ಎನ್.ಆರ್.ಪುರ: ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ತನಿಖಾ ದಳ ಹಾಗೂ ತಾಲೂಕು ತಂಬಾಕು ನಿಯಂತ್ರಣ ಕಾಯ್ದೆ ಸಮಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಅಧಿಕಾರಿಗಳ ತಂಡ ಶುಕ್ರವಾರ ಪೊಲೀಸರ ನೆರವಿನೊಂದಿಗೆ ವಿವಿಧ ಅಂಗಡಿಗಳ ಮೇಲೆ ದಾಳಿ ಮಾಡಿ, ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸಿದೆ.
ಪಟ್ಟಣದ ಮುಖ್ಯ ರಸ್ತೆಯ ಪಾನ್‌ಶಾಪ್, ಬೇಕರಿ, ಹೋಟೆಲ್, ಪ್ರಾವಿಜನ್ ಸ್ಟೋರ್, ಉಪಾಹಾರ ಮಂದಿರ, ಶಾಲಾ ಆವರ ಣದ ಸುತ್ತಮುತ್ತಲ ಅಂಗಡಿಗಳ ಮೇಲೆ ಅಧಿಕಾರಿಗಳ ತಂಡ ದಾಳಿ ಮಾಡಿ 24 ಪ್ರಕರಣ ದಾಖಲಿಸಿಕೊಂಡು, 3,400 ರೂ. ದಂಡ ವಿಧಿಸಿದೆ.
ಅಂಗಡಿ- ಮುಂಗಟ್ಟು, ಬಾರ್ ಆ್ಯಂಡ್ ರೆಸ್ಟೋರೆಂಟ್ ಹಾಗೂ ಚಿಲ್ಲರೆ ತಂಬಾಕು ಉತ್ಪನ್ನಗಳ ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿ, ನಿಯಮ ಉಲ್ಲಂಘನೆಯ ವಿರುದ್ಧ 9 ತಿಳಿವಳಿಕೆ ನೋಟಿಸ್ ಜಾರಿಗೊಳಿಸಿದರು.
ಸೆಕ್ಷನ್ 4ರ ಅಡಿ 19 ಪ್ರಕರಣ, ಸೆಕ್ಷನ್ 6(ಎ) ಅಡಿ 3 ಪ್ರಕರಣ, ಸೆಕ್ಷನ್ 6(ಬಿ) ಅಡಿ 2 ಪ್ರಕರಣ ಸೇರಿದಂತೆ ಒಟ್ಟು 24 ಪ್ರಕರಣಗಳನ್ನು ದಾಖಲಿಸಿ 3,400 ರೂ. ದಂಡ ವಿಧಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಆರ್ .ದಿನೇಶ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಾರಿ ತಂಬಾಕು ಕಾಯ್ದೆ ನಿಯಂತ್ರಣ ಉಲ್ಲಂಘನೆ ಮಾಡಿದವರಿಗೆ ಸಣ್ಣ ಮಟ್ಟದ ದಂಡ ಮಾತ್ರ ವಿಧಿಸಿ ಎಚ್ಚರಿಕೆ ನೀಡಿದ್ದೇವೆ. ಆದರೆ, ಮುಂದಿನ ಬಾರಿ ಮತ್ತೆ ಕಾಯ್ದೆ ಉಲ್ಲಂಘಿಸಿದರೆ ಶಿಸ್ತು ಕ್ರಮಕೊಳ್ಳುತ್ತೇವೆ. ಅಂಗಡಿ ಸ್ಥಳದ ಮಾಲಿಕರು 60ಗಿ45 ಸೆ.ಮೀ. ಇರುವಂತಹ ನಾಮಫಲಕಗಳನ್ನು ಕಡ್ಡಾಯವಾಗಿ ಅಂಗಡಿ-ಮುಂಗಟ್ಟಿನಲ್ಲಿ ಪ್ರದರ್ಶನ ಮಾಡಬೇಕು. ಯಾರಿಗೂ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಲು ಅವಕಾಶ ನೀಡಬಾರದು. 18 ವರ್ಷದೊಳಗಿನ ಮಕ್ಕಳು ತಂಬಾಕು ಸೇವನೆ ಮಾಡಬಾರದೆನ್ನುವ ಉದ್ದೇಶದಿಂದ ಸೆಕ್ಷನ್ 6(ಎ) ಪ್ರಕಾರ 60ಗಿ30 ರ ಅಳತೆಯ ನಾಮಫಲಕವನ್ನು ಪ್ರದರ್ಶಿಸಬೇಕೆಂದು ಸೂಚಿಸಿದ್ದೇವೆ ಎಂದು ಹೇಳಿದರು.
ತಂಬಾಕು ಉತ್ಪನ್ನಗಳ ಸೇವನೆಯಿಂದ ನೂರಾರು ಜನರು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ತುತ್ತಾಗಿ ಕುಟುಂಬದ ಮೇಲೆ ಆರ್ಥಿಕ ಹೊರೆ ಹೆಚ್ಚುತ್ತದೆ. ಆದ್ದರಿಂದ ವ್ಯಸನ ಮುಕ್ತ ಸಮಾಜವನ್ನು ರೂಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದರು.
ಕಾರ್ಯಾಚರಣೆಯಲ್ಲಿ ಸಾಮಾಜಿಕ ಕಾರ್ಯಕರ್ತ ಎಂ. ರಾಘವೇಂದ್ರ, ಪಟ್ಟಣ ಪಂಚಾಯಿತಿ ಮುಖ್ಯಾ ಧಿಕಾರಿ ಕುರಿಯಕೋಸ್, ಶಿಕ್ಷಣ ಇಲಾಖೆಯ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಶಂಕರಮೂರ್ತಿ, ತಾಲೂಕು ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ನಿರೀಕ್ಷಕ ಪಿ.ಪ್ರಭಾಕರ್, ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ. ಬೇಬಿ, ಕಾರ್ಯಕ್ರಮ ವ್ಯವಸ್ಥಾಪಕ ಕಿರಣ್ ಕುಮಾರ್, ಅಬಕಾರಿ ಇಲಾಖೆ ಉಪ ನಿರೀಕ್ಷ ಎಸ್.ಕೆ.ಶಿವಪ್ರಸಾದ್, ಸಮಾಜ ಕಲ್ಯಾಣ ಇಲಾಖೆಯ ಪ್ರಭಾರಿ ಸಮಾಜ ಕಲ್ಯಾಣಾಧಿಕಾರಿ
ರಾಥೋಡ್, ಪೊಲೀಸ್ ಸಿಬ್ಬಂದಿ ಎಲ್ದೋ ಟಿ.ಅಣ್ಣಪ್ಪ, ಎಚ್.ನಾಯ್ಕ ಮತ್ತು ಗೋವರ್ಧನ್ ಇದ್ದರು.