Advertisement

ಗಿಡ್ಡತಳಿ ಹಸುವಿನ ಹಾಲಿಗೆ ಭಾರೀ ಬೇಡಿಕೆ

05:58 PM Jan 24, 2020 | Naveen |

ಎನ್‌.ಆರ್‌.ಪುರ: ಮಲೆನಾಡಿನ ಗಿಡ್ಡ ತಳಿ ಹಸುಗಳ ಹಾಲಿನಲ್ಲಿ ಔಷಧ ಗುಣಗಳಿರುವುದರಿಂದ ಕೇರಳ ರಾಜ್ಯದಲ್ಲಿ ಬೇಡಿಕೆ ಹೆಚ್ಚುತ್ತಿದೆ. ಒಂದು ಗಿಡ್ಡ ತಳಿಯ ಹಸು 1 ಲಕ್ಷ ರೂ.ಗೆ ಮಾರಾಟವಾಗುತ್ತಿದೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಪಿ.ಆರ್‌. ಸದಾಶಿವ ತಿಳಿಸಿದರು.

Advertisement

ಪಶುಪಾಲನಾ ಇಲಾಖೆ, ಗುಬ್ಬಿಗಾ ಗ್ರಾಮ ಪಂಚಾಯ್ತಿ, ಹಾಲು ಉತ್ಪಾದಕರ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ನಡೆದ ಮಿಶ್ರ ತಳಿ ಹಸು ಹಾಗೂ ಕರುಗಳ ಪ್ರದರ್ಶನ, ಜಾನುವಾರುಗಳ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾನುವಾರುಗಳನ್ನು ಸಾಕಲು ಪಶು ವೈದ್ಯ ಇಲಾಖೆಯಲ್ಲಿ ಹಲವು ಸೌಲಭ್ಯಗಳನ್ನು ನೀಡಲಾಗುತ್ತದೆ. ಎನ್‌.ಆರ್‌.ಈ.ಜಿ. ಯೋಜನೆಯಡಿ ದನದ ಕೊಟ್ಟಿಗೆ ನೀಡಲು ಸಹಾಯಧನ ನೀಡಲಾಗುತ್ತದೆ. ರೈತರು ಈ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಬೇಕು. ಗಿರಿರಾಜ ಕೋಳಿ ವಿತರಣೆ ಮಾಡಲಾಗುತ್ತದೆ. ಈ ವರ್ಷ ತಾಲೂಕಿಗ 42 ಘಟಕ ಬಂದಿದ್ದು, ಗುಬ್ಬಿಗಾ ಗ್ರಾಮ ಪಂಚಾಯ್ತಿಗೆ 3 ಫಲಾನುಭವಿಗಳಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.

ತಾಲೂಕು ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್‌.ನಾಗೇಶ್‌ ಮಾತನಾಡಿ, ಗ್ರಾಮಗಳಲ್ಲಿ ಈಗ ದನ ಮೇಯುವ ಗೋಮಾಳ ಜಾಗ ಒತ್ತುವರಿಯಾಗಿದೆ. ದನಗಳು ಮೇಯಲು ಜಾಗವಿಲ್ಲದಾಗಿದೆ. ಹಿಂದಿನ ಕಾಲಕ್ಕಿಂತ ಈಗ ಪಶು ವೈದ್ಯ ಇಲಾಖೆಯಲ್ಲಿ ಹೆಚ್ಚು ಸೌಲಭ್ಯಗಳು ಸಿಗುತ್ತಿದೆ. ಇದನ್ನು ರೈತರು ಉಪಯೋಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನರಸಿಂಹರಾಜಪುರ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ| ವಿಜಯಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲಾ ಪಂಚಾಯ್ತಿ ಅನುದಾನದಲ್ಲಿ 2 ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಮಿಶ್ರ ತಳಿ ಜಾನುವಾರುಗಳನ್ನು ಸಾಕಲು ಪ್ರೋತ್ಸಾಹ ನೀಡುವುದೇ ಇದರ ಉದ್ದೇಶವಾಗಿದೆ. ಇಂದು ವಿವಿಧ ಜಾತಿಯ ಜಾನುವಾರುಗಳ ಸ್ಪರ್ಧೆ ಇದ್ದು, ಗೆದ್ದ ಜಾನುವಾರುಗಳ ಮಾಲಿಕರಿಗೆ ಬಹುಮಾನ ನೀಡಲಾಗುವುದು. ಜನವರಿ 29 ರಂದು ಎರಡನೇ ಕಾರ್ಯಕ್ರಮ ಬಿ.ಎಚ್‌. ಕೈಮರದಲ್ಲಿ ನಡೆಯಲಿದೆ ಎಂದರು. ತಾಲೂಕು ಪಂಚಾಯ್ತಿ ಅನುದಾನದಲ್ಲಿ ಒಂದು ವರ್ಷಕ್ಕೆ 13 ಕಾರ್ಯಕ್ರಮ ನಡೆಸಲಿದ್ದೇವೆ.

Advertisement

ಪಶುಪಾಲನಾ ಇಲಾಖೆಯಿಂದ ಜಲ ಕೃಷಿ ಯೋಜನೆಗೆ ಸಹಾಯ ಧನ, ಮೇವು ಕತ್ತರಿಸುವ ಯಂತ್ರಕ್ಕೆ ಶೇ. 50 ರಷ್ಟು ಸಹಾಯಧನ, ಮೇವಿನ ಬೀಜ ನೀಡುವ ಯೋಜನೆ, ಗಿರಿರಾಜ ಕೋಳಿ ನೀಡುವ ಯೋಜನೆಗಳಿವೆ. ಪಶು ಭಾಗ್ಯ ಯೋಜನೆಯಡಿ ತಾಲೂಕಿಗೆ 8 ಫಲಾನುಭವಿಗಳಿಗೆ ನೀಡಲಾಗುವುದು ಎಂದು ವಿವರಿಸಿದರು.

ಗುಬ್ಬಿಗಾ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗಂಗಮ್ಮ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಶಂಕರ್‌, ಸದಸ್ಯರಾದ ಸಂಗೀತ, ಎಲಿಯಾಸ್‌, ಗುಬ್ಬಿಗಾ ಹಾಲು ಒಕ್ಕೂಟದ ಅಧ್ಯಕ್ಷ ಮಧು, ವಗಡೆಕಲ್ಲು ಹಾಲು ಒಕ್ಕೂಟದ ಅಧ್ಯಕ್ಷ ವರ್ಗೀಸ್‌, ಪಿಡಿಒ ರತ್ನಮ್ಮ, ಕಟ್ಟಿನಮನೆ ಪಶು ಆಸ್ಪತ್ರೆಯ ವೈದ್ಯಾಧಿ ಕಾರಿ ಡಾ|
ರಾಕೇಶ್‌, ಬಾಳೆಹೊನ್ನೂರು ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ನಿಧಾ, ಮುತ್ತಿನಕೊಪ್ಪ ಪಶು ಆಸ್ಪತ್ರೆಯ ವೈದ್ಯಾಧಿ ಕಾರಿ ಡಾ| ಪವನ್‌ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಜಾನುವಾರುಗಳ ಪ್ರದರ್ಶನದಲ್ಲಿ ವಿಜೇತರಾದ ರೈತರಿಗೆ ಬಹುಮಾನ ವಿತರಿಸಲಾಯಿತು. ಭಾಗವಹಿಸಿದ್ದ ಎಲ್ಲಾ ಜಾನುವಾರುಗಳ ರೈತರಿಗೆ ಪ್ರೋತ್ಸಾಹಕರ ಬಹುಮಾನ ನೀಡಲಾಯಿತು. ಆದರ್ಶ ಸ್ವಾಗತಿಸಿದರು. ಡಾ| ರಾಕೇಶ್‌ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next