Advertisement
ಮಹಿಳಾ ತಂಡಆರ್ಯಾಪು ಗ್ರಾ.ಪಂ. ವ್ಯಾಪ್ತಿಯ ಕಾರ್ಪಾಡಿ ಸರೋವರ- ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟದ ಸದಸ್ಯರು ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗದ ಸಣ್ಣ ತೋಡಿನಲ್ಲಿ ತುಂಬಿದ್ದ ಹೂಳು, ಹುಲ್ಲು ಹಾಗೂ ಪೊದೆಗಳನ್ನು ತೆಗೆದು ಮಳೆ ನೀರು ಹರಿಯಲು ವ್ಯವಸ್ಥೆ ಮಾಡಿದ್ದಾರೆ. ಒಂದೇ ದಿನದಲ್ಲಿ ಸುಮಾರು 200 ಮೀ. ದೂರವನ್ನು ಸ್ವಚ್ಛಗೊಳಿಸಿದ್ದಾರೆ.
ಉದ್ಯೋಗ ಖಾತರಿ ಯೋಜನೆ ಮೂಲಕ ಮಹಿಳೆಯರು ಉದ್ಯೋಗ ಚೀಟಿ ಮಾಡಿಸಿಕೊಂಡು ಅದರ ಮೂಲಕ ಸಾರ್ವಜನಿಕ ಕೆಲಸದಲ್ಲಿ ತೊಡಗಿ ರುವುದು ಇದೇ ಪ್ರಥಮ. ಉದ್ಯೋಗ ಚೀಟಿ ಹೊಂದಿರುವವರು ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ಮಾಡಲು ಅರ್ಹರಾಗಿದ್ದು, ಖಾತೆಗೆ ಹಣ ಜಮೆಯಾಗುತ್ತದೆ. ದಿನವೊಂದಕ್ಕೆ ಕನಿಷ್ಠ ರೂ. 275ರಂತೆ ವೇತನ ಪಾವತಿಸಲಾಗುತ್ತಿದೆ.
Related Articles
ಮುಂದಿನ ದಿನಗಳಲ್ಲಿ ಒಕ್ಕೂಟದ ವತಿಯಿಂದ ಇಂಗು ಗುಂಡಿ, ಗೇರು ಸಸಿ ನೆಡುವುದು ಸಹಿತ ಹಲವು ಸಾರ್ವಜನಿಕ ಕೆಲಸಗಳನ್ನು ನಿರ್ವಹಿಸಲಿದ್ದೇವೆ.
-ಅಂಬಿಕಾ ರಮೇಶ್, ಒಕ್ಕೂಟದ ಅಧ್ಯಕ್ಷೆ
Advertisement
ಉತ್ತಮ ಕಾರ್ಯಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಮೂಲಕ ತಾಲೂಕಿನಲ್ಲಿ ಪ್ರಥಮ ಬಾರಿಗೆ ಮಹಿಳೆಯರೇ ಹೂಳೆತ್ತಿರುವ ಮಾದರಿ ಕಾರ್ಯ ನಡೆದಿದೆ. ಪ್ರತಿಯೊಬ್ಬರಿಗೆ ರೂ. 275ರಂತೆ ಕೂಲಿ ನೀಡಲಾಗುತ್ತದೆ. ಅವರ ಕೆಲಸ ಪ್ರಮಾಣವನ್ನು ಅವಲಂಬಿಸಿ ಹಣವನ್ನು ಅವರವರ ಖಾತೆ ಜಮೆ ಮಾಡಲಾಗುತ್ತಿದೆ. ಇಂಗು ಗುಂಡಿಗೂ ಅವಕಾಶವಿದ್ದು, ಒಂದು ಗುಂಡಿಗೆ ರೂ. 300ರಂತೆ ನೀಡಲಾಗುತ್ತಿದೆ.
-ನವೀನ್ ಭಂಡಾರಿ
ತಾ.ಪಂ. ಕಾರ್ಯನಿರ್ವಹಣಾಧಿಕಾರಿ