯಲ್ಲಿ 2438 ಜನರಿದ್ದು ಪ್ರಥಮ ಸಂಪರ್ಕ 1340, ದ್ವಿತೀಯ 1098 ಜನರಿದ್ದು 991 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಅದರಲ್ಲಿ 523 ಜನ ಗುಣಮುಖರಾಗಿದ್ದಾರೆ. ಇನ್ನೂ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ 430 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಐಸಿಯುನಲ್ಲಿ 11 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 38 ಜನರು ಮೃತಪಟ್ಟಿದ್ದಾರೆ ಎಂದರು.

ಜಿಲ್ಲೆಯಲ್ಲಿ ಮೃತರ ಸಾವಿನ ಸಂಖ್ಯೆ 38ಕ್ಕೇರಿಕೆ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಮೃತಪಡು ತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ ಒಂದೇ ದಿನ ಮೂವರು ಕೋವಿಡ್ ಸೋಂಕಿಗೆ ಬಲಿಯಾಗುವ ಮೂಲಕ ಮೃತರ ಸಂಖ್ಯೆ 38 ಕ್ಕೆ ಏರಿಕೆಯಾಗಿದೆ. ತುಮಕೂರಿನ ಗಂಗೋತ್ರಿ ನಗರದ 70 ವರ್ಷದ ವೃದ್ಧ ಈ ಸೋಂಕಿಗೆ ಬಲಿಯಾಗಿದ್ದಾರೆ, ಕೊರಟಗೆರೆ ತಾಲೂಕಿನ ಕಲ್ಕೆರೆ ಗ್ರಾಮದ 68 ವರ್ಷದ ವೃದ್ಧ, ಕುಣಿಗಲ್‌ ತಾಲೂಕು ಹೌಸಿಂಗ್‌ ಬಡಾವಣೆಯ 75 ವರ್ಷದ ವೃದ್ಧ ಸೋಂಕಿಗೆ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next