Advertisement

ಅಣು ಬಾಂಬ್‌ ತಯಾರಿಕೆ: ಹುರುಳಿಲ್ಲದ ರಷ್ಯಾ ಆರೋಪ; ಉಕ್ರೇನ್‌ ಸರಕಾರದ ತಿರುಗೇಟು

12:36 AM Mar 07, 2022 | Team Udayavani |

ಮಾಸ್ಕೋ/ಲಿವ್ಯೂ: ಅಣು ಬಾಂಬ್‌ ತಯಾರಿಸಲು ಪ್ರಯತ್ನ ಮಾಡಲಾಗುತ್ತಿತ್ತು ಎಂಬ ರಷ್ಯಾದ ಆರೋಪಗಳನ್ನು ಉಕ್ರೇನ್‌ ತಳ್ಳಿ ಹಾಕಿದೆ. 1994ರಲ್ಲಿಯೇ ಅಣ್ವಸ್ತ್ರಗಳನ್ನು ಹಿಂದಿನ ಯುಎಸ್‌ಎಸ್‌ಆರ್‌ಗೆ ಬಿಟ್ಟು ಕೊಡಲಾಗಿತ್ತು. ಮತ್ತೂಮ್ಮೆ ಅಣ್ವಸ್ತ್ರಗಳನ್ನು ಹೊಂದಿದ ರಾಷ್ಟ್ರಗಳ ಕ್ಲಬ್‌ಗ ಸೇರುವ ಇರಾದೆ ಅಲ್ಲ. ಸದ್ಯ ರಷ್ಯಾ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಉಕ್ರೇನ್‌ ಸರಕಾರ ತಿಳಿಸಿದೆ

Advertisement

ರವಿವಾರ ನಡೆದಿದ್ದ ಬೆಳವಣಿಗೆಯಲ್ಲಿ ಉಕ್ರೇನ್‌ ಪ್ಲುಟೋನಿಯಂ ಆಧಾರಿತ ಪರಮಾಣು ಬಾಂಬ್‌ ತಯಾರಿಸುವ ಪ್ರಯತ್ನದಲ್ಲಿ ತೊಡಗಿತ್ತು ಎಂದು ರಷ್ಯಾ ಆರೋಪಿಸಿತ್ತು. ಈ ಬಗ್ಗೆ ಆರ್‌ಐಎ, ಟಿಎಎಸ್‌ಎಸ್‌ ಮತ್ತು ಇಂಟರ್‌ಫಾಕ್ಸ್‌ ಮಾಧ್ಯಮ ಸಂಸ್ಥೆಗಳು ಮೂಲಗಳನ್ನು ಉಲ್ಲೇಖೀಸಿ ವರದಿ ಮಾಡಿ ದ್ದವು.ಚರ್ನೋಬಿಲ್‌ ಅಣು ಸ್ಥಾವರದಲ್ಲಿಯೇ ಪ್ಲುಟೋನಿಯಂ ಆಧಾರಿತ ಶಕ್ತಿ ಶಾಲಿ ಪರಮಾಣು ಬಾಂಬ್‌ ತಯಾರಿಸಲು ಪ್ರಯತ್ನ ನಡೆಸಿತ್ತು ಎಂದು ಆ ವರದಿಯಲ್ಲಿ ಹೇಳಿಕೊಳ್ಳಲಾಗಿತ್ತು.

ಇತ್ತೀಚೆಗಷ್ಟೇ ರಷ್ಯಾ ಸೇನೆ ಚರ್ನೋ ಬಿಲ್‌ ಅಣು ಸ್ಥಾವರವನ್ನು ವಶಪಡಿಸಿ ಕೊಂಡಿತ್ತು. 1986ರಲ್ಲಿ ನಡೆದಿದ್ದ ಚರ್ನೋಬಿಲ್‌ ದುರಂತದಲ್ಲಿ ಹಲವರು ಅಸುನೀಗಿದ್ದರು. 2 ಸಾವಿರನೇ ಇಸ್ವಿಯಲ್ಲಿ ಈ ಸ್ಥಾವರವನ್ನು ಮುಚ್ಚಲಾಗಿತ್ತು. ಇದೇ ವೇಳೆ, ಉಕ್ರೇನ್‌ ಹೊಂದಿರುವ ದೇಶದಮಾನ್ಯತೆ ಶೀಘ್ರವೇ ಕಳೆದುಕೊಳ್ಳಲಿದೆ ಎಂದು ಪುತಿನ್‌ ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next