Advertisement

ಪ್ರಿಯತಮೆಯ ಅಶ್ಲೀಲ ಫೋಟೋಗಳ ರವಾನೆ: ಪ್ರಿಯಕರನ ಬಂಧನ

12:41 PM Jul 14, 2017 | |

ಮುಂಬಯಿ: ತನ್ನ  ಪ್ರೇಯಸಿಯ ಅಶ್ಲೀಲ,ಆಕ್ಷೇಪಕಾರಿ  ಫೋಟೋಗಳನ್ನು ಕ್ಲಿಕ್ಕಿಸಿದ್ದೇ ಅಲ್ಲದೆ  ತನ್ನ  ಸ್ನೇಹಿತರೊಡಗೂಡಿ  ಈ ಫೋಟೋ ಗಳನ್ನು  ವಾಟ್ಸಾಪ್‌ನಲ್ಲಿ ಇತರರಿಗೆ ರವಾನಿಸಿದ  ಆರೋಪದ ಮೇಲೆ ಪೊಲೀಸರು ಸಂತ್ರಸ್ತ  ಯುವತಿಯ ಪ್ರಿಯಕರ ರಾಕೇಶ್‌ ಸಿಂಗ್‌ನನ್ನು  ಬಂಧಿಸಿದ್ದಾರೆ.  

Advertisement

ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲ ತಾಣಗಳ ಮೂಲಕ ರವಾನಿಸಲು ಆರೋಪಿ  ರಾಕೇಶ್‌ ಸಿಂಗ್‌ಗೆ  ಸಹಕರಿಸಿದ್ದ  ಆತನ ಸ್ನೇಹಿತರಾದ  ಅಖೀಲೇಶ್‌ ಸಿಂಗ್‌ ಮತ್ತು  ಕುಶಾಲ್‌ ಯಾದವ್‌ ವಿರುದ್ಧವೂ  ಸಂತ್ರಸ್ತ ಯುವತಿ  ಪೊಲೀಸರಿಗೆ  ದೂರು  ನೀಡಿದ್ದು  ಇವರೀರ್ವರು  ಸದ್ಯ  ತಲೆಮರೆಸಿಕೊಂಡಿದ್ದಾರೆ. 

ಬಂಧಿತ ರಾಕೇಶ್‌ ಸಿಂಗ್‌ನನ್ನು  ನ್ಯಾಯಾಲಯಕ್ಕೆ  ಹಾಜರುಪಡಿಸಿದ್ದು  ಜು.14ರವರೆಗೆ  ಈತನಿಗೆ  ಪೊಲೀಸ್‌  ಕಸ್ಟಡಿ ವಿಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next