Advertisement

ಮಣಿಪುರ : ಬಿಜೆಪಿ ಸರಕಾರಕ್ಕೆ ನೀಡಿರುವ ಬೆಂಬಲ ಪುನರ್‌ ವಿಮರ್ಶೆ : ಎನ್‌ಪಿಎಫ್

09:38 AM May 18, 2019 | Sathish malya |

ಇಂಫಾಲ : ರಾಜ್ಯದಲ್ಲಿನ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರಕಾರದ ಪಾಲುದಾರನಾಗಿರುವ ನಾಗಾ ಪೀಪಲ್ಸ್‌ ಫ್ರಂಟ್‌ (ಎನ್‌ಪಿಎಫ್) ತಾನು ಸರಕಾರದಲ್ಲಿ ಮುಂದುವರಿಯಬೇಕೇ ಅಥವಾ ಬೆಂಬಲವನ್ನು ಹಿಂದೆಗೆಯಬೇಕೇ ಎಂಬುದನ್ನು ನಿರ್ಧರಿಸಲು ಇಂದು ಶನಿವಾರ ತನ್ನ ನಾಯಕರ ಸಭೆಯನ್ನು ಕರೆದಿದೆ.

Advertisement

ಬಿಜೆಪಿ ತನ್ನ ಆಲೋಚನೆ, ಸಲಹೆ, ಸೂಚನೆಗಳಿಗೆ ಕವಡೆ ಕಿಮ್ಮತ್ತು ಕೊಡುತ್ತಿಲ್ಲ ಎಂದು ಎನ್‌ಪಿಎಫ್ ಆರೋಪಿಸಿದೆ.

ಆದರೆ ಎನ್‌ಪಿಎಫ್ ನ ಈ ಆರೋಪವನ್ನು ಬಿಜೆಪಿ ಅಲ್ಲಗಳೆದಿದೆ. ಮೈತ್ರಿ ಸರಕಾರ ಸಾಂಗವಾಗಿ ನಡೆಯಲು ತಾನು ಮಿತ್ರ ಪಕ್ಷ ಎನ್‌ಪಿಎಫ್ ಗೆ ಎಲ್ಲ ರೀತಿಯ ಸಹಕಾರ, ಸೌಕರ್ಯಗಳನ್ನು ನೀಡಿದ್ದೇನೆ ಎಂದು ಹೇಳಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ನಾಗಾ ಪೀಪಲ್ಸ್‌ ಫ್ರಂಟ್‌ (ಎನ್‌ಪಿಎಫ್) ನ ರಾಜ್ಯ ಘಟಕದ ಅಧ್ಯಕ್ಷ ಅವಾಂಗ್‌ಬೋ ನೇವಮಯಿ ಅವರು “ಬಿಜೆಪಿ ತನ್ನ ಮಿತ್ರ ಪಕ್ಷಗಳನ್ನು ಸಣ್ಣದಾಗಿ ಕಾಣತ್ತಿದ್ದು ಅವುಗಳಿಗೆ ಯಾವುದೇ ಮಹತ್ವ ನೀಡುತ್ತಿಲ್ಲ’ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next