Advertisement

“ಟಿಕೆಟ್‌ ತಪ್ಪಿರುವ ಸುಮಲತಾಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ’

09:52 PM Mar 24, 2024 | Team Udayavani |

ಮೈಸೂರು: ಬಿಜೆಪಿ-ಜೆಡಿಎಸ್‌ ನಡುವಿನ ಮೈತ್ರಿ ಕಾರಣದಿಂದಾಗಿ ಸುಮಲತಾ ಅಂಬರೀಷ್‌ ಅವರಿಗೆ ಟಿಕೆಟ್‌ ನೀಡಿಲ್ಲ. ಈ ಬಾರಿ ಮಂಡ್ಯ, ಹಾಸನ ಹಾಗೂ ಕೋಲಾರ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟಿರುವುದರಿಂದ ಸುಮಲತಾಗೆ ಬಿಜೆಪಿ ಟಿಕೆಟ್‌ ಕೈತಪ್ಪಿದೆ.

Advertisement

ಆದರೆ ಸುಮಲತಾ ಅವರೊಂದಿಗೆ ಜೆ.ಪಿ.ನಡ್ಡಾ, ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್‌ ಶಾ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ನೀಡುವುದಾಗಿ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್‌ ದಾಸ್‌ ಅಗರವಾಲ್‌ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುಮಲತಾ ನಮ್ಮ ಜತೆಯಲ್ಲೇ ಇರುತ್ತಾರೆ. ಕಳೆದ ಐದು ವರ್ಷದಿಂದ ಅವರು ನಮ್ಮ ಜತೆಯೇ ಇದ್ದರು. ಮುಂದಿನ ಐದು ವರ್ಷವೂ ನಮ್ಮ ಜತೆಯಲ್ಲೇ ಮುಂದುವರಿಯುತ್ತಾರೆ ಎಂದರು. ಟಿಕೆಟ್‌ ಹಂಚಿಕೆಯಲ್ಲಿ ಉಂಟಾಗಿರುವ ಎಲ್ಲ ಗೊಂದಲಗಳು ಬಗೆಹರಿಯಲಿವೆ. ಟಿಕೆಟ್‌ ಸಿಗದೆ ಬಂಡಾಯ ಎದ್ದಿರುವ ಹಿರಿಯ ನಾಯಕರ ಮನವೊಲಿಕೆ ಕಾರ್ಯ ಮುಂದುವರಿದಿದ್ದು, ಎಲ್ಲವೂ ಸರಿಹೋಗಲಿದೆ. ಬಿಜೆಪಿ-ಜೆಡಿಎಸ್‌ ಮೈತ್ರಿಕೂಟ ಕರ್ನಾಟಕದ 28 ಕ್ಷೇತ್ರಗಳಲ್ಲೂ ಜಯ ಗಳಿಸಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next