Advertisement
ಎನ್‌ಟಿಪಿಸಿ ಕೂಡಗಿ ಘಟಕದ ನೌಕರರ ಸಂಘದ ಅಧ್ಯಕ್ಷ ಸುನಿಲಕುಮಾರ, ಶ್ರೀನಿವಾಸರಾವ್ ನೇತ್ರುತ್ವದಲ್ಲಿ ಪ್ರತಿಭಟನೆ ಆರಂಭಿಸಿದ್ದು, ಎನ್‌ಟಿಪಿಸಿ ನೌಕರರು ಘಟಕ ಪ್ರದೇಶದಲ್ಲಿ ವಸತಿ ಮಾಡಬೇಕೆಂಬ ಸದಾಶಯದಿಂದ ಕೂಡಗಿ ಘಟಕದ ಪಕ್ಕದಲ್ಲೇ ಟೌನ್‌ಶಿಪ್ ನಿರ್ಮಿಸಿದ್ದು, ಮೂಲ ಸೌಲಭ್ಯಗಳಿಲ್ಲದೇ ಸಿಬ್ಬಂದಿಗೆ ಮನೆಗಳನ್ನು ಹಸ್ತಾಂತರಿಸಲಾಗಿದೆ ಎಂದು ದೂರಿದರು.
Related Articles
Advertisement
ಈಗಿನಿಂದಲೇ ಆಡಳಿತ ಮಂಡಳಿ ಶೆ„ಕ್ಷಣಿಕ ಸೌಲಭ್ಯಕ್ಕೆ ಸಿದ್ಧತೆ ಮಾಡಿಕೊಂಡಲ್ಲಿ ಸಿಬ್ಬಂದಿಯ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ ದೊರಕಿಸಿಕೊಡಲು ಅನುಕೂಲವಾಗುತ್ತದೆ ಎಂದು ವಿವರಿಸಿದರು. ಕಳೆದ ಹಲವು ದಿನಗಳಿಂದ ಟೌನ್ ಶಿಪ್‌ನಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಬೇಡಿಕೆಗಳ ಮನವಿಯನ್ನು ಕೂಡಗಿ ಘಟನದ ವ್ಯವಸ್ಥಾಪಕ ನಿರ್ದೇಶಕರ ಮೂಲಕ ಎನ್‌ಟಿಪಿಸಿ ಆಡಳಿತಕ್ಕೆ ರವಾನಿಸಿಲಾಗಿದೆ. ಮನವಿಯಲ್ಲಿ ನೀಡಿದ್ದ 10 ದಿನಗಳ ಕಾಲಮಿತಿ ಮೀರಿದ್ದರೂ ಆಡಳಿತ ಮಂಡಳಿ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಹೀಗಾಗಿ ಗುರುವಾರದಿಂದ 10 ದಿನಗಳ ಕಾಲ ನಿತ್ಯವೂ 1 ಗಂಟೆ ಘಟಕದ ಆಡಳಿತ ಕಚೇರಿ ಎದುರು ಧರಣಿ ನಡೆಸಲು ಮುಂದಾಗಿದ್ದೇವೆ.
ಅಷ್ಟರಲ್ಲಿ ಕ್ರಮ ಕೈಗೊಳ್ಳದಿದ್ದರೆ ಮುಂದಿನ ಹೋರಾಟ ನಿರ್ಧರಿಸುವುದಾಗಿ ಹೋರಾಟ ನಿರತ ಎನ್‌ಟಿಪಿಸಿ ಸಿಬ್ಬಂದಿ ತಿಳಿಸಿದ್ದಾರೆ. ಈ ಮಧ್ಯೆ ಎನ್‌ಟಿಪಿಸಿ ಕೂಡಗಿ ಘಟಕದ ವ್ಯವಸ್ಥಾಪಕ ನಿರ್ದೇಶಕರಾದ ಸಂಜೀವ ಕಿಶೋರ ಅವರು ಕೇಂದ್ರ ಸ್ಥಾನದಲ್ಲಿ ಇಲ್ಲದ ಕಾರಣ, ಅವರು ಬಂದ ನಂತರ ಸಮಸ್ಯೆ ಪರಿಹಾರ ಕಂಡುಕೊಳ್ಳುವುದಾಗಿ ಪ್ರಭಾರಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.