Advertisement

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

08:34 PM Nov 08, 2024 | Team Udayavani |

ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಮುಖ ಷೇರು ವಿನಿಮಯ ಕೇಂದ್ರಗಳಾದ ಬಿಎಸ್‌ಇ ಮತ್ತು ಎನ್‌ಎಸ್‌ಇ ನವೆಂಬರ್‌ 20 ರಂದು (ಬುಧವಾರ) ವಹಿವಾಟಿಗೆ ರಜೆ ಘೋಷಿಸಿವೆ.

Advertisement

ಈಕ್ವಿಟಿ, ಫ್ಯೂಚರ್ಸ್ ಮತ್ತು ಆಯ್ಕೆಗಳು (F&O) ಮತ್ತು ಸೆಕ್ಯುರಿಟೀಸ್ ಲೆಂಡಿಂಗ್ ಮತ್ತು ಎರವಲು (SLB) ವಿಭಾಗಗಳಲ್ಲಿ ಆ ದಿನ ಯಾವುದೇ ವಹಿವಾಟು ಇರುವುದಿಲ್ಲ ಎಂದು ಎನ್‌ಎಸ್‌ಇ ಮತ್ತು ಬಿಎಸ್‌ಇ ಶುಕ್ರವಾರ(ನ8) ಪ್ರತ್ಯೇಕ ಸುತ್ತೋಲೆಯಲ್ಲಿ ತಿಳಿಸಿವೆ.

288 ಸದಸ್ಯ ಬಲದ ಮಾಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.

ನವೆಂಬರ್ 1 ರಂದು ದೀಪಾವಳಿ ನಂತರ ಮತ್ತು ನವೆಂಬರ್ 15 ರಂದು ಗುರುನಾನಕ್ ಜಯಂತಿ ನಂತರ ನವೆಂಬರ್‌ನಲ್ಲಿ ಇದು ಮೂರನೇ ಷೇರು ಮಾರುಕಟ್ಟೆ ರಜೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next