Advertisement
ಉತ್ತರ ಕೊರಿಯಾದಿಂದ ಕ್ಷಿಪಣಿ ಹೊರಟ ತತ್‌ಕ್ಷಣವೇ ಜಪಾನ್‌ನ ಹೊಕ್ಕೆ„ಡೋ ದ್ವೀಪದಲ್ಲಿ ತುರ್ತು ಸಂದೇಶ ಹೊರಡಿಸಲಾಗಿದೆ. “ಕೂಡಲೇ ಕಟ್ಟಡ ಸಹಿತ ಎಲ್ಲೆಲ್ಲಿ ಅಡಗಿ ಕುಳಿತುಕೊಳ್ಳಲು ಸಾಧ್ಯವೋ ಅಲ್ಲಿಗೆ ಹೋಗಿ’ ಎಂದು ಎಚ್ಚರಿಕೆ ರವಾನಿಸಲಾಗಿತ್ತು. ಜತೆಗೆ, ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು, ಉತ್ತರ ಕೊರಿಯಾಕ್ಕೆ ಕಠಿನ ಎಚ್ಚರಿಕೆಯನ್ನೂ ನೀಡಿದ್ದಾರೆ.
Related Articles
Advertisement
ಬೆಳ್ಳಂಬೆಳಗ್ಗೆ “ದುಢುಂ’ಸ್ಥಳೀಯ ಕಾಲಮಾನದ ಪ್ರಕಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಈ ದಾಳಿ ನಡೆದಿದ್ದು, ಉತ್ತರ ಕೊರಿಯಾವೇ ಹೇಳಿಕೊಂಡಿರುವಂತೆ ಖಂಡಾಂತರ ಕ್ಷಿಪಣಿ (ಐಸಿಬಿಎಂ) ಕೇವಲ 15 ನಿಮಿಷಗಳ ಅಂತರದಲ್ಲಿ 1,240 ಮೈಲು ದೂರ ತಲುಪಿ, 19 ನಿಮಿಷದಲ್ಲಿ 2,300 ಮೈಲು ದೂರ ಕ್ರಮಿಸಿದೆ. ಬಹಳ ಸುಲಭವಾಗಿ ಉತ್ತರ ಕೊರಿಯಾದಿಂದ 2,100 ಮೈಲು ದೂರದಲ್ಲಿರುವ ಅಮೆರಿಕದ ಪೆಸಿಫಿಕ್ ಪ್ರದೇಶ ಗುವಾಮ್‌ಗೆ ಅಪ್ಪಳಿಸಲಿದೆ ಎಂದು ಹೇಳುವ ಮೂಲಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದೆ. ಅಚ್ಚರಿ ಎಂದರೆ ಕ್ಷಿಪಣಿ ಜಪಾನ್ ಜಲತೀರ ದಾಟಿ ಅಮೆರಿಕದತ್ತ ಮುಖಮಾಡಿ ಸಾಗರಕ್ಕೆ ಬಿದ್ದಿದೆ. ಇದೀಗ ಪರೀಕ್ಷೆಗೊಳಪಡಿಸಿದ ಕ್ಷಿಪಣಿ ಸೆಪ್ಟೆಂಬರ್ 3ರಂದು ಪರೀಕ್ಷಿಸಿದ ಕ್ಷಿಪಣಿಗಿಂತಲೂ ಹೆಚ್ಚಿನ ಸಾಮರ್ಥ್ಯದ್ದೂ ಎಂದು ಹೇಳಲಾಗಿದೆ. ಹೌಹಾರಿದ ಜಪಾನ್ ಜನತೆ
ಉತ್ತರ ಕೊರಿಯಾ ಕ್ಷಿಪಣಿ ಉಡಾಯಿಸಿದ ಬೆನ್ನಲ್ಲೇ ಜಪಾನ್‌ನ ದ್ವೀಪ ಹೊಕ್ಕೆ„ಡೋ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಯಿತು. ಸೈರನ್ ಹಾಕಿ, ಜೋರಾದ ಧ್ವನಿಯಲ್ಲಿ ಕ್ಷಿಪಣಿ ದಾಳಿ ಎಂದೇ ಎಚ್ಚರಿಸಲಾಯಿತು. ತಕ್ಷಣ ದ್ವೀಪದ ನಿವಾಸಿಗಳು ತಮಗೆ ತರಬೇತಿ ನೀಡಿದಂತೆ ಕ್ಷಿಪಣಿ, ಕ್ಷಿಪಣಿ, ಕ್ಷಿಪಣಿ ಎಂದು ನೆಲಮಾಳಿಗೆಗಳಲ್ಲಿ ಅವತುಕೊಂಡರು. ಪ್ರಾಣ ರಕ್ಷಿಸಿಕೊಳ್ಳಲು ಸುರಕ್ಷತಾ ಸ್ಥಳ ಸೇರಿಕೊಂಡರು. ಆದರೆ ಕ್ಷಿಪಣಿ ಕೆಲ ನಿಮಿಷಗಳಲ್ಲಿ ಸಾಗರಕ್ಕೆ ಬಿದ್ದ ಮಾಹಿತಿ ಪಡೆದು ನಿಟ್ಟುಸಿರು ಬಿಟ್ಟರು. ಭಾರತ ನೆಲದಿಂದ ಕೊರಿಯಾಗೆ ಎಚ್ಚರಿಕೆ
ಜಪಾನ್ ಪ್ರಧಾನಿ ಶಿಂಜೋ ಅಬೆ ಗುರುವಾರವಷ್ಟೇ ಭಾರತ ಪ್ರವಾಸದಲ್ಲಿದ್ದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಅಬೆ ಅವರ ಜಂಟಿ ಪತ್ರಿಕಾಗೋಷ್ಠಿ ನಡೆಸುವಾಗ ಉತ್ತರ ಕೊರಿಯಾದ ಅಟಾಟೋಪ ಖಂಡಿಸಲಾಗಿದೆ. ಅಲ್ಲದೆ ಅಣ್ವಸ್ತ್ರ ಮತ್ತು ಕ್ಷಿಪಣಿ ಯೋಜನೆಗಳನ್ನು ಕೈಬಿಡುವಂತೆ ಮೋದಿ ಮತ್ತು ಅಬೆ ಒತ್ತಾಯಿಸಿದ್ದಾರೆ. ಇದರ ಜತೆಯಲ್ಲಿ ಈ ಹಿಂದೆ ಉತ್ತರ ಕೊರಿಯಾ ಪರಮಾಣು ಅಸ್ತ್ರ ಅಭಿವೃದ್ಧಿಪಡಿಸಿಕೊಳ್ಳಲು ಸಹಾಯ ಮಾಡಿದ್ದ ಪಾಕಿಸ್ಥಾನದ ಪಾತ್ರವನ್ನೂ ಪ್ರಸ್ತಾವಿಸಿರುವ ಈ ನಾಯಕರು, ಉತ್ತರ ಕೊರಿಯಾಗೆ ಸಹಾಯ ಮಾಡುತ್ತಿರುವ ಎಲ್ಲ ದೇಶಗಳನ್ನು ಹೊಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಈ ಮೂಲಕ ಒಂದೇ ಕಲ್ಲಿಗೆ ಚೀನ ಮತ್ತು ಪಾಕಿಸ್ಥಾನಕ್ಕೆ ಗುರಿ ಇಟ್ಟು ಹೊಡೆದಿದ್ದಾರೆ. ಮತ್ತೂಂದು ಪರೀಕ್ಷೆ ?
ಉ. ಕೊರಿಯಾ ಇನ್ನೊಂದು ಅಣ್ವಸ್ತ್ರ ಕ್ಷಿಪಣಿ ಪರೀಕ್ಷೆಗೊಳಪಡಿಸುವ ಲೆಕ್ಕಾಚಾರದಲ್ಲಿದೆ. ಇದು ಈಗಾಗಲೇ ಪರೀಕ್ಷಿಸಲಾದ ಕ್ಷಿಪಣಿಗಳಿಗಿಂತ ಸಾಮರ್ಥ್ಯದಲ್ಲೂ, ಕ್ರಮಿಸುವ ದೂರ ದಲ್ಲೂ ಅತ್ಯುತ್ತಮ ಎಂದೇ ಹೇಳಲಾಗು ತ್ತಿದೆ. ಜಪಾನ್ ದಾಟಿ ಪೆಸಿಫಿಕ್ ಸಾಗರ ದಲ್ಲಿ (ಅಮೆರಿಕಕ್ಕೆ ಹತ್ತಿರದಲ್ಲಿ) ಬೀಳಿಸು ವುದೇ ಗುರಿ ಎಂದೂ ಹೇಳಲಾಗಿದೆ. ಉತ್ತರ ಕೊರಿಯಾದ ಉದ್ದೇಶ ಏನೆಂದು ನಾವು ಊಹಿಸಲೂ ಸಾಧ್ಯವಾಗ್ತಿಲ್ಲ. ಬಹುಶಃ ಅವರ ಟಾರ್ಗೆಟ್ ಗುವಾಮ್ ಆಗಿರಬಹುದು. ಆದರೆ
ಅಮೆರಿಕ ಉತ್ತರ ಕೊರಿಯಾ ವಿಚಾರದಲ್ಲಿ ತನ್ನ ನಿಲುವನ್ನು ಬದಲಿಸಲ್ಲ.
ಇತುನೋರಿ ಒನೊಡೇರಾ, ಜಪಾನ್ ರಕ್ಷಣಾ ಸಚಿವ ಉತ್ತರ ಕೊರಿಯಾದ್ದು ರಾಕ್ಷಸ ಪ್ರವೃತ್ತಿ. ಕ್ಷಿಪಣಿ ಪರೀಕ್ಷೆ ಸಂಬಂಧ ಅಮೆರಿಕ ಸೇನೆ ಮಾತುಕತೆ ನಡೆಸಲು ತಯಾರಿಲ್ಲ. ಅದಕ್ಕೆ ತಕ್ಕುದಾದ ಉತ್ತರವನ್ನು ನೀಡಲಿದೆ.
ಜಿಮ್ ಮ್ಯಾಟ್ಟಿಸ್, ಅಮೆರಿಕ ರಕ್ಷಣಾ ಕಾರ್ಯದರ್ಶಿ ವಿಶ್ವದ ಶಾಂತಿ ಕೆಡಿಸಲು ಉತ್ತರ ಕೊರಿಯಾ ಮುಂದಾಗಿದೆ. ಈ ವರ್ತನೆ ಖಂಡನೀಯ. ಮತ್ತೆ ನಿಯಮ ಉಲ್ಲಂ ಸಿದ್ದಕ್ಕೆ ವಿಶ್ವಸಂಸ್ಥೆ ತಕ್ಷಣ ಈ ಬಗ್ಗೆ
ಗಂಭೀರ ಚಿಂತನೆ ನಡೆಸಿ ನಿರ್ಬಂಧ ಹೇರಬೇಕಿದೆ. ಇಂಥ ವರ್ತನೆಗೆ ಜಗತ್ತೇ ಸೂಕ್ತ ಸಂದೇಶ ರವಾನಿಸಬೇಕು.
ಶಿಂಜೋ ಅಬೆ, ಜಪಾನ್ ಪ್ರಧಾನಿ ಒಂದೊಮ್ಮೆ ಉತ್ತರ ಕೊರಿಯಾ ಅಮೆರಿಕ ಅಥವಾ ನಮ್ಮ ಮೇಲೆ ದಾಳಿ ನಡೆಸಿದಲ್ಲಿ, ನಾವೂ ಬಲಪ್ರದರ್ಶನ ಮಾಡಿ ತೋರಿಸಬೇಕಾಗುತ್ತದೆ. ಮತ್ತೆ ತಲೆ ಎತ್ತಲಾಗದ ಪರಿಸ್ಥಿತಿ ಎದುರಿಸಬೇಕಾಗಿ ಬರಬಹುದು.
ಮೂನ್ ಜೇ-ಇನ್, ದಕ್ಷಿಣ ಕೊರಿಯಾ ಅಧ್ಯಕ್ಷ