Advertisement

ಕ್ಷೀಣಿಸುತ್ತಿರುವ ಪುಸ್ತಕ ಪ್ರೇಮಿಗಳ ಸಂಖ್ಯೆ

01:04 PM Apr 24, 2017 | |

ಮೈಸೂರು: ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳ ಸಂಖ್ಯೆ ಹೆಚ್ಚುತ್ತಿರುವ ಪರಿಣಾಮ ಪುಸ್ತಕ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಹಿರಿಯ ಸಾಹಿತಿ ಡಾ. ಸಿ.ಪಿ. ಕೃಷ್ಣಕುಮಾರ್‌ ಕಳವಳ ವ್ಯಕ್ತಪಡಿಸಿದರು.

Advertisement

ಕನ್ನಡ ಪುಸ್ತಕ ಪ್ರಾಧಿಕಾರ, ಚಿಂತನ ಚಿತ್ತಾರ ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆ ವತಿಯಿಂದ ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ಕುವೆಂಪುನಗರದಲ್ಲಿ ಭಾನುವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ತಳ್ಳುವ ಗಾಡಿಯಲ್ಲಿ ಪುಸ್ತಕಗಳನ್ನಿಟ್ಟು ಮಾರಾಟ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪುಸ್ತಕಗಳು ಜಾnನದ ಮೂರ್ತ ಸಾಧನ ವಾಗಿದ್ದು, ವಾಸ್ತವದಲ್ಲಿ ಮಾಧ್ಯಮಗಳು ದರ್ಶನದ ಸಂಸ್ಕೃತಿ ಯಾದರೆ, ಪುಸ್ತಕವು ತನ್ನ ಸ್ಪರ್ಶ ಸಂಸ್ಕೃತಿಯಿಂದ ಓದುಗರನ್ನು ಪುಳಕಿತಗೊಳಿಸುತ್ತದೆ. ಆದರೆ ಪ್ರಸ್ತುತ ದಿನಗಳಲ್ಲಿ ಹೆಚ್ಚುತ್ತಿರುವ ಮಾಧ್ಯಮಗಳ ಪ್ರಭಾವದಿಂದ ಪುಸ್ತಕಗಳನ್ನು ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದರು.

ಪುಸ್ತಕ ಸಂಸ್ಕೃತಿಯು ಮಾಧುರ್ಯ ಮತ್ತು ಬೆಳಕಿನಂತಿದ್ದು, ಶ್ರೇಷ್ಠ, ಧ್ಯಾನ ಹಾಗೂ ಚಿಂತನ ವಿಮರ್ಶೆಗಳ ಮೂಲಕ ಪ್ರಸಾರ ಮಾಡುತ್ತದೆ. ಅಲ್ಲದೆ ಪುಸ್ತ ಕಗಳು ಅನುಭೂತಿಯ ಹೊಸ ನಕ್ಷತ್ರ, ಗ್ರಹಗಳ ಅನುಭವ ಕಂಡು ಕೊಡಲಿದ್ದು, ಈ ಕಾರಣದಿಂದಲೇ ಪ್ರತಿಯೊಬ್ಬರೂ ಬದುಕಿನ ನೈಜ ಸ್ವರೂಪವಾದ ಪುಸ್ತ ಕವನ್ನು ಓದುವ ಮೂಲಕ ಉತ್ತಮ ಸಂಸ್ಕೃತಿ ಬೆಳೆಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ಇದು ಸಾಧ್ಯವಾದಾಗ ಮಾತ್ರವೇ ವರ್ತಮಾನ ಹಾಗೂ ಭವಿಷ್ಯ ಕಾಲಕ್ಕೆ ಹೆಚ್ಚು ಅನುಕೂಲವಾಗಲಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ವಿಶೇಷ ದಿನದ ಆಚರಣೆಗೂ ವಿಶ್ವ ಎಂಬ ಪದವನ್ನು ಬಳಕೆ ಮಾಡಲಾಗುತ್ತಿದೆ. ಆದರೆ ನಮ್ಮನ್ನು ವಿಶ್ವಮಾನವರಾಗಿ ಮಾಡುವ ಸಾಧನವೇ ಪುಸ್ತಕವಾಗಿದ್ದು, ಹೀಗಾಗಿ ಪುಸ್ತಕ ದಿನಾಚರಣೆಗೆ ವಿಶ್ವ ಎಂಬ ಪದ ಜೋಡಣೆ ಅತ್ಯಂತ ಔಚಿತ್ಯಪೂರ್ಣ ಎಂದು ಹೇಳಿದರು.

Advertisement

ಸಾಹಿತಿ ಡಾ. ಆರ್‌.ವಿ.ಎಸ್‌.ಸುಂದರಂ, ಕನ್ನಡ ಪುಸ್ತಕ ಪ್ರಾಧಿಕಾರ ಮಳಿಗೆ ಮಾರಾಟ ಪ್ರತಿನಿಧಿ ನಿಂಗರಾಜು ಚಿತ್ತಣ್ಣವರ್‌, ಆಡಳಿತಾಧಿಕಾರಿ ಮಹ ದೇವಯ್ಯ, ನಿರ್ವಹಣಾಧಿಕಾರಿ ಆರ್‌. ಸುಧೀಂದ್ರಕುಮಾರ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next