Advertisement

ವಾದ್ರಾ ಆಸ್ತಿ ಖರೀದಿ ಕೇಸು: ಎನ್‌ಆರ್‌ಐ ಉದ್ಯಮಿ ಬಂಧನ

09:46 AM Jan 21, 2020 | Team Udayavani |

ಹೊಸದಿಲ್ಲಿ: ಉದ್ಯಮಿ ರಾಬರ್ಟ್‌ ವಾದ್ರಾ, ಸಂಜಯ ಭಂಡಾರಿ ವಿರುದ್ಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಎನ್‌ಆರ್‌ಐ ಉದ್ಯಮಿ ಸಿ.ಸಿ.ತಂಬಿ ಅವರನ್ನು ಸೋಮವಾರ ಬಂಧಿಸಿದೆ. ಅಕ್ರಮ ಹಣಕಾಸು ವರ್ಗ ಆರೋಪಕ್ಕೆ ಸಂಬಂಧಿಸಿ ಈ ಕ್ರಮ ಕೈಗೊಳ್ಳಲಾಗಿದೆ.

Advertisement

ದುಬಾೖ ಮೂಲದ ಸ್ಕೈಲೈಟ್‌ ಎಂಬ ಕಂಪೆನಿಯನ್ನು ತಂಬಿ ನಿಯಂತ್ರಿಸುತ್ತಿದ್ದರು. 2009ರಲ್ಲಿ ಭಂಡಾರಿ ಮಾಲಕತ್ವದ ಸ್ಯಾನ್‌ಟೆಕ್‌ ಎಫ್ಝೆಡ್‌ಇ ಲಂಡನ್‌ನಲ್ಲಿ ಸ್ಕೈಲೈಟ್‌ ಖರೀದಿಸಿದ್ದ ಆಸ್ತಿಯ ನಿಯಂತ್ರಣ ತೆಗೆದುಕೊಂಡಿತು. ಅನಂತರ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್‌ ವಾದ್ರಾ ಅದನ್ನು ಖರೀದಿಸಿದ್ದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next