Advertisement
ಎನ್ಎಸ್ಎಸ್ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಿದ 36 ಕಾಲೇಜುಗಳು, 36 ಕಾರ್ಯಕ್ರಮ ಅಧಿಕಾರಿಗಳು ಹಾಗೂ 36 ಸ್ವಯಸೇವಕರಿಗೆ ಎನ್ಎಸ್ ಎಸ್ ರಾಜ್ಯ ಪ್ರಶಸ್ತಿಯನ್ನು ಸಚಿವ ನಾರಾಯಣ ಗೌಡ ಅವರು ವಿತರಿಸಿದರು.
Related Articles
Advertisement
ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಎನ್‌ಎಸ್ಎಸ್ ಸಹಯೋಗದೊಂದಿಗೆ ಹಲವು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ. ಸ್ವಚ್ಛ ಭಾರತ್ ಕಾರ್ಯಕ್ರಮದ ಅಡಿಯಲ್ಲಿ ಇದುವರೆಗೂ 1 ಲಕ್ಷ ಟನ್ ತ್ಯಾಜ್ಯ ಸಂಗ್ರಹಿಸಲಾಗಿದ್ದು, ಅಕ್ಟೋಬರ್ 1 ರಿಂದ 31ರವರೆಗೆ 75 ಲಕ್ಷ ಟನ್ ತ್ಯಾಜ್ಯ ಸಂಗ್ರಹಿಸಿ, ಸಮರ್ಪಕ ನಿರ್ವಹಣೆ ಮಾಡುವ ಗುರಿ ಹೊಂದಲಾಗಿದೆ ಎಂದರು.
ಸನ್ಮಾನ್ಯ ಮುಖ್ಯಮಂತ್ರಿಗಳು ಘೋಷಿಸಿದ ಅಮೃತ ಸಮುದಾಯದ ಅಭಿವೃದ್ಧಿ ಯೋಜನೆಯ ಜವಾಬ್ದಾರಿಯನ್ನು ಎನ್‌ಎಸ್‌ಎಸ್‌ಗೆ ನೀಡಲಾಗಿದ್ದು, 750 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಈ ಗ್ರಾಮಗಳ ಸಂಪೂರ್ಣ ಚಿತ್ರಣವನ್ನು ಎನ್‌ಎಸ್‌ಎಸ್ ಯಶಸ್ವಿಯಾಗಿ ದಾಖಲಿಸಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಇತರೆ ಇಲಾಖೆಗಳೊಂದಿಗೆ ಜೋಡಿಸಲಿದೆ ಎಂದು ಸಚಿವ ನಾರಾಯಣ ಗೌಡ ಅವರು ತಿಳಿಸಿದರು.
ಇದನ್ನೂ ಓದಿ: 2023 ರ ಚುನಾವಣೆಯಲ್ಲಿ ಸ್ವತಂತ್ರ ಸರ್ಕಾರ ನಡೆಸಲು ನಮ್ಮ ಪಕ್ಷವನ್ನು ಬೆಂಬಲಿಸಿ: ಹೆಚ್ ಡಿಕೆ
ಇದೇ ಮೊದಲ ಬಾರಿಗೆ ಕರ್ನಾಟಕದ ನಾಲ್ವರಿಗೆ ರಾಷ್ಟ್ರಮಟ್ಟದ ಎನ್ಎಸ್‌ಎಸ್ ಪ್ರಶಸ್ತಿ ಲಭಿಸಿರೋದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಕೋವಿಡ್ ಸಂಕಷ್ಟದಲ್ಲೂ ಮಹಾಮಾರಿ ವಿರುದ್ಧ ಕೋರೋನಾ ವಾರಿಯರ್ ಆಗಿ ಸೇವೆ ಸಲ್ಲಿಸಿದ ಎನ್‌ಎಸ್ಎಸ್ ಸೇವಕ ಅಪಾರವಾದದ್ದು. ಸಮಾಜದ ಏಳಿಗೆಗೆ ಎನ್ಎಸ್ಎಸ್ ಕೊಡುಗೆ ತುಂಬಾ ದೊಡ್ಡದಿದೆ. ಇನ್ನಷ್ಟು ಸಮಾಜಮುಖಿ ಯುವಜನರ ಅನುಕೂಲವಾದ ಯೋಜನೆಗಳನ್ನು ರೂಪಿಸಿ ಯಶಸ್ವಿಯಾಗಿ ಅನುಷ್ಠಾನಕ್ಕೆ ಅಗತ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವ ನಾರಾಯಣ ಗೌಡ ಅವರು ತಿಳಿಸಿದರು.
ಯುವ ಸಹಾಯವಾಣಿ ಆರಂಭಿಸಿರುವುದು ಯುವ ಜನತೆಗೆ ಬಹಳ ಅನುಕೂಲ ಅಗಲಿದೆ. ಯುವ ಜನತೆಯಲ್ಲಿರುವ ಮಾನಸಿಕ ತೋಳಲಾಟ ಹೇಳಿಕೊಳ್ಳಲು ಇದು ಅನುಕೂಲಾಗಲಿದೆ. ಈ ಸಹಾಯವಾಣಿ ಸಂಖ್ಯೆಯನ್ನು ಹೆಚ್ಚು ಹೆಚ್ಚು ಪ್ರಚಾರಪಡಿಸುವ ಮೂಲಕ ಎಲ್ಲರಿಗೂ ಅನುಕೂಲ ಆಗುವ ನಿಟ್ಟಿನಲ್ಲಿ ಕಾರ್ಯನ್ಮುಖರಾಗಬೇಕು ಎಂದು ಸಚಿವ ಅಶ್ವಥ್ ನಾರಾಯಣ್ ಅವರು ಕರೆ ನೀಡಿದರು.
ಎನ್‌ಎಸ್ಎಸ್ ಸ್ಥಾಪನೆ ಮಾಡಿರುವ ಉದ್ದೇಶವನ್ನ ಯಶಸ್ವಿಗೊಳಿಸಬೇಕು. ಇಷ್ಟು ದಿನ ಎನ್‌ಎಸ್ಎಸ್ ಪಠೇತ್ಯರ ಚಟುವಟಿಕೆ ಆಗಿತ್ತು. ಆದರೀಗ ರಾಷ್ಟ್ರೀಯ ನೂತನ ಶಿಕ್ಷಣ ನೀತಿಯಲ್ಲಿ ಎನ್‌ಎಸ್ಎಸ್ ಹಾಗೂ ಎನ್‌ಸಿಸಿಯನ್ನು ಪಠ್ಯದಲ್ಲಿ ಸೇರ್ಪಡೆ ಮಾಡಲಾಗಿದೆ. ಇದರಿಂದ ಎನ್‌ಎಸ್ಎಸ್‌ಗೆ ಸೇರಿಸಿಕೊಳ್ಳಲು ಅನುಕೂಲ ಆಗಲಿದೆ. ಬಜೆಟ್‌ನಲ್ಲಿ ಹೆಚ್ಚಿನ ಹಣವನ್ನು ಕ್ರೀಡಾ ಇಲಾಖೆಗೆ ಕೊಡಬೇಕು ಎಂದು ಕೇಳಿಕೊಳ್ಳುತ್ತೇನೆ. ಕ್ರೀಡೆ ಇದ್ದರೇ ಎಲ್ಲವೂ ಸಿಗಲಿದೆ. ಉನ್ನತ ಶಿಕ್ಷಣ ಇಲಾಖೆಯಿಂದ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಗೆ ಬೇಕಾದ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಅಶ್ವಥ್ ನಾರಾಯಣ್ ಹೇಳಿದರು.
ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಚಿವರಾದ ಡಾ.ಸಿ ಎನ್ ಅಶ್ವಥ್ ನಾರಾಯಣ ಅವರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಲವು ಗಣ್ಯರು, ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.