Advertisement

ಹಿಂದು-ಮುಸ್ಲಿಂ ಎನ್‌ಆರ್‌ಸಿ ಸರಿಯಲ್ಲ; ಬಿಜೆಪಿಗೆ ಮಮತಾ ತರಾಟೆ

06:47 PM Aug 14, 2018 | Team Udayavani |

ಕೋಲ್ಕತ : ಜನರನ್ನು ಧರ್ಮ ಮತ್ತು ಭಾಷೆಯ ನೆಲೆಯಲ್ಲಿ ಪ್ರತ್ಯೇಕಿಸಿ ಎನ್‌ಆರ್‌ಸಿ (ರಾಷ್ಟ್ರೀಯ ಪೌರರ ರಿಜಿಸ್ಟ್ರಿ) ಯಿಂದ ಹೊರಗಿಡಲಾಗುತ್ತಿದೆ ಎಂದು ಆರೋಪಿಸಿರುವ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇದಕ್ಕಾಗಿ ಭಾರತೀಯ ಜನತಾ ಪಕ್ಷವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ, ಎನ್‌ಆರ್‌ಸಿ ಯನ್ನು ಹಿಂದು – ಮುಸ್ಲಿಂ ನೆಲೆಯಲ್ಲಿ ಮಾಡಕೂಡದು ; ಇದು ಪೌರತ್ವಕ್ಕೆ ಸಂಬಂಧಿಸಿದಂತೆ ಅತ್ಯಂತ ನಿರ್ಣಾಯಕವಾದ ಪ್ರಶ್ನೆಯಾಗಿದೆ ಎಂದು ಹೇಳಿದರು. 

ಬಿಜೆಪಿಯವರು ಎನ್‌ಆರ್‌ಸಿಯನ್ನು ಸಮರ್ಥಿಸಿಕೊಳ್ಳಲು ಎಲ್ಲ ರೀತಿಯಲ್ಲಿ ಯತ್ನಿಸುತ್ತಿದ್ದಾರೆ. ಆದರೆ ಎನ್‌ಆರ್‌ಸಿಯನ್ನು ಹಿಂದು ಮುಸ್ಲಿ ನೆಲೆಯಲ್ಲಿ, ಭಾಷೆಯ ನೆಲೆಯಲ್ಲಿ ಮಾಡುವುವುದು ಸರಿಯಲ್ಲ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next