Advertisement

ಕಣ್ಮನ ಸೆಳೆದ ಕನಕ ಮೃಗ

10:08 PM May 02, 2019 | Sriram |

ಡಾ| ಉಪ್ಪಂಗಳ ರಾಮ ಭಟ್‌ ವಿರಚಿತ “ಹೊಂಗಿರಣ’ ದೀರ್ಘ‌ ಕವನವನ್ನು “ಕನಕ ಮೃಗ’ ಹೆಸರಿನಲ್ಲಿ ಉಡುಪಿಯ ನೃತ್ಯ ನಿಕೇತನದವರು ಎಂ.ಜಿ.ಎಂ. ಕಾಲೇಜಿನ ರವೀಂದ್ರ ಮಂಟಪದಲ್ಲಿ ಗೀತ ರೂಪಕವಾಗಿ ಪ್ರದರ್ಶಿಸಿದರು.

Advertisement

ಶ್ರೀ ರಾಮನ ವನವಾಸದ ಕಾಲದಲ್ಲಿ ಪಂಚವಟಿಯಲ್ಲಿ ರಾವಣನು ಸೀತೆಯನ್ನು ಅಪಹರಿಸಲು ಮಾರೀಚ ಚಿನ್ನದ ಜಿಂಕೆಯಾಗಿ ಸೀತೆಯ ಮನಸೆಳೆದು ರಾಮ ಲಕ್ಷ್ಮಣರು ಹೊರಹೋಗುವಂತೆ ಮಾಡಿ ತನ್ನ ಕಾರ್ಯಸಾಧನೆ ಮಾಡಿಕೊಂಡ ಕತೆಯನ್ನೊಳಗೊಂಡ “ಕನಕ ಮೃಗ’ ಲಕ್ಷ್ಮೀಗುರುರಾಜ ಅವರ ನಿರ್ದೇಶನದಲ್ಲಿ ಮೂಡಿಬಂದು ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಆರಂಭದಲ್ಲಿನ ಪ್ರಕೃತಿ ವರ್ಣನೆ ಸ್ಪಷ್ಟ ಪಡಿಸಲು ಸಮೂಹ ನೃತ್ಯದಲ್ಲಿ ಸುಪ್ರಿಯಾ, ಸುಪ್ರೀತಾ, ಅನನ್ಯಾ, ಸುಶ್ಮಿತಾ, ನಿಹಾರಿಕಾಹಾಗೂ ಜಿಂಕೆಗಳಾಗಿ ಮೇದಿನಿ, ಪ್ರತಿಮಾ ಭರವಸೆ ಮೂಡಿಸಿದರು. ಶ್ರೀರಾಮನಾಗಿ ಲಕ್ಷ್ಮೀಗುರುರಾಜ್‌ ಎಲ್ಲಾ ದೃಶ್ಯಗಳಲ್ಲೂ ತಮ್ಮ ಪ್ರೌಢಿಮೆಯನ್ನು ಮನದಟ್ಟು ಮಾಡಿಸಿದರು. ಸೀತೆಯಾಗಿ ವಿ|ಮಿಥಿಲಾ ಉಪಾಧ್ಯ ಜಿಂಕೆಗೆ ಆಕರ್ಷಿತಳಾಗುವಾಗ ಹಾಗೂ ಲಕ್ಷ್ಮಣನನ್ನು ಅಪಾಯ ತಿಳಿದುಕೊಳ್ಳಲು ಕಳುಹಿಸುವಾಗ ವಿಶೇಷ ಮೆಚ್ಚುಗೆ ಪಡೆದರು. ಮಯೂರಿ ಗುರುರಾಜ್‌ ಲಕ್ಷ್ಮಣನಾಗಿ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಬೇಬಿ ಶ್ರೀಲಕ್ಷ್ಮಿಯ ಮಾಯಾ ಜಿಂಕೆ ಲವಲವಲವಿಕೆಯಿಂದ ನೆನಪಿನಲ್ಲುಳಿಯುವಂತೆ ಮಾಡಿತು. ವಿ| ವಿದ್ಯಾ ಸಂದೇಶ್‌ ಅವರ ರಾವಣ ರೂಪಕಕ್ಕೆ ಹೊಸ ರೂಪ ನೀಡಿತಲ್ಲದೆ ಮಾಯಾ ರಾವಣನಾಗಿಯೂ ಅವರೇ ಅಭಿನಯಿಸಿ ಸೀತೆಯನ್ನು ಅಪಹರಿಸುವಲ್ಲಿ ಪ್ರಭಾವ ಬೀರಿದರು.

ಸಂಗೀತಾ ಬಾಲಚಂದ್ರರವರ ಹಾಡುಗಾರಿಕೆ, ಲಕ್ಷ್ಮೀಗುರುರಾಜ್‌, ಶ್ರೀವಿದ್ಯಾ ಸಂದೇಶ್‌ರವರ ನಟುವಾಂಗಂ, ಬಾಲಚಂದ್ರ ಭಾಗವತರ ಮೃದಂಗ, ಶ್ರೀಧರ ಆಚಾರ್ಯರ ವಯೋಲಿನ್‌, ಮುರಳೀಧರ ಕೆ. ಅವರ ಕೊಳಲು “ಕನಕ ಮೃಗ’ ಮರೆಯದಂತೆ ಮಾಡಲು ಕಾರಣವಾಗಿತ್ತು. ಕೇವಲ ಒಂದು ತಾಸಿನ ಕಡಿಮೆ ಅವಧಿಯ ಈ ಗೀತರೂಪಕವು ಹಿಮ್ಮೇಳದವರ ಹಾಗೂ ಕಲಾವಿದೆಯರ ಶ್ರಮದಿಂದ ಬಹುಕಾಲ ನೆನಪಿನಲ್ಲುಳಿಯುವಂತೆ ಮಾಡಿತು.

Advertisement

– ಬಾ. ಸಾಮಗ

Advertisement

Udayavani is now on Telegram. Click here to join our channel and stay updated with the latest news.

Next