Advertisement

ಭಾರತ: ಕೊರೊನಾ ಸೋಂಕಿತರ ಸಂಖ್ಯೆ 107ಕ್ಕೆ ಏರಿಕೆ; ಸಾರ್ಕ್ ನಾಯಕರೊಂದಿಗೆ ಪ್ರಧಾನಿ ಮೋದಿ ಸಭೆ

12:10 AM Mar 21, 2020 | Mithun PG |

ನವದೆಹಲಿ: ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಏಕಾಏಕಿ ಮತ್ತೆ ಐವರಲ್ಲಿ ವೈರಾಣು ಇರುವುದು ಧೃಢಪಟ್ಟಿದೆ. ಆ ಮೂಲಕ ಸೋಂಕು ಪೀಡಿತರ ಒಟ್ಟಾರೆ ಸಂಖ್ಯೆ 107ಕ್ಕೇ ಏರಿಕೆಯಾಗಿದೆ ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ.

Advertisement

ಮಹಾರಾಷ್ಟ್ರದಲ್ಲಿ ಮತ್ತೆ ಐದು ಜನರಿಗೆ ಕೊರೊನಾ ಇರುವುದು ಖಚಿತವಾಗಿದ್ದು, ಪುಣೆ, ಮುಂಬೈ, ನಾಗಪುರ್, ಯವತ್ಮಾಲ್ ಸೇರದಂತೆ ಹಲವು ನಗರಗಳಲ್ಲಿ ಒಟ್ಟಾರೆ 31 ಜನರಿಗೆ ಪಾಸಿಟಿವ್ ವರದಿ ಬಂದಿದೆ ಎಂದು ಪಿಟಿಐ ವರದಿ ಮಾಡಿದೆ.
ಜೈಪುರದಲ್ಲಿ 24 ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿದ್ದು, ರಾಜಸ್ಥಾನದಲ್ಲಿ ಒಟ್ಟಾರೆ 4 ಪ್ರಕರಣ ವರದಿಯಾಗಿದೆ.

ಈಗಾಗಲೇ ಕರ್ನಾಟಕದ ಕಲಬುರುಗಿಯಲ್ಲಿ ಒಬ್ಬರು  ಮತ್ತು ರಾಷ್ಟ್ರ ರಾಜಧಾನಿಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ.  ತ್ವರಿತಗತಿಯಲ್ಲಿ ವ್ಯಾಪಿಸುತ್ತಿರುವ ಮಾರಣಾಂತಿಕ ಸೋಂಕನ್ನು ಅಧಿಸೂಚಿತ ವಿಪ್ಪತ್ತು ಎಂದು ಕೇಂದ್ರ ಸರಕಾರ ಶನಿವಾರ ಘೋಷಿಸಿದೆ.

ವಿಶ್ವದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಕುರಿತಾಗಿ ಇಂದು ಸಂಜೆ 5 ಗಂಟೆಗೆ ಸಾರ್ಕ್ ನಾಯಕರೊಂದಿಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಕೂಡ ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಪ್ರಧಾನಿ ಮೋದಿ ಯಾವುದೇ ಸಚಿವರು ಬೇರೆ ದೇಶಗಳಿಗೆ ಪ್ರಯಾಣ ಮಾಡುವಂತಿಲ್ಲ ಎಂದು ಆದೇಶಿಸಿದ್ದು, ನಾಗರಿಕರಲ್ಲಿಯೂ ಸಹ ಮನವಿ ಮಾಡಿದ್ದಾರೆ.

ವಿಶ್ವದಾದ್ಯಂತ ಮಾರಕ ಕೋವಿಡ್ 19 ಗೆ 1.5 ಲಕ್ಷ ಜನರು ತುತ್ತಾಗಿದ್ದು, 5,760 ಜನರು ಬಲಿಯಾಗಿದ್ದಾರೆ. ಕೊರೊನಾ ವೈರಸ್ ಮೊದಲು ಕಂಡುಬಂದ ಚೀನಾದಲ್ಲಿ 80,824 ಸೋಂಕು ಪೀಡಿತರಿದ್ದು, 65 ಸಾವಿರಕ್ಕಿಂತ ಹೆಚ್ಚು ಜನರು ಗುಣಮುಖರಾಗಿದ್ದಾರೆ.

Advertisement

ಚೀನಾದ ನಂತರ ಇಟಲಿಯಲ್ಲಿ ಕೊರೊನಾ ತನ್ನ ಮರಣ ಮೃದಂಗ ಬಾರಿಸುತ್ತಿದ್ದು ಅಕ್ಷರಶಃ ನಲುಗಿ ಹೋಗಿದೆ. ಹೊಸದಾಗಿ 415 ಜನರು ಮೃತರಾಗಿದ್ದು ಒಟ್ಟಾರೆ ಸಾವಿನ ಸಂಖ್ಯೆ 1,441 ಕ್ಕೆ ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next