Advertisement

ಅಣ್ವಸ್ತ್ರ ಬಲ ವೃದ್ಧಿಯತ್ತ ಭಾರತ : ಸದ್ಯ ನಮ್ಮ ಬಳಿ ಇರುವುದು 156 ಪರಮಾಣು ಅಸ್ತ್ರ 

02:12 AM Jun 16, 2021 | Team Udayavani |

ಜಗತ್ತಿನ ಎಲ್ಲ ದೈತ್ಯ ರಾಷ್ಟ್ರಗಳು ತಮ್ಮ ಶಸ್ತ್ರಾಸ್ತ್ರಗಳನ್ನು ಆಧುನೀಕರಣಗೊಳಿಸುವ ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಚೀನ ಮಿಕ್ಕೆಲ್ಲ ದೇಶಗಳಿಗಿಂತ ಮುಂದಿದೆ. ಪಾಕಿಸ್ಥಾನ ಕೂಡ ಇದೇ ಕಾರ್ಯಕ್ಕೆ ಮುಂದಾಗಿದೆ. ಇವರೆಡೂ ರಾಷ್ಟ್ರಗಳ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಭಾರತ ಕೂಡ ಮುನ್ನೆಚ್ಚರಿಕೆ ಕ್ರಮವಾಗಿ ತನ್ನ ಪಡೆಗಳನ್ನು, ಶಸ್ತ್ರಾಸ್ತ್ರಗಳನ್ನು ಆಧುನೀಕರಣಗೊಳಿಸಲು ಮುಂದಾಗಿದೆ.

Advertisement

ಉನ್ನತ 5ರಲ್ಲಿ ಭಾರತ
2016ರಿಂದ 2020ರ ವರೆಗೆ ಅಣ್ವಸ್ತ್ರಗಳನ್ನು ಅಗಾಧವಾಗಿ ಹೆಚ್ಚಿಸಿರುವ ಉನ್ನತ 5 ರಾಷ್ಟ್ರಗಳಲ್ಲಿ ಭಾರತವೂ ಸೇರಿದೆ. ಭಾರತ, ಸೌದಿ ಅರೇಬಿಯಾ, ಈಜಿಪ್ಟ್, ಆಸ್ಟ್ರೇಲಿಯಾ ಮತ್ತು ಚೀನ ಈ ಟಾಪ್‌ 5 ದೇಶಗಳು.

ಫ್ಲೂಟೋನಿಯಂ ಉತ್ಪಾದನೆಗೆ ಆದ್ಯತೆ
ಪರಮಾಣು ಶಸ್ತ್ರಾಸ್ತ್ರಗಳನ್ನು ಉತ್ಪಾದಿಸಲು ಹೈಲಿ ಎನ್‌ರಿಚ್‌x ಯುರೇನಿಯಂ (ಎಚ್‌ಇಯು) ಅಥವಾ ಫ್ಲೂಟೋನಿಯಂ ಬೇಕು. ಭಾರತ ಮತ್ತು ಇಸ್ರೇಲ್‌ ಫ್ಲೂಟೋನಿಯಂ ಹೆಚ್ಚು ಉತ್ಪಾದಿಸುತ್ತವೆ. ಪಾಕ್‌ ಎಚ್‌ಇಯು ಕಡೆಗೆ ಹೆಚ್ಚಿನ ಗಮನ ಕೊಟ್ಟಿದೆ. ಈಗ ಅದು ಫ್ಲೂಟೋನಿಯಂ ಉತ್ಪಾದನೆಗೂ ಗಮನ ಹರಿಸುತ್ತಿದೆ.

ಭಾರತ-ಪಾಕ್‌ ಬಳಿ ಎಷ್ಟಿವೆ ಅಣ್ವಸ್ತ್ರ?
ಕಳೆದ ಜನವರಿ ಹೊತ್ತಿಗೆ ಭಾರತ 150 ಪರ ಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿತ್ತು. ಈ ವರ್ಷ ಜನವರಿ ವೇಳೆಗೆ 156 ಪರಮಾಣು ಅಸ್ತ್ರಗಳನ್ನು ಭಾರತ ಹೊಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 6 ಅಸ್ತ್ರಗಳನ್ನು ಸೇರ್ಪಡೆಗೊಳಿಸಿದೆ. ಕಳೆದ ವರ್ಷ ಜನವರಿಯಲ್ಲಿ ಚೀನ 320 ಮತ್ತು ಪಾಕ್‌ 160 ಶಸ್ತ್ರಾಸ್ತ್ರಗಳನ್ನು ಹೊಂದಿದ್ದವು. ಈ ವರ್ಷ ಜನವರಿಯಲ್ಲಿ ಚೀನ ಬಳಿ 350, ಪಾಕ್‌ ಬಳಿ 165 ಶಸ್ತ್ರಾಸ್ತ್ರಗಳಿವೆ.

ಅಮೆರಿಕ ಮೊದಲಿಗ
ಅಮೆರಿಕ, ರಷ್ಯ, ಇಂಗ್ಲೆಂಡ್‌, ಫ್ರಾನ್ಸ್‌, ಚೀನ, ಭಾರತ, ಪಾಕಿಸ್ಥಾನ, ಇಸ್ರೇಲ್‌, ಉತ್ತರ ಕೊರಿಯಾ.

Advertisement

ಯಾರ ಬಳಿ ಹೆಚ್ಚು ಅಣ್ವಸ್ತ್ರ ?
ಜಗತ್ತಿನಲ್ಲಿ 13,080 ಅಣ್ವಸ್ತ್ರಗಳಿವೆ ಎಂಬ ಅಂದಾಜಿದೆ. ಇವುಗಳಲ್ಲಿ ಶೇ. 90ರಷ್ಟು ಅಣ್ವಸ್ತ್ರಗಳು ಅಮೆರಿಕ ಮತ್ತು ರಷ್ಯಗಳ ಬಳಿ ಇವೆ ಎನ್ನಲಾಗಿದೆ. ಇವುಗಳಲ್ಲಿ ಅಂದಾಜು 2,000 ಅಣ್ವಸ್ತ್ರಗಳನ್ನು “ರೆಡಿ-ಟು-ಫೈರ್‌’ ಮಾದರಿಯಲ್ಲಿ ಇರಿಸಿ ಕೊಳ್ಳಲಾಗಿದೆ ಎಂದು ಸ್ಟಾಕ್‌ಹೋಂ ಪೀಸ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ (ಎಸ್‌ಐಪಿಆರ್‌ಐ) ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next