ಮುಂಬಯಿ, ಅ. 30: ಇತ್ತೀಚೆಗೆ ನಿಧನ ಹೊಂದಿದ ಬಿಲ್ಲವರ ಅಸೋಸಿ ಯೇಶನ್ ಮುಂಬಯಿ ಮಾಜಿ ಅಧ್ಯಕ್ಷ, ಭಾರತ್ ಬ್ಯಾಂಕ್‌ನ ಮಾಜಿ ಕಾರ್ಯಾ ಧ್ಯಕ್ಷ ಹಾಗೂ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಮಾಜಿ ಉಪಾಧ್ಯಕ್ಷ ಜಯ ಸಿ. ಸುವರ್ಣ ಅವರಿಗೆ ಶ್ರದ್ಧಾಂಜಲಿ ಮತ್ತು ನುಡಿನಮನ ಕಾರ್ಯ ಕ್ರಮವು ಅ. 25ರಂದು ಸಂಜೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ಹಾಗೂ ಅಧ್ಯಕ್ಷ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರ ನೇತೃತ್ವದಲ್ಲಿ ವೆಬಿನಾರ್ ಮೂಲಕ ನಡೆಯಿತು.
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅವರು ಸಂತಾಪ ಸೂಚಿಸಿ, ಜಯ ಸಿ. ಸುವರ್ಣರು ಬಿಲ್ಲವ ಸಮಾಜದಲ್ಲಿ ಕೋಟಿ-ಚೆನ್ನಯರಂತೆ ಹಾಗೂ ನಾರಾಯಣಗುರುಗಳಂತೆ ಇತಿಹಾಸ ನಿರ್ಮಿಸಿ ¨ªಾರೆ. ಇಂತಹ ಸಂಘಟಕ ಬಿಲ್ಲವ ಸಮಾಜ ದಲ್ಲಿ ಇನ್ನು ಹುಟ್ಟಲು ಅಸಾಧ್ಯ. ಅವರು ಹೇಳಿದಂತೆ ಭಾರತ್ ಬ್ಯಾಂಕ್‌ನ ನೂರ ಎರಡು ಶಾಖೆಗಳನ್ನು ತೆರೆದು ಇಹ ಲೋಕ ತ್ಯಜಿಸಿದ್ದಾರೆ. ಜಿಲ್ಲೆಗಳ ಅನೇಕ ರಾಜಕರಣಿಗಳು ಗೌರವಿಸುವಂತಹ ವ್ಯಕ್ತಿತ್ವ ಹೊಂದಿದ್ದ ಜಯ ಸಿ. ಸುವರ್ಣರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ ಎಂದರು.
ಸಮಿತಿಯ ಉಪಾಧ್ಯಕ್ಷ, ಬಿಲ್ಲವರ ಅಸೋಸಿಯೇಶನ್ ಮುಂಬ ಯಿಯ ಮಾಜಿ ಅಧ್ಯಕ್ಷ ನಿತ್ಯಾ ನಂದ ಡಿ. ಕೋಟ್ಯಾನ್ ಅವರು ಜಯ ಸುವರ್ಣರ ವ್ಯಕ್ತಿತ್ವ-ಸಾಧನೆ ಬಗ್ಗೆ ಮಾತನಾಡಿ, ಜಯ ಸುವರ್ಣರು ಸಮಾಜ ಮೆಚ್ಚುವ ಉತ್ತಮ ಕೆಲಸ ಮಾಡಿ ದೇವರ ಪಾದ ಸೇರಿದ್ದಾರೆ. ಸಮಿತಿಯ ಉಪಾಧ್ಯ ಕ್ಷರಾಗಿ ಶ್ರಮಿಸಿದ್ದಾರೆ. ಕರ್ನಾಟಕ ಸರಕಾರದಿಂದ ಪ್ರಶಸ್ತಿ ಪಡೆದ ಜಯ ಸುವರ್ಣ ರಿಂದ ಇನ್ನೂ ಸಮಾಜ ಸೇವೆ ಆಗಬೇಕಿತ್ತು. ಅವರ ಅಂತಿಮ ದರ್ಶನಕ್ಕೆ ಸಾವಿರಾರು ಜನರು ಸೇರಿದ್ದು ಅವರ ವ್ಯಕ್ತಿತ್ವಕ್ಕೆ ಸಂದ ಗೌರವವಾಗಿದೆ ಎಂದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನ್‌ದಾಸ್ ಅವರು ಸಮಿ ತಿಯ ಪರವಾಗಿ ಶ್ರದ್ಧಾಂಜಲಿ ಸಲ್ಲಿಸಿ, ಜಯ ಸುವರ್ಣರು ಎಲ್ಲ ಸಂಘಟನೆಗಳಲ್ಲಿ ಸಮಾನತೆಯಿಂದ ನಡೆಯುತ್ತಿದ್ದ ಮಹಾನ್ ವ್ಯಕ್ತಿ. ಭಾರತ್ ಬ್ಯಾಂಕ್‌ನ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ. ಅವರಿಗೆ ಸಮಿತಿಯ ಪರವಾಗಿ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇವೆ ಎಂದರು.
ಜಗನ್ನಾಥ ಅಧಿಕಾರಿ, ನ್ಯಾಯವಾದಿ ಪ್ರಕಾಶ್ ಎಲ್. ಶೆಟ್ಟಿ, ಸಮಿತಿಯ ಮಾಜಿ ಅಧ್ಯ ಕ್ಷ ರಾದ ವಿಶ್ವನಾಥ ಮಾಡ, ಧರ್ಮಪಾಲ ದೇವಾಡಿಗ, ಹರೀಶ್ ಕುಮಾರ್ ಶೆಟ್ಟಿ, ಜವಾಬ್ ಅಧ್ಯಕ್ಷರಾದ ಸಿಎ ಐ. ಆರ್. ಶೆಟ್ಟಿ, ಡಾ| ಆರ್. ಕೆ. ಶೆಟ್ಟಿ, ಹಿರಿಯ ಕಾರ್ಮಿಕ ನಾಯ ಕ ರಾದ ಫೆಲಿಕ್ಸ್ ಡಿ’ಸೋಜಾ, ಸಮಿ ತಿಯ ಉಪಾಧ್ಯಕ್ಷರಾದ ದನಂಜಯ ಶೆಟ್ಟಿ, ಜಿ. ಟಿ. ಆಚಾರ್ಯ, ದೇವಾಡಿಗ ಸಂಘ ಮುಂಬ ಯಿಯ ಅಧ್ಯಕ್ಷ ರವಿ ಎಸ್. ದೇವಾಡಿಗ, ಕುಲಾಲ ಸಂಘ ಮುಂಬಯಿಯ ಅಧ್ಯಕ್ಷ ದೇವದಾಸ್ ಕುಲಾಲ…, ವಿದ್ಯಾದಾಯಿನಿ ಸಭಾದ ಕಾರ್ಯದರ್ಶಿ ಚಿತ್ರಾಪು ಕೆ. ಎಂ. ಕೋಟ್ಯಾನ್, ಡಾ| ಪ್ರಭಾಕರ ಶೆಟ್ಟಿ, ಬೋಳ ಸಮಿತಿಯ ಗೌರವ ಕಾರ್ಯದರ್ಶಿ ಪ್ರೊ| ಶಂಕರ್ ಉಡುಪಿ, ಭಂಡಾರಿ ಸೇವಾ ಸಂಘ ಮುಂಬಯಿಯ ಅಧ್ಯಕ್ಷ ಅಡ್ವೊಕೇಟ್ ಆರ್. ಎಂ. ಭಂಡಾರಿ ಮೊದಲಾದವರು ಸಂತಾಪ ಸೂಚಿಸಿದರು. ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಇದರ ಅಧ್ಯಕ್ಷ ಕೆ. ಎಲ್. ಬಂಗೇರ ಅವರ ಸಂತಾಪ ಸಂದೇಶವನ್ನು ಪ್ರಧಾನ ಕಾರ್ಯದರ್ಶಿ ವಾಚಿಸಿದರು. ದಯಾನಂದ ಅಮೀನ್, ಎಂ. ಎಂ. ಶೆಟ್ಟಿ, ಹ್ಯಾರಿ ಸಿಕ್ವೇರಾ ಮತ್ತಿತರು ಉಪಸ್ಥಿತರಿದ್ದರು. ವೆಬಿನಾರ್ ಮೂಲಕ ಸಭೆ ನಡೆಸಲು ಉಡುಪಿಯ ತೇಜಸ್ವಿ ಶಂಕರ್ ಸಹಕರಿಸಿದ್ದರು.