Advertisement

ಅಸ್ಸಾಂ ಎನ್‌ಆರ್‌ಸಿ ಸಂಪೂರ್ಣ ನಿಷ್ಪಕ್ಷ; ಅತಂಕ ಬೇಡ: ರಾಜನಾಥ್‌

12:21 PM Jul 30, 2018 | Team Udayavani |

ಹೊಸದಿಲ್ಲಿ : ಅಸ್ಸಾಂ ಪ್ರಜೆಗಳ ರಾಷ್ಟ್ರೀಯ ಕರಡು ದಾಖಲೆ ಸಂಪೂರ್ಣವಾಗಿ ನಿಷ್ಪಕ್ಷವಾಗಿದ್ದು ಇದರಲ್ಲಿ ಹೆಸರು ಸೇರ್ಪಡೆಯಾಗದವರು ಆತಂಕ ಪಡುವ ಅಗತ್ಯವಿಲ್ಲ ; ಅಂತಹವರಿಗೆ ತಮ್ಮ ಭಾರತೀಯ ಪೌರತ್ವ ಸಾಬೀತುಪಡಿಸಲು ಅವಕಾಶ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

Advertisement

ಇಂದು ಪ್ರಕಟಿಸಲಾಗಿರುವ ಅಸ್ಸಾಂ ಎನ್‌ಆರ್‌ಸಿ ಕರಡು ದಾಖಲೆಯಲ್ಲಿ ಸುಮಾರು 40ಲಕ್ಷ ರಾಜ್ಯದ ನಿವಾಸಿಗಳ ಹೆಸರು ಕಂಡು ಬಂದಿಲ್ಲ; ಇದು ಜನರಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ. 

ಈ ಸಂಬಂಧ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ರಾಜನಾಥ್‌ ಸಿಂಗ್‌, “ಯಾರ ವಿರುದ್ದವೂ ಯಾವುದೇ ರೀತಿಯ ಬಲವಂತದ ಕ್ರಮ ತೆಗೆದುಕೊಳ್ಳಲಾಗುವುದಿಲ್ಲ; ಆದುದರಿಂದ ಯಾರೂ ಆತಂಕ ಪಡಬೇಕಾಗಿಲ್ಲ’ ಎಂದು ಹೇಳಿದರು. 

”ಅಂತಿಮ ದಾಖಲೆ ಪತ್ರಗಳಲ್ಲಿ ಯಾರ ಹೆಸರು ಇಲ್ಲವೋ ಅವರು ವಿದೇಶೀಯರ ನ್ಯಾಯಮಂಡಳಿಯನ್ನು ಸಂಪರ್ಕಿಸುವುದಕ್ಕೆ ಅವಕಾಶ ಇರುತ್ತದೆ; ಕೆಲವರು ಅನಗತ್ಯವಾಗಿ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಅಸ್ಸಾಂ ಎನ್‌ಆರ್‌ಸಿ ಕರಡು ದಾಖಲೆ ಪತ್ರಗಳು ಸಂಪೂರ್ಣವಾಗಿ ನಿಷ್ಪಕ್ಷದ್ದಾಗಿವೆ; ಈ ಬಗ್ಗೆ ಯಾರೂ ಯಾರಲ್ಲೂ ತಪ್ಪು ಅಭಿಪ್ರಾಯ ಹರಡಬಾರದು; ಇದಿನ್ನೂ ಕರಡು ದಾಖಲೆ ಪತ್ರ; ಅಂತಿಮ ಅಲ್ಲ” ಎಂದು ರಾಜನಾಥ್‌ ಸಿಂಗ್‌ ಸ್ಪಷ್ಟಪಡಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next