Advertisement

ಎನ್‌ಟಿಎಂ ಶಾಲೆ ಉಳಿಸಲು ಮುಂದುವರಿದ ಹೋರಾಟ

05:58 PM Jul 24, 2021 | Team Udayavani |

ಮೈಸೂರು: ನಗರದ ಮಹಾರಾಣಿ ಎನ್‌ಟಿಎಂ ಶಾಲೆಉಳಿಯಬೇಕೆಂದು ಎನ್‌ಟಿಎಂ ಶಾಲೆ ಉಳಿಸಿ ಹೋರಾಟಒಕ್ಕೂಟ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ 25ನೇದಿನಕ್ಕೆ ಕಾಲಿಟ್ಟಿದ್ದು, ಶುಕ್ರವಾರ ಮೈಸೂರು ಸೆಂಟ್ರಲ್‌ ಲಯನ್ಸ್‌ಕ್ಲಬ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

Advertisement

ಶಾಲೆಯ ಮುಂಭಾಗ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಕನ್ನಡ ಶಾಲೆಯನ್ನು ನಾಶಮಾಡುವುದು ಬೇಡ,ರಾಜವಂಶಸ್ಥರು ನಿರ್ಮಿಸಿದ ಬಾಲಕಿಯರ ಶಾಲೆ ಉಳಿಯಲಿ, ಕನ್ನಡ ಶಾಲೆ,ಕನ್ನಡ ಭಾಷೆ ಉಳಿಯಲಿ. ಜಿಲ್ಲಾಧಿಕಾರಿ ವರದಿ ಜಾರಿಯಾಗಲಿ.

ಶಾಲೆ ಕೆಡವಿ ವಿವೇಕಾನಂದರ ಗೋರಿ ಕಟ್ಟುವುದು ಬೇಡ.ಎಂಬಿತ್ಯಾದಿ ಘೋಷಣೆಗಳು ಮೊಳಗಿದವು.ಮೈಸೂರು ಸೆಂಟ್ರಲ್‌ ಲಯನ್ಸ್‌ ಕ್ಲಬ್‌ ಎನ್‌.ಟಿ.ಎಂಶಾಲೆಯನ್ನು ಹಲವು ವರ್ಷಗಳ ಕಾಲ ದತ್ತು ತೆಗದುಕೊಂಡುಬಿಸಿಯೂಟವನ್ನು ನೀಡಿತ್ತು. ಇದು ಕನ್ನಡ ಶಾಲೆಯ ಮೇಲೆಇರುವ ಪ್ರೀತಿಯನ್ನು ತೋರಿಸುತ್ತದೆ.

ರಾಮಕೃಷ್ಣ ಆಶ್ರಮವುಕನ್ನಡ ಶಾಲೆಯ ಮೇಲೆ ಪ್ರೀತಿ ತೋರಿ ಶಾಲೆ ಉಳಿಸುವ ಕೆಲಸಮಾಡಲಿ ಎಂದು ಮೈಸೂರು ಸೆಂಟ್ರಲ್‌ ಲಯನ್ಸ್‌ ಕ್ಲಬ್‌ಸದಸ್ಯರು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಇತಿಹಾಸ ತಜ್ಞ ಪ್ರೊ ಪಿ.ವಿ.ನಂಜರಾಜಅರಸ್‌, ಕನ್ನಡ ಕ್ರಿಯಾ ಸಮಿತಿಯ ಸ.ರ ಸುದರ್ಶನ, ಮಾಜಿಮೇಯರ್‌ ಪುರುಷೋತ್ತಮ್‌, ದಸಂಸ ಬೆಟ್ಟೆಯ್ಯಕೋಟೆ,ಸ್ವರಾಜ್‌ ಇಂಡಿಯಾದ ಉಗ್ರನರಸಿಂಗೇಗೌಡ, ಲಯನ್ಸ್‌ಕ್ಲಬ್‌ನ ಸಿದ್ದೇಗೌಡ ಇತರರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next