Advertisement

ಹೆಚ್ಚಾದ ಬ್ಯಾಂಕ್‌ಗಳ ಎನ್‌ಪಿಎ ಪ್ರಮಾಣ

03:45 AM Jul 01, 2017 | Harsha Rao |

ಮುಂಬೈ/ನವದೆಹಲಿ: ಶನಿವಾರದಿಂದ ಹೊಸ ತೆರಿಗೆ ಪದ್ಧತಿ ಜಾರಿಯಾಗಿರುವಂತೆಯೇ ಆರ್‌ಬಿಐ ಮತ್ತೆ ಬ್ಯಾಂಕ್‌ಗಳಲ್ಲಿ ಅನುತ್ಪಾದಕ ಆಸ್ತಿ ಶೇ.10ರಷ್ಟು ಹೆಚ್ಚಾಗಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಹಾಲಿ ವರ್ಷದ ಮಾರ್ಚ್‌ ಮುಕ್ತಾಯಕ್ಕೆ ಅನುತ್ಪಾದಕ ಆಸ್ತಿ ಶೇ.9.6ಕ್ಕೆ ಹೆಚ್ಚಿದೆ. ಮುಂದಿನ ವರ್ಷದ ಮಾರ್ಚ್‌ಗೆ ಅದರ ಪ್ರಮಾಣ ಶೇ.10.2ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವರಿಷ್ಠ ಬ್ಯಾಂಕ್‌ ಕಳವಳ ವ್ಯಕ್ತಪಡಿಸಿದೆ. 2016ರ ಸೆಪ್ಟೆಂಬರ್‌ನಲ್ಲಿ ಅದರ ಪ್ರಮಾಣ ಶೇ.9.2 ಇತ್ತು. ಬ್ಯಾಂಕ್‌ಗಳ ನಿವ್ವಳ ಅನುತ್ಪಾದಕ ಆಸ್ತಿ (ಎನ್‌ಎನ್‌ಪಿಎ) ಕಳೆದ ಸೆಪ್ಟೆಂಬರ್‌ನಿಂದ ಹಾಲಿ ವರ್ಷದ ಮಾರ್ಚ್‌ ವರೆಗೆ ಶೇ.5.5ರಷ್ಟು ಹೆಚ್ಚಾಗಿದೆ.

Advertisement

ಬೆಳವಣಿಗೆ ಕುಂಠಿತ: ಮತ್ತೂಂದೆಡೆ ಸರಕು ಮತ್ತು ಸೇವಾ ತೆರಿಗೆ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಸುಸ್ಥಿರವಾದ ರಾಜಕೀಯ ಬೆಳವಣಿಗೆ ಇರುವುದರಿಂದ ದೇಶದ ಅರ್ಥ ವ್ಯವಸ್ಥೆಯ ಬೆಳವಣಿಗೆ ಹಾಲಿ ಹಣಕಾಸು ವರ್ಷದಲ್ಲಿ ಶೇ.7.3ಕ್ಕೆ ನಿಗದಿಯಾಗಲಿದೆ. ಶುಕ್ರವಾರ ಬಿಡುಗಡೆ ಮಾಡಲಾಗಿರುವ ಅರ್ಥವ್ಯವಸ್ಥೆಯ ಸ್ಥಿರೀಕರಣ ವರದಿಯಲ್ಲಿ ಅದನ್ನು ಉಲ್ಲೇಖೀಸಲಾಗಿದೆ. ಹಣದುಬ್ಬರದ ಬಗ್ಗೆ ಉಲ್ಲೇಖೀಸಿರುವ ಗ್ರಾಹಕ ದರ ಸೂಚ್ಯಂಕ (ಸಿಪಿಐ) ಶೇ.2ರಿಂದ ಶೇ.3.5ಕ್ಕೆ ಹಾಲಿ ಹಣಕಾಸು ವರ್ಷದ ಆರಂಭದಲ್ಲಿ ನಿಲ್ಲಲಿದ್ದರೆ, ಎರಡನೇ ಹಂತದಲ್ಲಿ ಶೇ.3.5 ರಿಂದ ಶೇ.4.5ಕ್ಕೆ ಏರಿಕೆಯಾಗಲಿದೆ ಎಂದು ಹೇಳಿದೆ.

ಎಂಟು ಕ್ಷೇತ್ರಗಳ ಬೆಳವಣಿಗೆ ಕುಸಿತ: ಈ ನಡುವೆ ಕಳೆದ ತಿಂಗಳ ಮುಕ್ತಾಯದಲ್ಲಿ ಎಂಟು ಪ್ರಮುಖ ವಲಯಗಳಲ್ಲಿನ ಬೆಳವಣಿಗೆ ಶೇ.3.6ಕ್ಕೆ ಕುಸಿದಿದೆ. ಕಲ್ಲಿದ್ದಲು, ಕಚ್ಚಾ ತೈಲ, ರಸಗೊಬ್ಬರ, ನೈಸರ್ಗಿಕ ಅನಿಲ, ರಿಫೈನರಿ ವಸ್ತುಗಳು, ಸ್ಟೀಲ್‌, ಸಿಮೆಂಟ್‌ ಮತ್ತು ವಿದ್ಯುತ್‌ ಕುಸಿತಗೊಂಡ ಕ್ಷೇತ್ರಗಳು. ಕಳೆದ ವರ್ಷದ ಇದೇ ಅವಧಿಯಲ್ಲಿ ಈ ಕ್ಷೇತ್ರಗಳ ಬೆಳವಣಿಗೆ ಶೇ.5.2 ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next