Advertisement

ಎನ್‌ಪಿಎ ಇಳಿಕೆ: ಆರ್‌ಬಿಐ

12:30 AM Jan 01, 2019 | |

ಮುಂಬಯಿ: ಬ್ಯಾಂಕ್‌ಗಳ ಮರು ಪಾವತಿಯಾಗದ ಸಾಲದ ಪ್ರಮಾಣ ಇಳಿಕೆಯಾಗುತ್ತಿದ್ದು, ಪ್ರಗತಿಯ ಹಾದಿಯಲ್ಲಿವೆ. ಆದರೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಇನ್ನೂ ಆಡಳಿತದಲ್ಲಿ ಸುಧಾರಣೆ ಸಾಧಿಸಬೇಕಿದೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಸೋಮವಾರ ಹೇಳಿದ್ದಾರೆ. ಅತ್ಯಂತ ಕ್ಷೀಣವಾಗಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಮರು ಬಂಡವಾಳ ಒದಗಿಸಬೇಕಿದೆ ಎಂದು ಅರ್ಧವಾರ್ಷಿಕ ಆರ್ಥಿಕ ಸ್ಥಿರತೆ ವರದಿಯ ಮುನ್ನುಡಿಯಲ್ಲಿ ದಾಸ್‌ ಹೇಳಿದ್ದಾರೆ. ಈ ವಿತ್ತ ವರ್ಷದ ಸೆಪ್ಟೆಂಬರ್‌ವರೆಗಿನ ಡೇಟಾ ಪ್ರಕಾರ ಎನ್‌ಪಿಎ ಇಳಿಕೆ ಕಂಡಿದೆ. 

Advertisement

ಕಳೆದ ಮೂರು ವರ್ಷಗಳಲ್ಲೇ ಮೊದಲ ಬಾರಿಗೆ ಬ್ಯಾಂಕ್‌ಗಳು ಈ ಸಾಧನೆ ಮಾಡಿವೆ. ಮಾರ್ಚ್‌ನಲ್ಲಿ ಶೇ. 11.5 ರಷ್ಟಿದ್ದ ಎನ್‌ಪಿಎ ಸಪ್ಟೆಂಬರ್‌ ನಲ್ಲಿ ಶೇ.10.8ಕ್ಕೆ ಕುಸಿದಿದೆ. ಇನ್ನೊಂದೆಡೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಎನ್‌ಪಿಎ ಮಾರ್ಚ್‌ನಲ್ಲಿ ಶೇ. 15.2 ರಷ್ಟಿತ್ತು. ಇದು ಶೇ. 14.8ಕ್ಕೆ ಕುಸಿದಿದೆ ಎಂದು ಆರ್‌ಬಿಐ ಎಫ್ಎಸ್‌ಆರ್‌ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next