Advertisement
ಎಂ.ಎಲ್ ಪದವಿ: ಬೀದರ ಜಿಲ್ಲೆ ಭಾಲ್ಕಿಯ ರತ್ನಮ್ಮ ಹಾಗೂ ದೇವಿದಾಸ ಪ್ಯಾಗೆ ಅವರ ಉದರದಲ್ಲಿ 1972ರ ಡಿಸೆಂಬರ್ 7 ರಂದು ಜನ್ಮ ತಾಳಿದ ಡಾ| ಪುಟ್ಟಮಣಿ ಪ್ರಾಥಮಿಕ ಹಂತದಿಂದ ಪದವಿ ವರೆಗಿನ ಶಿಕ್ಷಣವನ್ನು ಬೀದರನಲ್ಲೇ ಪೂರೈಸಿದ್ದಾರೆ. ಕಲ್ಬುರ್ಗಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಅಧ್ಯಯನ ಪೂರೈಸಿರುವ ಅವರು ಡಾ| ವಿ. ಶಿವಾನಂದ ಮಾರ್ಗದರ್ಶನದಲ್ಲಿ ಹೈದ್ರಾಬಾದ ಕರ್ನಾಟಕ ಶಿಲಾ ಶಾಸನಗಳು ಒಂದು ಅಧ್ಯಯನ ವಿಷಯದಲ್ಲಿ ಎಂ.ಎಲ್ ಪದವಿ ಪಡೆದಿದ್ದಾರೆ.
Related Articles
Advertisement
ಹೆಗಲಿಗೆ ಹೆಗಲು ಕೊಟ್ಟ ಪತಿ: ಸ್ನಾತ್ತಕೋತ್ತರ ಪ್ರಥಮ ವರ್ಷದಲ್ಲಿದ್ದಾಗಲೇ ಮದುವೆಯಾಯಿತು. ಇನ್ನೇನು ಓದು ನಿಂತು ಹೋಯಿತು ಎನ್ನುವಷ್ಟರಲ್ಲೇ ಬಾಳ ಸಂಗಾತಿಯಾದ ಪತಿ ಪರಮೇಶ್ವರ ಮುಂದಿನ ಓದಿಗೆ ಹೆಗಲಿಗೆ ಹೆಗಲು ಕೊಟ್ಟು ಪ್ರೋತ್ಸಾಹಿಸದಿದ್ದರೆ ಬಹುತೇಕ ನಾನು ಈ ಮಟ್ಟಕ್ಕೆ ಬೆಳೆಯುವುದು ಕಷ್ಟಸಾಧ್ಯವಾಗಿತ್ತು. ಪತಿ ಹೆಸರಿಗೆ ತಕ್ಕಂತೆ ನನ್ನ ಪಾಲಿನ ಪರಮೇಶ್ವರನೇ ಆಗಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಡಾ| ಪುಟ್ಟಮಣಿ.
ವಿಚಾರ ವಾಹಿನಿ (ವೈಚಾರಿಕ ಲೇಖನಗಳ ಸಂಗ್ರಹ), ಹೈದ್ರಾಬಾದ ಕರ್ನಾಟಕದ ಶಿಲಾ ಶಾಸನಗಳು, ಹೈದ್ರಾಬಾದ್ ಕರ್ನಾಟಕ ಭಾಗದ ಗಾದೆ ಮಾತುಗಳು, ಸಾಹಿತ್ಯ ಸನ್ನಿ, ಉರಿಲಿಂಗ ಪೆದ್ದಿ ಸೇರಿ ಈ ವರೆಗೆ 5ಕ್ಕೂ ಅಧಿಕ ಕೃತಿಗಳು ಪ್ರಕಟಗೊಂಡರೆ ಇನ್ನೂ ಹಲವು ವೈಚಾರಿಕ ಕೃತಿಗಳು ಅಚ್ಚಿನಲ್ಲಿವೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಜರ್ನಲ್ಸ್‌ಗಳಲ್ಲಿ 13ಕ್ಕೂ ಅಧಿಕ ವಿಶಿಷ್ಟ ಲೇಖನಗಳು ಪ್ರಕಟಗೊಂಡಿವೆ.
ಸಂಪಾದಿತ ಕೃತಿಗಳಲ್ಲಿ ಈ ವರೆಗೆ ಇವರ 19 ಲೇಖನಗಳು ಪ್ರಕಟಗೊಂಡಿವೆ. ನೂರಾರು ಕಡೆ ವಿಚಾರ ಸಂಕಿರಣಗಲ್ಲಿ ವಿಶೇಷ ಉಪನ್ಯಾಸ ನೀಡಿದ್ದಾರೆ. ಈ ವರೆಗೆ ನಡೆದ 25ಕ್ಕೂ ಅಧಿಕ ಸಮ್ಮೇಳನಗಳಲ್ಲಿ ಮೂಢನಂಬಿಕೆ ತೊಡೆದು ಹಾಕಿ, ವೈಜ್ಞಾನಿಕ ಮನೋಭಾವನೆ ಬೆಳೆಸುವ ವೈಚಾರಿಕ ಪ್ರಬಂಧ ಮಂಡಿಸಿದ ಖ್ಯಾತಿ ಡಾ| ರೂಗನ್ ಅವರಿಗಿದೆ. ಸಮುದಾಯದತ್ತ ರೇಡಿಯೋ ಕಾರ್ಯಕ್ರಮದಲ್ಲಿ ಇವರೇ ರಚಿಸಿ, ನಿರ್ದೇಶಿಸಿದ ನಾಟಕ ಪ್ರಸಾರಗೊಂಡಿದೆ.
ಕಲ್ಬುರ್ಗಿ ಆಕಾಶವಾಣಿಯಲ್ಲಿ ಪ್ರಸಾರಗೊಂಡ 15ಕ್ಕೂ ಅಧಿಕ ಚಿಂತನ ಕುರಿತು ಕೇಳುಗರ ಪ್ರಶಂಸೆಗೆ ಪತ್ರರಾಗಿದ್ದಾರೆ. ಅನೇಕ ವಿದ್ಯಾ ಸಂಸ್ಥೆ ಸೇರಿದಂತೆ ಅನೇಕ ಸಾಹಿತ್ಯ ಮತ್ತು ಸಮಾಜ ಸೇವಾ ಸಂಘಟನೆಗಳು ಡಾ| ಪುಟ್ಟಮಣಿ ರೂಗನ್ ಅವರನ್ನು ಸನ್ಮಾನಿಸಿ, ಗೌರವಿಸಿವೆ. ಶರಣಬಸವೇಶ್ವರ ಸಂಸ್ಥಾನ ಅಸಂಖ್ಯಾತ ಕಾರ್ಯಕ್ರಮಗಳಲ್ಲಿ ಉಪನ್ಯಾಸ ನೀಡಿದ್ದಾರೆ.
ಒಬ್ಬ ಪ್ರಾಧ್ಯಾಪಕಿ, ಲೇಖಕಿಯಾಗಿ ಅನೇಕ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಪ್ರಬಂಧ ಮಂಡಿಸಿದ್ದೇನೆ. ಆದರೆ ಇಂದು ಕೊಟ್ಟೂರಿನಲ್ಲಿ ನಡೆಯುತ್ತಿರುವ ಕನ್ನಡ ಜಾತ್ರೆಯಲ್ಲಿ ಸಮ್ಮೇಳನ ಸರ್ವಾಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದ್ದು ಖುಷಿ ತಂದಿದೆ. ಅಂದು ಪತಿ ಓದಿಗೆ ಪ್ರೋತ್ಸಾಹಿಸಿದ್ದರ ಪರಿಣಾಮಸರ್ವಾಧ್ಯಕ್ಷೆಯಾಗಿ ಆಯ್ಕೆಯಾಗಲು ಸಾಧ್ಯವಾಗಿದೆ. ಪರಿಷತ್ ಅಧ್ಯಕ್ಷರ ಪ್ರೋತ್ಸಾಹಕ್ಕೆ ಋಣಿಯಾಗಿರುವೆ.
ಡಾ| ಪುಟ್ಟಮಣಿ ರೂಗನ್, ಸಮ್ಮೇಳನ ಸರ್ವಾಧ್ಯಕ್ಷೆ ಸಮ್ಮೇಳನ ಸಂಬಂಧ 120*120 ಅಡಿ ಅಳತೆ ಮಹಾಮಂಟಪ ಅಳವಡಿಸಲಾಗಿದೆ. ಮುಖ್ಯ ವೇದಿಕೆಯಲ್ಲಿ 30 ಆಸನ, ಪ್ರೇಕ್ಷಕರ ಗ್ಯಾಲರಿಯಲ್ಲಿ 1500 ಆಸನ ವ್ಯವಸ್ಥೆ ಮಾಡಲಾಗಿದೆ. ಸರ್ಕಾರಿ ಪ.ಪೂ ಕಾಲೇಜು ಪ್ರಾಂಗಣದಿಂದ ಸಮ್ಮೇಳನ ವೇದಿಕೆವರೆಗೆ ನಡೆಯುವ ಮೆರವಣಿಗೆಯಲ್ಲಿ ವೈವಿಧ್ಯಮಯ ಜಾನಪದ ಕಲಾತಂಡಗಳು ಪ್ರದರ್ಶನ ನೀಡಲಿವೆ.
ಸಚ್ಚಿದಾನಂದ ಮಠಪತಿ, ಕಸಾಪ ಅಧ್ಯಕ್ಷ, ಹುಮನಾಬಾದ ಶಶಿಕಾಂತ ಕೆ.ಭಗೋಜಿ