Advertisement

ಬುಲೆಟ್‌ ಟ್ರೈನ್‌ ಗೆ ಭೂಮಿ: ಜರ್ಮನಿಯಿಂದ ಬಂದ 80ರ ಎನ್‌ಆರ್‌ಐ ಮಹಿಳೆ

04:22 PM Nov 30, 2018 | udayavani editorial |

ಹೊಸದಿಲ್ಲಿ : 33 ವರ್ಷಗಳ ಹಿಂದೆ ಜರ್ಮನಿಗೆ ಹೋಗಿ ಅಲ್ಲಿ ಭಾರತೀಯ ಹೊಟೇಲು ತೆರೆದು ಯಶಸ್ವೀ ಉದ್ಯಮಿ ಎನಿಸಿಕೊಂಡಿರುವ 80ರ ಹರೆಯದ ಗುಜರಾತ್‌ ಮೂಲದ ಸವಿತಾ ಬೆನ್‌ ಅವರು ಮುಂಬಯಿ-ಅಹ್ಮದಾಬಾದ್‌ ಬುಲೆಟ್‌ ಟ್ರೈನ್‌ ಯೋಜನೆಗೆ ಗುಜರಾತ್‌ನ ಚಾನ್ಸಾದ್‌ ಗ್ರಾಮದಲ್ಲಿನ ತನ್ನ 11.94 ಹೆಕ್ಟೇರ್‌ ಭೂಮಿಯನ್ನು  30,094 ರೂ.ಗೆ ಮಾರಿದ್ದಾರೆ.

Advertisement

ಈ ಭೂಮಿಯನ್ನು ಬುಲೆಟ್‌ ಟ್ರೈನ್‌ ಯೋಜನೆಗೆ ಕೊಡಲೆಂದೇ ಜರ್ಮನಿಯಿಂದ ಬಂದ ಸವಿತಾ ಬೆನ್‌, ಭೂ ಮಾರಾಟ ಪ್ರಕ್ರಿಯೆ ಪೂರ್ಣಗೊಳಿಸಿ ಜರ್ಮನಿಗೆ ಮರಳಿದ್ದಾರೆ. ಅಲ್ಲಿ ಈಕೆ ತನ್ನ ಮಗನೊಂದಿಗೆ ಹೊಟೇಲು ನಡೆಸಿಕೊಂಡು ಇದ್ದಾರೆ. 

508 ಕಿ.ಮೀ. ಕಾರಿಡಾರ್‌ ನ ಈ ಯೋಜನೆಗೆ ಗುಜರಾತ್‌ ಮತ್ತು ಮಹಾರಾಷ್ಟ್ರದಲ್ಲಿ  ಒಟ್ಟು 1,400 ಹೆಕ್ಟೇರ್‌ ಭೂಮಿ ಅಗತ್ಯವಿದೆ. ಇದರಲ್ಲಿ 1,120 ಹೆಕ್ಟೇರ್‌ ಭೂಮಿ ಖಾಸಗಿ ಒಡೆತನದಲ್ಲಿದೆ. ಸುಮಾರು 6,000 ಭೂ ಮಾಲಕರಿಗೆ ಪರಿಹಾರ ನೀಡಬೇಕಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next