Advertisement

ಒಂಟಿ ತೋಳ ದಾಳಿ ತಡೆಯಲು NSGಗೆ ವಿಶೇಷ ತರಬೇತಿ 

03:39 PM Nov 22, 2017 | Team Udayavani |

ಹೊಸದಿಲ್ಲಿ : ವಿಶ್ವಾದ್ಯಂತ ಐಸಿಸ್‌ ಉಗ್ರರು ಘನ ವಾಹನಗಳನ್ನು ಬಳಸಿಕೊಂಡು ಒಂಟಿತೋಳ ಮಾದರಿಯ ದಾಳಿ ನಡೆಸುತ್ತಿರುವ ಹಿನ್ನಲೆಯಲ್ಲಿ  ದೇಶದ ಮೇಲಾಗುವ ಸಂಭಾವ್ಯ ದಾಳಿ ಎದುರಿಸಲು ರಾಷ್ಟ್ರೀಯ ಭದ್ರತಾ ಪಡೆಯ ಕಮಾಂಡೋಗಳಿಗೆ ವಿಶೇಷ ತರಬೇತಿ ನೀಡಲು ಯೋಚಿಸಲಾಗಿದೆ. 

Advertisement

ವರದಿಯಾದಂತೆ ಯುರೋಪ್‌ ದೇಶಗಳಿಗೆ ಕಮಾಂಡೋಗಳನ್ನು ಕಳುಹಿಸಿ ನುರಿತ ತರಬೇತುದಾರರಿಂದ ತರಬೇತಿ ಪಡೆದುಕೊಳ್ಳಲು ಚಿಂತನೆ ನಡೆಸಲಾಗಿದೆ. 

ಇತ್ತೀಚೆಗೆ ಕುಂಭಮೇಳ, ತ್ರಿಶೂರ್‌ಪೂರಂ ವೇಳೆ ಲಾಸ್‌ ವೆಗಾಸ್‌ ಮಾದರಿಯಲ್ಲಿ ಒಂಟಿತೋಳ ದಾಳಿ ಮಾಡುತ್ತೇವೆ ಎನ್ನುವ ಬೆದರಿಕೆ ಆಡಿಯೋವೊಂದು ಬಿಡುಗಡೆಯಾಗಿತ್ತು.ಭಕ್ತರ ಆಹಾರದಲ್ಲಿ ವಿಷ ಹಾಕಿ ಕೊಲ್ಲಿ, ಜನರ ಮೇಲೆ ಟ್ರಕ್‌ಗಳನ್ನು ಹರಿಸಿ ನರಮೇಧ ಮಾಡಿ ಎಂದು ಪ್ರಚೋದನೆ ನೀಡಲಾಗಿತ್ತು.

ದೇಶದಲ್ಲೂ ಐಸಿಸ್‌ ಬೇರು ಬಿಡಲು ಯತ್ನಿಸುತ್ತಿದ್ದು ಸೇನಾ ಪಡೆ, ಪೊಲೀಸರು ವ್ಯಾಪಕ ಕಟ್ಟೆಚ್ಚರ ವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next