Advertisement
ಪಾಲಿಕೆ ವ್ಯಾಪ್ತಿಯಲ್ಲಿ ಘನ ತ್ಯಾಜ್ಯದಿಂದ ಟೊರಿಫೈಡ್ ಚಾರ್ ಕೋಲ್(ಇಂಧನ) ತಯಾರಿಕಾ ಘಟಕ ಸ್ಥಾಪನೆ ಸಂಬಂಧ ಮಂಗಳವಾರ ದೆಹಲಿ ಶಾಸ್ತ್ರಿ ಭವನದ ಕಲ್ಲಿದ್ದಲು ಮಂತ್ರಾಲಯ ಕಾರ್ಯಾಲಯದಿಂದ ವೆಬಿನಾರ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಎನ್‌ಟಿಪಿಸಿ ಜೊತೆ ಒಪ್ಪಂದ ಹಸ್ತಾಂತರ ಮಾಡಲಾಗಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಸತತ ಪ್ರಯತ್ನದಿಂದ ಈ ಯೋಜನೆ ಹು-ಧಾ ಮಹಾನಗರ ಪಾಲಿಕೆಗೆ ಲಭ್ಯವಾಗುತ್ತಿದೆ.
Related Articles
Advertisement
ಪಾಲಿಕೆ ಒಡೆತನದ ಶಿವಳ್ಳಿ ತ್ಯಾಜ್ಯ ನಿವೇಶನದಲ್ಲಿ 50 ಟಿಪಿಡಿ ಸಾಮರ್ಥ್ಯದ ಕಟ್ಟಡ ನಿರ್ಮಾಣ ಮತ್ತು ಕೆಡಗುವಿಕೆ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲಾಗುತ್ತಿದೆ.
ಇದನ್ನೂ ಓದಿ:ಬಾಬ್ರಿ ಪ್ರಕರಣ; ಅಂತಿಮ ತೀರ್ಪು ನೀಡಿ ಸೇವೆಯಿಂದ ಜಡ್ಜ್ ಎಸ್.ಕೆ.ಯಾದವ್ ನಿವೃತ್ತಿ
ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಒಣ ತ್ಯಾಜ್ಯವನ್ನು ಘನೀಕರಿಸಿ ಟೊರಿಫೈಡ್ ಚಾರ್ಕೊಲ್ ಅನ್ನಾಗಿ ಮಾಡಲಾಗುತ್ತದೆ. ಇದರಿಂದ ಪಳೆಯುವಿಕೆ ಇಂಧನಗಳ ಮೇಲಿನ ಅವಲಂಬನೆ ಕಡಿಮೆಯಾಗಲಿದ್ದು, ಪರ್ಯಾಯ ಇಂಧನವಾಗಿ ರೂಪುಗೊಳ್ಳಲಿದೆ. ಅಲ್ಲದೆ, ನಗರದ ಒಣ ತ್ಯಾಜ್ಯವು ವೈಜ್ಞಾನಿಕವಾಗಿ ಪರಿಸರಕ್ಕೆ ಮಾರಕವಾಗದಂತೆ ವಿಲೇವಾರಿಯಾಗಲು ಅನುಕೂಲ ವಾಗಲಿದೆ. ಪಾಲಿಕೆಯು ಶೂನ್ಯ ನೆಲಭರ್ತಿ ನಗರವಾಗುವತ್ತ ನೆರವಾಗಲಿದೆ.