Advertisement

ಎನ್ನಾರೈ, ಪಿಐಒಗಳಿಗೆ ಆಧಾರ್‌ ಲಿಂಕ್‌ ಬೇಕಿಲ್ಲ

08:34 AM Nov 18, 2017 | Harsha Rao |

ಹೊಸದಿಲ್ಲಿ: ಅನಿವಾಸಿ ಭಾರತೀಯರು (ಎನ್‌ಆರ್‌ಐ), ಭಾರತೀಯ ಮೂಲದ ವ್ಯಕ್ತಿಗಳು (ಪಿಐಒ) ಬ್ಯಾಂಕ್‌ ಖಾತೆಗಳಿಗೆ ಮತ್ತು ಪ್ಯಾನ್‌ ಕಾರ್ಡ್‌ಗೆ ಆಧಾರ್‌ ಅನ್ನು ಲಿಂಕ್‌ ಮಾಡಬೇಕಾಗಿಲ್ಲ. ಜತೆಗೆ ಇತರ ಸೇವೆಗಳಿಗೆ ಕೂಡ ಆಧಾರ್‌ ಅನ್ನು ಸೇರ್ಪಡೆಗೊಳಿಸಬೇಕಾಗಿಲ್ಲ. ಹೀಗೆಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಶುಕ್ರವಾರ ಹೇಳಿದೆ. ಆದರೆ ಇಂಥ ವ್ಯಕ್ತಿಗಳನ್ನು ಗುರುತಿಸಲು ಬೇರೆಯೇ ದಾರಿ ಕಂಡುಕೊಳ್ಳುವ ಬಗೆಯನ್ನು ಹುಡುಕಿ ಕೊಳ್ಳುವಂತೆ ವಿವಿಧ ಇಲಾಖೆಗಳಿಗೆ ಸೂಚನೆ ನೀಡಿದೆ. 

Advertisement

ಹಣಕಾಸು ಅಕ್ರಮ ಕಾಯ್ದೆ 2017 ಮತ್ತು ಆದಾಯ ತೆರಿಗೆ ಕಾಯ್ದೆಯಲ್ಲಿ ಉಲ್ಲೇಖೀಸಿರುವಂತೆ ಆಧಾರ್‌ಗೆ ನೋಂದಣಿ ಮಾಡಿಸಿಕೊಳ್ಳಲು ಅರ್ಹತೆ ಇರುವವರು ಲಿಂಕ್‌ ಮಾಡಿಸಿಕೊಳ್ಳಬೇಕು ಎಂದಿದೆ. ಜತೆಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಇಲಾಖೆಗಳು ಆಧಾರ್‌ ಕಾಯ್ದೆಯಲ್ಲಿ ಹೇಳಲಾಗಿರುವಂತೆ ಎನ್‌ಆರ್‌ಐ, ಪಿಐಒ, ಸಾಗರೋತ್ತರ ಭಾರತೀಯ ನಾಗರಿಕರು (ಒಸಿಐ) ಆಧಾರ್‌ ನೋಂದಣಿ ಮಾಡಿಸಲು ಅರ್ಹತೆ ಪಡೆದಿಲ್ಲ.

ಅರ್ಜಿ ಸಲ್ಲಿಕೆ ಏಕೆ?: ಮತ್ತೂಂದೆಡೆ ಪ್ಯಾನ್‌ಕಾರ್ಡ್‌ ಮತ್ತು ರಿಟರ್ನ್ಸ್ ಫೈಲ್‌ ವೇಳೆ ಆಧಾರ್‌ ಲಿಂಕ್‌ ಮಾಡುವ ಬಗ್ಗೆ ಸಲ್ಲಿಕೆಯಾಗಿರುವ ಅರ್ಜಿಗೆ ಸುಪ್ರೀಂಕೋರ್ಟ್‌ ಆಕ್ಷೇಪ ಮಾಡಿದೆ. ಆಧಾರ್‌ ಬಗ್ಗೆ ಇನ್ನೂ ತೀರ್ಪು ಪ್ರಕಟವಾಗಿಲ್ಲ. ಖಾಸಗಿತನದ ಬಗ್ಗೆ ಮಾತ್ರ ತೀರ್ಪು ನೀಡಲಾಗಿದೆ. ಹೀಗಾಗಿ ಯಾವ ಕಾರಣದಿಂದ ಅರ್ಜಿ ಸಲ್ಲಿಕೆಯಾಗಿದೆ ಎಂದು ನ್ಯಾ| ಎ.ಕೆ. ಸಿಕ್ರಿ ಮತ್ತು ನ್ಯಾ| ಅಶೋಕ್‌ ಭಾನ್‌ ಅವರನ್ನೊಳಗೊಂಡ ಪೀಠ ಪ್ರಶ್ನಿಸಿದೆ. ಅ ನಂತರ ಅರ್ಜಿದಾರರು ತಮ್ಮ ಅರ್ಜಿಯನ್ನು ಹಿಂಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next