ಅಗರ್ತಲಾ: “ಮಹಾಭಾರತ ಕಾಲದಲ್ಲಿಯೇ ಇಂಟರ್‌ನೆಟ್ ಮತ್ತು ಸದ್ಯ ಬಳಕೆಯಲ್ಲಿರುವ ಅತ್ಯಾಧುನಿಕ ಸ್ಯಾಟಲೈಟ್ ಫೋನ್‌ಗಳು ಇದ್ದವು.’ ಹೀಗೆಂದು ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇವ್ ಮಂಗಳವಾರ ನೀಡಿದ್ದ ಹೇಳಿಕೆ ಈಗ ಚರ್ಚೆಗೆ ಹಾಗೂ ಟೀಕೆಗೆ ಕಾರಣವಾಗಿದೆ.
ತ್ರಿಪುರಾ ವಿವಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಿಎಂ ಬಿಪ್ಲಬ್ ದೇವ್, ಕುರುಕ್ಷೇತ್ರದಲ್ಲಿ ನಡೆಯು ತ್ತಿದ್ದ ಕೌರವ-ಪಾಂಡವರ ಯುದ್ಧವನ್ನು ಧೃತರಾಷ್ಟ್ರನಿಗೆ ನೇರವಾಗಿ ಕಂಡು ಹೇಳುವಂಥ ಶಕ್ತಿ ಸಂಜಯನಿಗೆ ನೀಡಲಾಗಿತ್ತು. ಸದ್ಯ ಬಳಕೆಯಲ್ಲಿರುವ ಅತ್ಯಾಧುನಿಕ ಇಂಟರ್‌ನೆಟ್, ಸ್ಯಾಟಲೈಟ್ ಸಂಪರ್ಕ ವ್ಯವಸ್ಥೆ ಆ ಕಾಲದಲ್ಲಿಯೇ ಇತ್ತು ಎಂದಿದ್ದರು.
ಬುಧವಾರ ತಮ್ಮ ಹೇಳಿಕೆಯನ್ನು ಮುಖ್ಯಮಂತ್ರಿ ಬಿಪ್ಲಬ್ ಸಮರ್ಥಿಸಿಕೊಂ ಡಿದ್ದು, ನಾನು ಹೇಳಿದ್ದು ಸತ್ಯ. ಅದನ್ನು ನಂಬಿ. ಗೊಂದಲಕ್ಕೀಡಾಗಬೇಡಿ ಮತ್ತು ಬೇರೆಯವರಲ್ಲೂ ಗೊಂದಲ ಸೃಷ್ಟಿಸಬೇಡಿ ಎಂದಿದ್ದಾರೆ. ಮತ್ತೂಂದೆಡೆ ರಾಜ್ಯಪಾಲ ತಥಾಗತ ರಾಯ್ ಕೂಡ ಸಿಎಂ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ತ್ರಿಪುರ ಪ್ರದೇಶ ಕಾಂ ಗ್ರೆಸ್ ಸಮಿತಿ, ಸಿಪಿಎಂ ಸೇರಿದಂತೆ ಪ್ರಮುಖ ಪ್ರತಿಪಕ್ಷಗಳು ಹೇಳಿಕೆಯನ್ನು ಟೀಕಿಸಿದ್ದು, ಇದೊಂದು ಅವೈಜ್ಞಾನಿಕ ಹೇಳಿಕೆ ಎಂದಿವೆ.
ಜಾಲತಾಣಗಳಲ್ಲಿ ಸಾವಿರಾರು ಮಂದಿ ಸಿಎಂ ಹೇಳಿಕೆಯನ್ನು ಖಂಡಿಸಿದ್ದಾರೆ. ಜತೆಗೆ ಟ್ವೀಟ್, ಮೆಸೇಜ್‌ಗಳ ಮೂಲಕ ಲೇವಡಿ ಮಾಡಿದ್ದಾರೆ. ವ್ಯಕ್ತಿಯೊಬ್ಬರು ಮಹಾಭಾರತ ಕಾಲದಲ್ಲಿ ಬಿಪ್ಲಬ್ ಸಂಪರ್ಕ ಸಚಿವರಾಗಿರಾಗಿದ್ದರೇ ಎಂದು ಪ್ರಶ್ನಿಸಿದ್ದಾರೆ. ಕೆಲ ದಿನಗಳಲ್ಲಿ ಬಿಜೆಪಿ ನಾಯಕರು ಮಹಾಭಾರತದ ಅವಧಿಯಲ್ಲಿ ಮೊಬೈಲ್ ಫೋನ್ ಬಳಕೆಯಲ್ಲಿತ್ತು ಎಂದೂ ಹೇಳಬಹುದು ಎಂದು ಮತ್ತೂಬ್ಬ ಟ್ವೀಟಿಗ ಕಾಲೆಳೆದಿದ್ದಾರೆ.