Advertisement

ಹೆಣ್ಣು ಮಕ್ಕಳ ನಿರ್ಲಕ್ಷಿಸದೇ ಶಿಕ್ಷಣ ಒದಗಿಸಿ

12:45 PM Nov 15, 2017 | Team Udayavani |

ಬೀದರ: ಹೆಣ್ಣು ಮಕ್ಕಳಲ್ಲಿ ಹೆಚ್ಚು ಪ್ರಮಾಣದಲ್ಲಿ ಸಾಮಾಜಿಕ ಕಳಕಳಿ ಇರುತ್ತದೆ. ಪೋಷಕರು ಅವರನ್ನು ನಿರ್ಲಕ್ಷ್ಯಾ ದಿಂದ ಕಾಣದೇ ಅವರಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಐ.ಎಸ್‌. ಪಾಂಚಾಳ ಹೇಳಿದರು.

Advertisement

ನಗರದ ಬಾಲಕಿಯರ ಬಾಲ ಮಂದಿರದಲ್ಲಿ ಮಂಗಳವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ ಏರ್ಪಡಿಸಿದ್ದ ಮಕ್ಕಳ ದಿನಾಚರಣೆ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದ
ಅವರು, ತಮ್ಮ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ ಉತ್ತಮ ನಾಗರಿಕರನ್ನಾಗಿ ರೂಪಿಸಬೇಕು. ಮಕ್ಕಳು ತಮ್ಮಲ್ಲಿನ ಸುಪ್ತ ಪ್ರತಿಭೆ ಅನಾರಣಗೊಳಿಸಲು ಯಾವುದೇ ಕಾರಣಕ್ಕೂ ಹಿಂಜರಿಯಬಾರದು ಎಂದರು. ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಕವಿತಾ ಹುಷಾರೆ ಮಾತನಾಡಿ, ಮಕ್ಕಳು ಸ್ವಇಚ್ಛೆಯಿಂದ ವಿವಿಧ ಸ್ಪರ್ಧೆಗಳಿಗೆ ಪಾಲ್ಗೊಳ್ಳುವಂತೆ ಪ್ರೇರಣೆ ನೀಡಬೇಕು ಎಂದು ಹೇಳಿದರು.

ಬಾಲನ್ಯಾಯ ಮಂಡಳಿ ಸದಸ್ಯ ಶಶಿಧರ ಕೋಸಂಬೆ ಮಾತನಾಡಿ, ಮಕ್ಕಳ ಭವಿಷ್ಯ ಪಾಲಕರು ಮತ್ತು ಶಿಕ್ಷಕರನ್ನು ಅವಲಂಭಿಸಿರುತ್ತದೆ. ಇವರು ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಯಲು ಸಹಕರಿಸಬೇಕು ಎಂದು ಹೇಳಿದರು.

ಮಹೇಶ ಗೋರನಾಳ ಮಾತನಾಡಿ, ಮಕ್ಕಳಲ್ಲಿ ಭಾವೈಕ್ಯತೆ, ಸದ್ಭಾವನೆ, ಸನ್ನಡತೆಯ ಗುಣಗಳು ಬೆಳೆಯುವಂತೆ ನೋಡಿಕೊಳ್ಳಬೇಕಿದೆ ಎಂದರು. ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಫಾ| ಸ್ಟೀವನ್‌ ಮಾತನಾಡಿ, ಮಕ್ಕಳು ವಿದೇಶದ ಶೈಲಿಗಳಿಗೆ ಮಾರುಹೋಗುತ್ತಿರುವುದು ಮಾರಕವಾಗಿದೆ. ಇಂತಹ ಮಕ್ಕಳಿಗೆ ದೇಶದ ಮಹಾತ್ಮರ ಕುರಿತು ಮಾಹಿತಿ ನೀಡಿ ದೇಶಪ್ರೇಮ ಬೆಳೆಸಬೇಕು ಎಂದು ಹೇಳಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಶಾಂತ ಬಿರಾದಾರ ಮಾತನಾಡಿ, ಬಾಲಮಂದಿರದ ಮಕ್ಕಳು ಇಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ವಿವಿಧ ಕ್ರೀಡೆ ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಬೇಕೆಂದು ಸಲಹೆ ನೀಡಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಬಿ.ಪಾಂಡುರಂಗ ಅಧ್ಯಕ್ಷತೆ ವಹಿಸಿದ್ದರು.

Advertisement

ಬಾಲನ್ಯಾಯ ಮಂಡಳಿ ಸದಸ್ಯ ಧನವಂತಿ ಪಾಟೀಲ, ಬಾಲಮಂದಿರದ ಸಿಬ್ಬಂದಿ ಮಂಜೂರಖಾನ್‌, ಆಕಾಶ ಕಲ್ಯಾಣಿ, ಸುಧಾಕರ ಎಲ್ಲಾನೋರ್‌, ರಘುನಾಥ, ಮಂಗಲಾ, ಆಕೀಬ್‌ ಜಾವೇದ್‌, ಅಭಿಲಾಷ, ಬಾಲಮಂದಿರದ ಮಕ್ಕಳು ಉಪಸ್ಥಿತರಿದ್ದರು. ಚಿನ್ನಮ್ಮಾ ಕೊಳ್ಳೆ ನಿರೂಪಿಸಿದರು. ಮಕ್ಕಳ ರಕ್ಷಣಾಧಿಕಾರಿ ಗೌರಿಶಂಕರ ಪರತಾಪುರೆ ಸ್ವಾಗತಿಸಿದರು. ಅಧೀಕ್ಷಕಿ ದ್ರೌಪತಿ ನಾಯಕ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next