ಮುಂಬಯಿ: ಮಹಾರಾಷ್ಟ್ರದಲ್ಲಿ ಅದರಲ್ಲೂ ಮುಂಬಯಿಯಲ್ಲಿ ಕೊರೊನಾ ಮತ್ತು ಒಮಿಕ್ರಾನ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಕಾರ್ಯದರ್ಶಿ ಡಾ| ಪ್ರದೀಪ್ ವ್ಯಾಸ್ ಅವರು ಎಲ್ಲ ವಿಭಾಗೀಯ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದಾರೆ.
ರಾಜ್ಯದಲ್ಲಿ ಸೋಂಕಿತರು ಹೆಚ್ಚಾಗುತ್ತಿರುವ ವೇಗದ ಹೀಗೇ ಮುಂದುವರೆದರೆ ಜನವರಿ ಮೂರನೇ ವಾರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2 ಲಕ್ಷಕ್ಕೆ ಏರುವ ಸಾಧ್ಯತೆಯಿದೆ ಎಂದವರು ಪತ್ರದಲ್ಲಿ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಕೊರೊನಾ ರೋಗಿಗಳ ಸಂಖ್ಯೆ 80ಲಕ್ಷ ಕ್ಕೆ ಏರಿದರೆ, ಸಾವಿನ ಪ್ರಮಾಣ ಶೇ. 1ರಷ್ಟು ಇದ್ದರೂ ಸುಮಾರು 80 ಸಾವಿರ ಸಾವು ಸಂಭವಿ ಸಬಹುದು ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೊರೊನಾವನ್ನು ಗಂಭೀರವಾಗಿ ಪರಿಗಣಿಸುವಂತೆ ಪತ್ರದಲ್ಲಿ ಸೂಚನೆ ನೀಡಿದ್ದಾರೆ.
ಒಮಿಕ್ರಾನ್ ರೂಪಾಂತರವು ಅಪಾಯಕಾರಿ ಒಮಿಕ್ರಾನ್ ಲಕ್ಷಣಗಳು ಸೌಮ್ಯವಾಗಿರುತ್ತವೆ ಎಂದು ಭಾವಿಸಬೇಡಿ. ಕೋವಿಡ್ ಲಸಿಕೆಯನ್ನು ಸ್ವೀಕರಿಸಿದ ಮತ್ತು ಸೌಮ್ಯ ರೋಗಲಕ್ಷಣಗಳನ್ನು ಹೊಂದಿರು ವವರಿಗೆ ಒಮಿಕ್ರಾನ್ ರೂಪಾಂತರವು ಅಪಾಯಕಾರಿಯಾಗಿದೆ. ಕೊರೊನಾ ಮೂರನೇ ಅಲೆ ಹೆಚ್ಚು ವೇಗವಾಗಿ ಮತ್ತು ದೊಡ್ಡ ಪ್ರಮಾಣದಲ್ಲಿ ಸಂಭವಿಸುತ್ತದೆ. ಅದಕ್ಕಾಗಿಯೇ ಲಸಿಕೆಯನ್ನು ತ್ವರಿತವಾಗಿ ಮಾಡಬೇಕು ಎಂದವರು ಹೇಳಿದ್ದಾರೆ.
ರಾಜ್ಯದಲ್ಲಿ ಶೇ.13ರಷ್ಟು ಡೆಲ್ಟಾ ವೇರಿಯಂಟ್, ಶೇ.32ರಷ್ಟು ಡೆಲ್ಟಾ ಡೆರಿ ವೇಟಿವ್ಸ್ ಮತ್ತು ಶೇ.55ರಷ್ಟು ಒಮಿಕ್ರಾನ್ ರೋಗಿಗಳಿದ್ದಾರೆ. ಒಮಿಕ್ರಾನ್ ಪತ್ತೆಗೆ ಜೀನೋಮ್‌ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆ ಯನ್ನು ಬೃಹನ್ಮುಂಬಯಿ ಪಾಲಿ ಕೆಯ ವತಿಯಿಂದ ನಡೆಸಲಾಗುತ್ತಿದೆ. ಇದರ ಅಡಿ ಯಲ್ಲಿ ಮುಂಬಯಿಯಲ್ಲಿ 282 ರೋಗಿಗಳ ಕೋವಿಡ್ ವೈರಸ್ ಮಾದರಿಗಳನ್ನು ಅಧ್ಯಯನ ಮಾಡಿ ಅದರ ಫಲಿತಾಂಶಗಳನ್ನು ಪ್ರಕಟಿಸಲಾಗಿದೆ ಎಂದವರು ಹೇಳಿದ್ದಾರೆ.
ಮುಂಬಯಿ ಮುನ್ಸಿಪಲ್ ಕಾರ್ಪೊ ರೇಶನ್‌ನ ಕಸ್ತೂರ್ಬಾ ಆಸ್ಪತ್ರೆ ಮತ್ತು ಪುಣೆಯ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಜೀನೋಮ್ ಸೀಕ್ವೆನ್ಸಿಂಗ್ ಲ್ಯಾಬ್‌ನಿಂದ ಕೋವಿಡ್ ಸೋಂಕಿತ ರೋಗಿಗಳ ಒಟ್ಟು 376 ಮಾದರಿ ಗಳನ್ನು ಪರೀಕ್ಷಿಸಲಾಗಿದ್ದು, ಇವರಲ್ಲಿ 282 ರೋಗಿಗಳು ಮುಂಬಯಿ ಮಹಾ ನಗರದ ನಾಗರಿಕರಾಗಿದ್ದು, ಈ 282 ಮಾದರಿಗಳಿಗೆ ಸಂಬಂಧಿಸಿದಂತೆ ವರದಿ ಸಂಗ್ರಹಿಸಲಾಗುತ್ತಿದೆ ಎಂದರು ಹೇಳಿದ್ದಾರೆ.