ಹೊಸದಿಲ್ಲಿ: ಅಂತಾರಾಷ್ಟ್ರೀಯ ಆ್ಯಸ್ಟ್ರೋನಮಿಕಲ್ ಯೂನಿಯನ್ (ಐಎಯು), 2006ರಲ್ಲಿ ಮಂಗಳ ಹಾಗೂ ಗುರು ಗ್ರಹದ ನಡುವೆ ಪತ್ತೆಯಾಗಿದ್ದ ಕ್ಷುದ್ರಗ್ರಹವೊಂದಕ್ಕೆ ಭಾರತದ ಶಾಸ್ತ್ರೀಯ ಸಂಗೀತಗಾರ ಪಂಡಿತ್ ಜಸ್ರಾಜ್ ಅವರ ಹೆಸರನ್ನಿಟ್ಟಿದೆ. 2006ರ ನ. 11ರಂದು ಅಮೆರಿಕದ ಅರಿಜೋ ನಾದಲ್ಲಿನ ಕ್ಯಾಟಲಿ ನಾ ಸ್ಕೈ ಸರ್ವೆಯಲ್ಲಿ ಈ ಗ್ರಹ ಪತ್ತೆಯಾಗಿತ್ತು. ಸಾಮಾನ್ಯ ವಾಗಿ, ಗ್ರಹವೊಂದು ಪತ್ತೆಯಾದಾಗ ಅದಕ್ಕೆ ಯಾವ ಹೆಸರನ್ನಿಡಬೇಕು ಎಂಬ ನಿರ್ಧಾರ ವನ್ನು ಪತ್ತೆ ಮಾಡಿದ ವಿಜ್ಞಾನಿಗಳ ತಂಡದ ವಿವೇಚನೆಗೆ ಬಿಡಲಾ ಗುತ್ತದೆ. ಅವರು ಪ್ರಸ್ತಾಪಿಸುವ ಒಂದು ಅಥವಾ ಅದಕ್ಕಿಂತ ಹೆಚ್ಚು ಹೆಸರುಗಳನ್ನು ಐಎಯುನ 15 ಸದಸ್ಯರುಳ್ಳ “ಸ್ಮಾಲ್ ಬಾಡಿ ನಾಮನ್‌ಕ್ಲೇಚರ್’ (ಸಿಎಸ್‌ಬಿಎನ್) ವಿಭಾಗ ಅಂತಿಮಗೊಳಿಸುತ್ತದೆ. ಕ್ಯಾಟಲಿನಾ ಸ್ಕೈ ಸರ್ವೆಯ ವಿಜ್ಞಾನಿಗಳ ಪ್ರಸ್ತಾವನೆಯಂತೆ, ಪಂಡಿತ್ ಜಸ್ರಾಜ್ ಅವರ ಹೆಸರನ್ನಿಡಲಾಗಿದೆ. ಐಎಯು ನಿರ್ಧಾರಕ್ಕೆ ಪಂಡಿತ್ ಜಸ್‌ರಾಜ್ ಧನ್ಯವಾದ ಅರ್ಪಿಸಿದ್ದಾರೆ.