Advertisement

ಸದೃಢ ರಾಷ್ಟ್ರ ನಿರ್ಮಾಣಕ್ಕೆ ಎನ್‌ಎಸ್‌ಎಸ್‌ ಸಹಕಾರಿ: ಪಟ್ಟದ್ದೇವರು

01:00 PM Apr 07, 2018 | Team Udayavani |

ಭಾಲ್ಕಿ: ಸ್ವತ್ಛ, ಸುಂದರ, ಸದೃಢ ರಾಷ್ಟ್ರನಿರ್ಮಿಸುವುದು ಎನ್‌ಎಸ್‌ಎಸ್‌ ಯೋಜನೆ ಮೂಲ ಉದ್ದೇಶವಾಗಿದೆ ಎಂದು ಬಸಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರು ಹೇಳಿದರು.

Advertisement

ತಾಲೂಕಿನ ಕರಡ್ಯಾಳ ಗ್ರಾಮದ ಹಿರೇಮಠ ಸಂಸ್ಥಾನ ವಿದ್ಯಾಪೀಠ ಡಿಇಡಿ ಕಾಲೇಜಿನಲ್ಲಿ ಗುರುವಾರ ಡಿಎಸ್‌ಇಆರ್‌ಟಿ ಬೆಂಗಳೂರು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು.

ಪ್ರಜೆಗಳೆಲ್ಲರೂ ಫಲಾಪೇಕ್ಷೆ ಬಯಸದೇವೆ ಮಾಡಬೇಕು. ರಾಷ್ಟ್ರದ ಪುರಾತನ ಸ್ಮಾರಕ, ಸಾಹಿತ್ಯ, ಸಂಸ್ಕೃತಿ, ಮೌಲ್ಯಉಳಿಸಿ ಬೆಳೆಸಲು ಎಲ್ಲರೂ ಪ್ರಯತ್ನಿಸಬೇಕು. ಬಸವಣ್ಣನವರ ಕಾಯಕ ಸಿದ್ಧಾಂತ ಸರ್ವರ ನಿತ್ಯದ ಮಂತ್ರವಾಗಬೇಕು ಎಂದು ಕಿವಿಮಾತು ಹೇಳಿದರು.

ಶಿಕ್ಷಕರು ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯಕ್ಕೆ ಹೆಚ್ಚು ಒತ್ತು ನೀಡಬೇಕು. ವಿದ್ಯಾರ್ಥಿಗಳು ಶಿಕ್ಷಕರ ನುಡಿಗಿಂತ ನಡೆ ಕಡೆಗೆ ಹೆಚ್ಚು ಗಮನ ಹರಿಸುತ್ತಿರುತ್ತಾರೆ. ಮಕ್ಕಳಲ್ಲಿ ನಮ್ರತೆ, ನಯ, ವಿನಯ, ವಿಧೇಯತೆ, ಸತ್ಯ, ಸರಳತೆ, ಮಧುರತೆ ಗುಣಗಳನ್ನು ಬೆಳೆಯುವಂತೆ ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು. ಪ್ರಮುಖರಾದ ಯೋಗೇಶ ಎಂ.ಬಿ. ಮಾತನಾಡಿ, ರಾಷ್ಟ್ರ ನಮಗೇನು ಮಾಡಿದೆ ಎನ್ನುವುದಕ್ಕಿಂತ ರಾಷ್ಟ್ರಕ್ಕಾಗಿ ನಾವೇನು ಮಾಡಿದ್ದೇವೆ ಎನ್ನುವುದು ಮುಖ್ಯ ಎಂದು ಹೇಳಿದರು. ಪ್ರಾಚಾರ್ಯ ರಮೇಶ ಕುಟಮಲಗೆ, ಉಪನ್ಯಾಸಕ ಬಸವರಾಜ ಠಮಕೆ, ವಿಜಯಕುಮಾರ ಗಣೂರೆ ಮಾತನಾಡಿದರು. 

ಕೋನ ಮೇಳಕುಂದಾ ಗ್ರಾಪಂ ಅಧ್ಯಕ್ಷ ಶಶಿಧರ ಕೋಸಂಬೆ, ಉಪನ್ಯಾಸಕರಾದ ಸಿ.ಎಸ್‌.ಆನಂದ, ಸುನೀತಾ ಸಾವಳೆ, ಪ್ರಶಿಕ್ಷಣಾರ್ಥಿಗಳಾದ ಅಕ್ಷಯಕುಮಾರ, ಸಲೋಮಿ, ಅಂಬಿಕಾ, ಸುಧಾರಾಣಿ ಇದ್ದರು. ಉಷಾ ನಿರೂಪಿಸಿದರು. ವೈಶಾಲಿ ವಂದಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next