Advertisement

‘Bharat Ratna’ ಪುರಸ್ಕೃತರ ಸಂಖ್ಯೆ 53ಕ್ಕೆ ಏರಿಕೆ: ಒಂದೇ ವರ್ಷ ಐವರಿಗೆ ಇದೇ ಮೊದಲು

12:50 AM Feb 10, 2024 | Team Udayavani |

ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್‌, ಚರಣ್‌ ಸಿಂಗ್‌ ಮತ್ತು ಹಸುರುಕ್ರಾಂತಿಯ ಹರಿಕಾರ ಎಂ.ಎಸ್‌.ಸ್ವಾಮಿನಾಥನ್‌ ಅವರಿಗೆ ಭಾರತ ರತ್ನ ಘೋಷಣೆಯ ಮೂಲಕ, ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪುರಸ್ಕೃತರ ಸಂಖ್ಯೆ 53ಕ್ಕೇರಿಕೆಯಾಗಿದೆ. ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಗರಿಷ್ಠ ಅಂದರೆ ಐವರಿಗೆ ಈ ಗೌರವ ಸಂದಿದೆ.

Advertisement

1999ರಲ್ಲಿ ನಾಲ್ವರು ಸಾಧಕರಿಗೆ ಭಾರತ ರತ್ನವನ್ನು ಘೋಷಿಸಲಾಗಿತ್ತು. ಅತೀ ಹೆಚ್ಚು ಮಂದಿಗೆ ಭಾರತ ರತ್ನ ಗೌರವ ಘೋಷಣೆಯಾಗಿದ್ದು ಅದೇ ಮೊದಲು ಮತ್ತು ಕೊನೆಯಾಗಿತ್ತು. ಆದರೆ, ಈ ಬಾರಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಈ ದಾಖಲೆಯನ್ನು ಮುರಿದಿದ್ದು, ಒಂದೇ ವರ್ಷ ಐವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಘೋಷಿಸಿದೆ.

2019ರಲ್ಲಿ ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರಿಗೆ ಭಾರತ ರತ್ನ ಘೋಷಿಸಲಾಗಿತ್ತು. ಜತೆಗೆ, ಮರ ಣೋತ್ತರವಾಗಿ ಭೂಪೇಂದ್ರ ಕುಮಾರ್‌ ಹಜಾರಿಕಾ ಮತ್ತು ನಾನಾಜಿ ದೇಶ್‌ಮುಖ್‌ ಅವರಿಗೂ ಅದೇ ವರ್ಷ ಗೌರವ ಸಂದಿತ್ತು. ಅನಂತರದಲ್ಲಿ ಅಂದರೆ 2020ರಿಂದ 2023ರ ಅವಧಿಯಲ್ಲಿ ಯಾರಿಗೂ ಭಾರತ ರತ್ನ ಘೋಷಣೆ ಆಗಿರಲಿಲ್ಲ.

ಬಹುತೇಕ ಸಂದರ್ಭಗಳಲ್ಲಿ ವರ್ಷದಲ್ಲಿ ಗರಿಷ್ಠ ಮೂವರಿಗೆ ಮಾತ್ರ ಭಾರತ ರತ್ನ ಘೋಷಿಸಲಾಗುತ್ತದೆ. 2019, 1997, 1992, 1991, 1955 ಮತ್ತು 1954ರಲ್ಲಿ ತಲಾ ಮೂವರಿಗೆ ಈ ಪ್ರಶಸ್ತಿ ಸಂದಿತ್ತು. 2015, 2014, 2001, 1998, 1990, 1963 ಮತ್ತು 1961ರಲ್ಲಿ ತಲಾ ಇಬ್ಬರು ಭಾರತರತ್ನಕ್ಕೆ ಭಾಜನರಾಗಿದ್ದರು. ಪ್ರಶಸ್ತಿ ಘೋಷಣೆಯೇ ಆಗದಂತಹ ವರ್ಷಗಳೂ ಇವೆ. ಇದೇ ಮೊದಲ ಬಾರಿಗೆ ಐವರು ಸಾಧಕರಿಗೆ ಈ ಪ್ರಶಸ್ತಿ ಸಂದಿದೆ.

ಭಾರತ ರತ್ನ ಪುತ್ರಿಯರ ಸಂಭ್ರಮ

Advertisement

ಹೊಸದಿಲ್ಲಿ: ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್‌ ಹಾಗೂ ಹಸುರು ಕ್ರಾಂತಿಯ ಹರಿಕಾರ ಡಾ| ಎಂ.ಎಸ್‌. ಸ್ವಾಮಿನಾಥನ್‌ ಅವರ ಪುತ್ರಿಯರು ಸಂಭ್ರಮ ವ್ಯಕ್ತಪಡಿಸಿದ್ದಾರೆ.

ನರಸಿಂಹ ರಾವ್‌ ಅವರ ಪುತ್ರಿ ವಾಣಿ ದೇವಿ ಮಾತನಾಡಿ, ಪಿ.ವಿ.ಎನ್‌ ಕೇವಲ ತೆಲುಗು ಭೂಮಿಯ ಮಗ ಮಾತ್ರ ಅಲ್ಲ, ಇಡೀ ದೇಶದ ಪುತ್ರ. ಪಕ್ಷಗಳಾಚೆಗೆ ಅಂಥ ಸೇವೆಗಳನ್ನು ಸ್ಮರಿಸಿ, ಪ್ರಶಸ್ತಿ ಘೋಷಿಸಿರುವುದು ಪ್ರಧಾನಿ ಮೋದಿ ಅವರಿಗಿರುವ ಉತ್ತಮ ಮೌಲ್ಯಗಳನ್ನು ಸಾಬೀತು ಪಡಿಸುತ್ತದೆ ಎಂದಿದ್ದಾರೆ.
ಸ್ವಾಮಿನಾಥನ್‌ ಪುತ್ರಿ, ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ಸೌಮ್ಯಾ ಅವರು ಪ್ರತಿಕ್ರಿಯಿಸಿ, ಹಲವಾರು ಪ್ರಶಸ್ತಿಗಳು ಬಂದರೂ ನನ್ನ ತಂದೆ ಪ್ರತೀ ಬಾರಿ ಸ್ಫೂರ್ತಿ ಪಡೆಯುತ್ತಿದ್ದದ್ದು, ಜನರಿಗಾಗಿ ಅವರು ಮಾಡಿದ ಕಾರ್ಯಗಳು ಫ‌ಲಕೊಟ್ಟಾಗ ಮಾತ್ರ. ಇಂದು ಆ ಎಲ್ಲ ಕಾರ್ಯಗಳನ್ನೂ ಗುರುತಿಸಿ ಪ್ರಶಸ್ತಿ ನೀಡಲಾಗಿದೆ ಎಂದರು.

ಬಹಳ ಹಿಂದೆಯೇ ಸಲ್ಲಬೇಕಿದ್ದ ಗೌರವ ಇಂದು ಈ ಮೂವರಿಗೆ ಸಂದಿದೆ. ಬಹಳ ಕಾಲದ ಬಳಿಕ ಸರಕಾರವೊಂದು ಮೊದಲ ಬಾರಿಗೆ ಇಂಥ ನಿರ್ಣಯ ತೆಗೆದುಕೊಂಡಿದೆ. ವಿಶೇಷವಾಗಿ ಬಿಜೆಪಿ ಸರಕಾರವು ಇಂಥ ನಿರ್ಧಾರಗಳಲ್ಲಿ ರಾಜಕೀಯದ ಪರಧಿಗಳನ್ನು ಮೀರಿ ಸೇವೆ ಸ್ಮರಿಸುತ್ತದೆ.
ರಾಜನಾಥ ಸಿಂಗ್‌, ರಕ್ಷಣ ಸಚಿವ

ಪಿ.ವಿ.ನರಸಿಂಹ ರಾವ್‌, ಚೌಧರಿ ಚರಣ್‌ ಸಿಂಗ್‌ ಹಾಗೂ ಡಾ| ಎಂ.ಎಸ್‌. ಸ್ವಾಮಿನಾಥನ್‌ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿರುವುದನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಸ್ವಾಗತಿಸುತ್ತದೆ. ದೇಶಕ್ಕೆ ಇವರೆಲ್ಲರ ಅಗಾಧ ಕೊಡುಗೆಯನ್ನು ಸದಾ ಸ್ಮರಿಸಲಾಗುತ್ತದೆ.
ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

ಭಾರತ ರತ್ನ ಪ್ರಶಸ್ತಿ ಘೋಷಣೆಯು ಸಂತಸ ತಂದಿದೆ. ದೇಶದ ಆರ್ಥಿಕತೆಯನ್ನು ಅಭಿವೃದ್ಧಿಗೊಳಿಸುವಲ್ಲಿ ಪಿ.ವಿ.ನರಸಿಂಹ ರಾವ್‌ ಅವರು ಅಗಾಧ ಕೊಡುಗೆಯನ್ನು ನೀಡಿದ್ದಾರೆ. ರೈತ ನಾಯಕರಾದ ಚೌಧರಿ ಚರಣ್‌ ಸಿಂಗ್‌ ಹಾಗೂ ಪ್ರಮುಖ ಕೃಷಿ ವಿಜ್ಞಾನಿ ಸ್ವಾಮಿನಾಥನ್‌ ಅವರಿಗೂ ಈ ಪ್ರಶಸ್ತಿ ಸಂದಿರುವುದು ಸ್ವಾಗತಾರ್ಹ.
ರಾಜೀವ್‌ ಶುಕ್ಲಾ, ಕಾಂಗ್ರೆಸ್‌ ನಾಯಕ

ಭಾರತದ ಆರ್ಥಿಕತೆಗೆ, ಕೃಷಿ
ಕ್ಷೇತ್ರಕ್ಕೆ, ಅಭಿವೃದ್ಧಿಗಾಗಿ ಸ್ಮರಿಸಿದ ಭಾರತ ಮಾತೆಯ ಮೂವರು ಪ್ರಿಯ ಪುತ್ರರಿಗೆ ಭಾರತ ರತ್ನ ಘೋಷಣೆಯಾಗಿ ರು ವುದು ಸಂತಸ ತಂದಿದೆ. ಪ್ರಶಸ್ತಿ ಘೋಷಿಸಿದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು.
ಎಂ.ವೆಂಕಯ್ಯ ನಾಯ್ಡು, ಮಾಜಿ ಉಪ ರಾಷ್ಟ್ರಪತಿ

ಉತ್ತಮ ರಾಜಕೀಯ ಮತ್ತು ನೈತಿಕ ಮೌಲ್ಯಗಳನ್ನು ಹೊಂದಿದ್ದ ಅತ್ಯುತ್ತಮ ರಾಜಕಾರಣಿ ಪಿ.ವಿ.ನರಸಿಂಹ ರಾವ್‌ ಅವರಿಗೆ ಅತ್ಯುನ್ನತ ಭಾರತ ರತ್ನ ದೊರೆತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ. ದೇಶದ ಅಭಿವೃದ್ಧಿ ಪಥಕ್ಕೆ ಅತುತ್ತಮ ಕೊಡುಗೆ ನೀಡಿದ ಸಿಂಗ್‌ ಮತ್ತು ಸ್ವಾಮಿನಾಥನ್‌ ಅವರೂ ಪ್ರಶಸ್ತಿ ಭಾಜನರಾಗಿರುವು ಶ್ಲಾಘನಾರ್ಹ.
ಜಗನ್‌ ಮೋಹನ್‌ ರೆಡ್ಡಿ, ಆಂಧ್ರಪ್ರದೇಶ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next