Advertisement
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿಶನಿವಾರ ನವದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯ 2ನೇ ಸಭೆಯಲ್ಲಿ, ಅಕ್ರಮ ವಿದೇಶಿಯರನ್ನು ಗುರುತಿಸಬೇಕು. ಆದರೆ ಯಾವುದೇ ಭಾರತೀಯ ನಾಗರಿಕರನ್ನು ಈ ಪಟ್ಟಿಯಿಂದ ಹೊರಗಿಡಲು ಬಿಡಬಾರದು ಎಂಬುದಾಗಿ ನಿರ್ಣಯ ಕೈಗೊಳ್ಳುವ ಮೂಲಕ ಎನ್‌ಆರ್‌ಸಿಯ ಮೇಲೆ ತನ್ನ ಹಕ್ಕುಸ್ವಾಮ್ಯ ಸಾಧಿಸಿದೆ.ಸಿಡಬ್ಲೂéಸಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ವಕ್ತಾರ ರಣದೀಪ್ ಸುಜೇವಾಲಾ,1985ರಲ್ಲಿ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಅಸ್ಸಾಂ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಅದರ ಅನುಸಾರ 2005ರಲ್ಲಿ ಅಸ್ಸಾಂನ ಕಾಂಗ್ರೆಸ್ ಸರ್ಕಾರ ಅಕ್ರಮವಾಗಿ ವಲಸೆ ಬಂದ ವಿದೇಶಿಯರನ್ನು ಗುರುತಿಸುವ ಎನ್‌ಆರ್‌ಸಿ ಪ್ರಕ್ರಿಯೆಗೆ ಚಾಲನೆ ನೀಡಿತ್ತು. 2009ರಲ್ಲಿ ಕೇಂದ್ರದಮನಮೋಹನ್ ಸಿಂಗ್ ಸರ್ಕಾರ 489 ಕೋಟಿ ರೂ. ಅನುದಾನ ನೀಡಿ 25,000 ಸಿಬ್ಬಂದಿಯನ್ನು ಈ ಕಾರ್ಯಕ್ಕೆ ನಿಯೋಜಿಸಿತ್ತು.ತರುಣ್ ಗೊಗೋಯ್ ಸರ್ಕಾರ 2016ರ ಮೇ ವೇಳೆ ಎನ್‌ಆರ್‌ಸಿಯ ಶೇ.80ರಷ್ಟು ಕಾರ್ಯವನ್ನು ಪೂರೈಸಿತ್ತು ಎಂದು ಹೇಳಿದ್ದಾರೆ.ಯುಪಿಎ ಅವಧಿಯಲ್ಲಿ 2005ರಿಂದ 2013ರ ತನಕ82,728 ವಿದೇಶಿಯರನ್ನು (ಬಾಂಗ್ಲಾದೇಶಿಗಳು) ಗಡಿಪಾರು ಗೊಳಿಸಲಾಗಿತ್ತು. ಎನ್‌ಡಿಎ ಕಳೆದ ನಾಲ್ಕು ವರ್ಷಗಳಲ್ಲಿ ಕೇವಲ 1,822 ವಿದೇಶಿ ರಾಷ್ಟ್ರೀಯರನ್ನು ಹೊರದಬ್ಬಿದೆ.ಇದೀಗ ಬಿಜೆಪಿ ಚುನಾವಣಾ ಲಾಭಕ್ಕೋಸ್ಕರ ಈವಿಷಯವನ್ನು ರಾಜಕೀಯಗೊಳಿಸುತ್ತಿದೆ ಎಂದು ಸುರ್ಜೆವಾಲಾ ಟೀಕಿಸಿದರು. ತಮ್ಮ ಪೌರತ್ವವವನ್ನುಸಾಬೀತುಗೊಳಿಸಲು ಪ್ರತಿ ಭಾರತೀಯರಿಗೂ ಕಾಂಗ್ರೆಸ್ ನೆರವಾಗಲಿದೆ ಎಂದೂ ಇದೇ ವೇಳೆ ಅವರು ಹೇಳಿದರು.
40 ಲಕ್ಷ ಮಂದಿಯನ್ನು ಅಕ್ರಮ ವಲಸಿಗರು ಎಂದುಗುರುತಿಸಿ ಅಸ್ಸಾಂ ಸರ್ಕಾರ ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ)ಯ ಎರಡನೇ ಕರಡು ಪಟ್ಟಿ ಪ್ರಕಟಿಸಿದ ಬೆನ್ನಲ್ಲೇ ರಾಜಕೀಯ ವಿವಾದ ಹುಟ್ಟಿಕೊಂಡಿತ್ತು.
ಸಿಡಬ್ಲೂಸಿ ಸಭೆಗೆ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗೈರುಹಾಜರಾಗಿ ದ್ದರು. ಮನ ಮೋಹನ್ ಸಿಂಗ್, ಎ.ಕೆ.ಆಂಟನಿ, ಗುಲಾಂ ನಬಿ ಆಜಾದ್, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಅಹಮದ್ ಪಟೇಲ್, ಅಶೋಕ್ ಗೆಹಲೋಟ್ ಮತ್ತಿತರ ನಾಯಕರು ಪಾಲ್ಗೊಂಡಿದ್ದರು.
Related Articles
ಸನ್ನಿವೇಶ ದ ಬಗ್ಗೆ ಚರ್ಚಿಸಿದೆವು. ಕೇಂದ್ರದ ಭ್ರಷ್ಟಾಚಾರ, ಯುವಕರಿಗೆ ಉದ್ಯೋಗ ಒದಗಿಸುವಲ್ಲಿನ ವೈಫಲ್ಯವನ್ನು ಬಿಂಬಿಸುವಲ್ಲಿಕಾಂಗ್ರೆಸ್‌ಗಿರುವ ಭಾರೀ ಅವಕಾಶದ ಕುರಿತು
ಚರ್ಚೆ ನಡೆಸಲಾಯಿತು
ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ
Advertisement