Advertisement
“ಚಷ್ಮಾ-5” ಪರಮಾಣು ವಿದ್ಯುತ್ ಸ್ಥಾವರವು ಪಂಜಾಬ್ ಪ್ರಾಂತ್ಯದ ಮಿಯಾನ್‌ವಾಲಿ ಜಿಲ್ಲೆಯ ಚಷ್ಮಾದಲ್ಲಿ ನಿರ್ಮಾಣವಾಗಲಿದೆ. ಒಪ್ಪಂದಕ್ಕೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಸಾಕ್ಷಿಯಾದರು. ಈ ವೇಳೆ ಮಾತನಾಡಿದ ಅವರು, “ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ವಿದ್ಯುತ್ ಸ್ಥಾವರ ಸ್ಥಾಪನೆಗೆ ಚೀನಾ ಹೂಡಿಕೆ ಮಾಡುತ್ತಿರುವುದು ಉಭಯ ರಾಷ್ಟ್ರಗಳ ನಡುವಿನ ಆರ್ಥಿಕ ಸಹಕಾರವನ್ನು ಹೆಚ್ಚಿಸಲಿದೆ. ಈ ಯೋಜನೆಯನ್ನು ಶೀಘ್ರ ಆರಂಭಿಸಲಾಗುವುದು,’ ಎಂದರು.
ತೀವ್ರ ಆರ್ಥಿಕ ದುಸ್ಥಿತಿ ಎದುರಿಸುತ್ತಿರುವ ಪಾಕಿಸ್ತಾನವು, ತನ್ನ ಕರಾಚಿ ಬಂದರು ಟರ್ಮಿನಲ್ಸ್ ಅನ್ನು ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ತೆಕ್ಕೆಗೆ ನೀಡುವ ನಿಟ್ಟಿನಲ್ಲಿ ಸಮಿತಿಯೊಂದನ್ನು ರಚಿಸಿದೆ. ಒಪ್ಪಂದ ಅಂತಿಮವಾದರೆ ಪಾಕಿಸ್ತಾನಕ್ಕೆ ತುರ್ತು ಆರ್ಥಿಕ ಅನುದಾನ ಸಿಗಲಿದೆ. ಪಾಕ್ ಹಣಕಾಸು ಸಚಿವ ಇಶಾಕ್ ದಾರ್ ನೇತೃತ್ವದಲ್ಲಿ ಅಂತರ್ ಸರ್ಕಾರಿ ವಾಣಿಜ್ಯ ವಹಿವಾಟುಗಳ ಸಂಪುಟ ಸಮಿತಿಯು ಸೋಮವಾರ ಸಭೆ ನಡೆಸಿತು. ಈ ವೇಳೆ ಕರಾಚಿ ಬಂದರು ಟ್ರಸ್ಟ್ ಮತ್ತು ಯುಎಇ ಸರ್ಕಾರ ನಡುವೆ ವಾಣಿಜ್ಯ ಒಪ್ಪಂದ ಏರ್ಪಡುವ ನಿಟ್ಟಿನಲ್ಲಿ ಸಮಿತಿ ರಚಿಸಲು ನಿರ್ಧರಿಸಿತು. ಈ ಸಮಿತಿಯು ಒಪ್ಪಂದದ ಅಂತಿಮ ರೂಪುರೇಷೆಗಳನ್ನು ಸಿದ್ಧಪಡಿಸಲಿದೆ.